ಟಿಸಿಎಸ್: 25000 ಟೆಕ್ಕಿಗಳಿಗೆ ಕ್ಯಾಂಪಸ್ ನೇಮಕಾತಿ

ಬೆಂಗಳೂರು, ನ.22: ದೇಶದ ಅತಿ ದೊಡ್ಡ ಸಾಫ್ಟ್ ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ 25000 ಟೆಕ್ಕಿಗಳ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ. outsourcing servicesಗೆ ಭಾರಿ ಬೇಡಿಕೆ ಬಂದಿರುವುದೇ ಈ ನೇಮಕಕ್ಕೆ ಕಾರಣವಾಗಿದೆ.

ಶೇ. 33 ಮಂದಿ ಮಹಿಳೆಯರೇ: ಕಂಪನಿಯು ಮೊದಲ ತ್ರೈಮಾಸಿಕದಲ್ಲಿ 10,611 ಟೆಕ್ಕಿಗಳನ್ನು ಮತ್ತು ದ್ವಿತೀಯ ತ್ರೈಮಾಸಿಕದಲ್ಲಿ 17,362 ಒಟ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 4,702 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ. 34ರಷ್ಟು ಏರಿಕೆ ದಾಖಲಿಸಿದೆ. TCSನಲ್ಲಿ ಪ್ರಸ್ತುತ ಒಟ್ಟು 2,85,250 ಮಂದಿ ಸಿಬ್ಬಂದಿಯಿದ್ದಾರೆ. ಇದರಲ್ಲಿ ಶೇ. 33 ಮಂದಿ ಮಹಿಳೆಯರೇ ಇದ್ದಾರೆ.

Bangalore TCS campus selection for 25000 trainee techies by February 2014

'ಏಳನೆಯ ಸೆಮಿಸ್ಟರಿನಲ್ಲಿ ಓದುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ವಾಡಿಕೆಯಂತೆ ನೇಮಕಾತಿ ಮಾಡಿಕೊಳ್ಳುತ್ತೇವೆ. ಈ ಬಾರಿಯೂ ಆ ಪ್ರಕ್ರಿಯೆ ಆರಂಭವಾಗಿದೆ. ಟ್ರೈನಿ ಸಾಫ್ಟ್ ವೇರ್ ಇಂಜಿನಿಯರುಗಳಾಗಿ 25,000 ಮಂದಿಯನ್ನು ನೇಮಿಸಿಕೊಳ್ಳುತ್ತಿದ್ದೇವೆ' ಎಂದು ಬೆಂಗಳೂರು ಮೂಲದ Tata Consultancy Services (TCS) ಕಂಪನಿ ಮಾನವ ಸಂಪನ್ಮೂಲ ಮುಖ್ಯಸ್ಥ ಅಜೊಯ್ ಮುಖರ್ಜಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇಶದ ನಾನಾ ಇಂಜಿನಿಯರಿಂಗ್ ಕಾಲೇಜುಗಳಿಗೆ ತೆರಳಿ ಶೀಘ್ರದಲ್ಲೇ ಈ ಪ್ರಕ್ರಿಯೆ ಆರಂಭಿಸಲಿದ್ದೇವೆ. ಜುಲೈ ವೇಳೆಗೆ 25,000 ಮಂದಿ ನಮ್ಮ ಕಾರ್ಯಪಡೆಗೆ ಸೇರ್ಪಡೆಯಾಗಲಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಹೀಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ನೇಮಗೊಂಡ ಟ್ರೈನಿ ಟೆಕ್ಕಿಗಳಿಗೆ ವಾರ್ಷಿಕ 3 ಲಕ್ಷಕ್ಕೂ ಅಧಿಕ ಪಗಾರ ನೀಡುವುದಾಗಿ ಅವರು ತಿಳಿಸಿದರು.

ಆರಂಭದಲ್ಲಿ ಒಟ್ಟು 45,000 ಮಂದಿಯನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ಈಗ ವಾಸ್ತವವಾಗಿ ಇನ್ನೂ ಐದು ಸಾವಿರಕ್ಕೂ ಹೆಚ್ಚು ಮಂದಿಯನ್ನು (FY-14 ವೇಳೆಗೆ) ನೇಮಕ ಮಾಡಿಕೊಳ್ಳಲಿದ್ದು ಒಟ್ಟು 50,000 ಮಂದಿ ಟ್ರೈನಿ ಮತ್ತಿತರ ಸಾಫ್ಟ್ ವೇರ್ ಇಂಜಿನಿಯರುಗಳು ಕಂಪನಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಅಜೊಯ್ ಮುಖರ್ಜಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+