ವರ್ಷಾಂತ್ಯದ ರಜೆಗಳು: ಬ್ಯಾಂಕ್ ಕೆಲಸ ಈ 4 ದಿನಗಳಲ್ಲಿ ಮುಗಿಸಿಕೊಳ್ಳಿ
2025 ವರ್ಷ ಇನ್ನೇನು ಕೇವಲ 12 ದಿನಗಳಲ್ಲಿ ಮುಕ್ತಾಯವಾಗುತ್ತಿದೆ. ಈ ವರ್ಷ ಈಗಷ್ಟೇ ಪ್ರಾರಂಭವಾದಂತಿದೆ. ಅಷ್ಟರಲ್ಲಿ ನಾವು 2026ನೇ ವರ್ಷಕ್ಕೆ ಕಾಲಿರಿಸುತ್ತಿದ್ದೇವೆ. ಹೊಸ ವರ್ಷ ಪ್ರಾರಂಭ ಹಾಗೂ ವರ್ಷಾಂತ್ಯವಾಗಿರುವುದರಿಂದ ಸಾಲು ಸಾಲು ಬ್ಯಾಂಕ್ ರಜೆಗಳು ಇವೆ. ಕ್ರಿಸ್‌ಮಸ್ ಹಾಗೂ ವರ್ಷಾಂತ್ಯದ ರಜೆಗಳು ಕಾರಣಕ್ಕೆ ಇನ್ನು 4 ದಿನಗಳು ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ. ಹೀಗಾಗಿ, ಈ ನಾಲ್ಕು ದಿನಗಳಲ್ಲಿ ನಿಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಯಾವಾಗ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿವೆ ಹಾಗೂ ಯಾವ ದಿನ ಬ್ಯಾಂಕ್ ರಜೆ ಇರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
2026ನೇ ಸಾಲಿನ ವರ್ಷ ಪ್ರಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವುದಕ್ಕೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಭಾರೀ ಭರ್ಜರಿ ಸಿದ್ಧತೆ ನಡೆದಿದೆ. ವರ್ಷಾಂತ್ಯವಾಗಿರುವುದರಿಂದ ಬ್ಯಾಂಕ್ ಸೇರಿದಂತೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಬೆರಳೆಣಿಕೆ ದಿನಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿವೆ. ಈ ರೀತಿಯ ವಿಶೇಷ ಸಂದರ್ಭಗಳಲ್ಲಿ ಬ್ಯಾಂಕ್ ಕೆಲಸಗಳನ್ನು ಮುಂಚಿತವಾಗಿ ಮಾಡಿ ಮುಗಿಸಿಕೊಳ್ಳುವುದು ಉತ್ತಮ.

ಕೆಲವು ಕ್ಷೇತ್ರಗಳಲ್ಲಿ ಸಿಬ್ಬಂದಿ ವರ್ಷಾಂತ್ಯದಲ್ಲಿ ಪ್ರವಾಸ ಹಾಗೂ ವರ್ಷದ ರಜೆಗಳನ್ನು ತೆಗೆದುಕೊಳ್ಳುವುದರಿಂದಲೂ ಸೀಮಿತ ಸಿಬ್ಬಂದಿ ಇರುವ ಸಾಧ್ಯತೆಯೂ ಇದೆ. ಸರ್ಕಾರಿ, ಅರೆ ಸರ್ಕಾರಿ, ಬ್ಯಾಂಕ್ ನೌಕರರು ಮತ್ತು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ರಜೆಗಳ ಪ್ಲ್ಯಾನ್ ಮಾಡಿಕೊಂಡಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಬ್ಯಾಂಕಿಂಗ್ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಸೀಮಿತ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇನ್ನು ಹೊಸ ವರ್ಷ ಪ್ರಾರಂಭವಾಗುವುದಕ್ಕೆ 12 ದಿನಗಳು ಉಳಿದಿವೆಯಾದರೂ, ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿರುವುದು ಕೇವಲ 3 ದಿನಗಳು ಮಾತ್ರ.
ಡಿಸೆಂಬರ್ 24ರಂದು ಕ್ರಿಸ್‌ಮಸ್ ಈವ್ ಮತ್ತು ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಕೂಡ ಬಂದಿದೆ. ಡಿಸೆಂಬರ್ 19ರ ಶುಕ್ರವಾರ ಎಂದಿನಂತೆ ಬ್ಯಾಂಕ್‌ಗಳು ಸೇರಿದಂತೆ ಎಲ್ಲಾ ಖಾಸಗಿ ಸಂಸ್ಥೆಗಳು ತೆರೆದಿರಲಿವೆ. ಡಿಸೆಂಬರ್ 20ರ ಶನಿವಾರ ಬಹುತೇಕ ಖಾಸಗಿ ಸಂಸ್ಥೆಗಳಿಗೆ ರಜೆ ಇರಲಿದ್ದು, ಡಿಸೆಂಬರ್ 21 ಭಾನುವಾರ ಎಂದಿನಂತೆ ಬ್ಯಾಂಕ್‌ಗಳಿಗೆ ರಜಾ ಇರಲಿದೆ.
ಈ ಮೂರು ದಿನಗಳಲ್ಲಿ ಬ್ಯಾಂಕ್ ಕೆಲಸ ಮುಗಿಸಿಕೊಳ್ಳಿ
ಇನ್ನು ಬ್ಯಾಂಕ್ ಕೆಲಸಗಳಿಗೆ ಕೇವಲ ನಾಲ್ಕು ದಿನಗಳು ಸಿಗಲಿವೆ. ಡಿಸೆಂಬರ್ 24 ಕ್ರಿಸ್‌ಮಸ್ ಈವ್ ಹಾಗೂ 25ರಂದು ಕ್ರಿಸ್‌ಮಸ್ ಇರುವುದರಿಂದ ಸಾರ್ವತ್ರಿಕ ರಜೆ ಇರಲಿದೆ. ಡಿಸೆಂಬರ್ 27 ನಾಲ್ಕನೇ ಶನಿವಾರ ಹಾಗೂ ಡಿಸೆಂಬರ್ 28ರಂದು ಭಾನುವಾರ ಇರಲಿದ್ದು ಎಂದಿನಂತೆ ಈ ದಿನಗಳಲ್ಲಿ ಬ್ಯಾಂಕ್ ರಜೆ ಇರಲಿದೆ. ಹೀಗಾಗಿ, ಈ 12 ದಿನಗಳಲ್ಲಿ ನಾಲ್ಕು ದಿನಗಳಲ್ಲಿ ಮಾತ್ರ ಬ್ಯಾಂಕ್ ಕಾರ್ಯ ನಿರ್ವಹಿಸಲಿವೆ. ಡಿಸೆಂಬರ್ 19, 22, 23 ಹಾಗೂ 26 ರಂದು ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಅಲ್ಲದೇ ಡಿಸೆಂಬರ್ 29, 30 ಹಾಗೂ 31 ರಂದು ಬ್ಯಾಂಕ್ ಕಾರ್ಯ ನಿವರ್ಹಿಸಲಿವೆ. ಆದರೆ ಸೀಮಿತ ಸಿಬ್ಬಂದಿ ಇರುವ ಸಾಧ್ಯತೆ ಇರುವುದರಿಂದ ಬ್ಯಾಂಕ್ ಕೆಲಸಗಳು ಈ ದಿನಗಳಲ್ಲಿ ತಡವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications