ಬೆಂಗಳೂರು: ರೇಪ್ ಮಾಡಿದ ಆಟೋ ಚಾಲಕ ಪರಾರಿ

Bangalore- Rapist auto driver Surya absconding
ಬೆಂಗಳೂರು, ಫೆ.22: ಪರಿಚಯಸ್ಥ ಯುವಕನ ಹೊಸ ಮನೆಯಲ್ಲಿ ಪೂಜೆಗೆಂದು ಹೋದ ಯುವತಿಯ ಮೇಲೆ ಪೂಜೆಯಾದ ನಂತರ ಯುವಕ ಅತ್ಯಾಚಾರ ಎಸಗಿ, ಸ್ಥಳದಿಂದ ಕಾಲ್ಕಿತ್ತ ಪ್ರಕರಣ ಬೆಂಗಳೂರಿನ ಜೆಜೆ ನಗರದ ರಂಗನಾಥ ಕಾಲೊನಿಯಲ್ಲಿ ಕಳೆದ ಭಾನುವಾರ ನಡೆದಿದೆ.

ಆಟೋ ಚಾಲಕ, 22 ವರ್ಷದ ಸೂರ್ಯ ಎಂಬ ಯುವಕ ಆರೋಪಿ. ಯುವತಿಯ ಪೋಷಕರು ನೀಡಿದ ದೂರಿನನ್ವಯ ಜೆಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವಕನ ತಲಾಶೆಯಲ್ಲಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಹದಿಹರೆಯದ ಯುವತಿ ಕಾಟನ್ ಪೇಟೆಯ ಆಂಜನಪ್ಪ ಗಾರ್ಡನ್ ನಿವಾಸಿ. ಈಕೆ ಗಾರ್ಮೆಂಟ್ಸ್ ಉದ್ಯೋಗಿ. 2 ತಿಂಗಳ ಹಿಂದೆ ಆರೋಪಿ ಸೂರ್ಯನ ಪರಿಚಯವಾಗಿದೆ. ಮುಂದೆ ಅದು ಪ್ರೇಮಕ್ಕೆ ತಿರುಗಿದೆ.

ಇಬ್ಬರೂ ಒಟ್ಟಾಗಿ ಊಟಿ, ಕನ್ಯಾಕುಮಾರಿ ಪ್ರವಾಸಕ್ಕೂ ಹೋಗಿಬಂದಿದ್ದರು ಎನ್ನಲಾಗಿದೆ. ಈ ವಿಷಯ ಯುವತಿಯ ಪೋಷಕರಿಗೆ ಗೊತ್ತಾಗಿ ಗಲಾಟೆಯಾಗಿದೆ. ನಂತರ ಮುಖಂಡರ ಸಮ್ಮುಖದಲ್ಲಿ ಪಂಚಾಯಿತಿಯೂ ನಡೆದಿತ್ತು.

ಈ ಮಧ್ಯೆ, ಸೂರ್ಯ ರಂಗನಾಥ ಕಾಲೊನಿಯಲ್ಲಿ ಹೊಸ ಮನೆ ಮಾಡಿದ್ದು, ಫೆ. 16 ರಂದು ಹಾಲುಕ್ಕಿಸುವ ಶಾಸ್ತ್ರವಿಟ್ಟುಕೊಂಡಿದ್ದಾನೆ. ಪೂಜೆಗೆಂದು ಯುವತಿ ಮತ್ತು ಆಕೆಯ ಪಾಲಕರು ಅಲ್ಲಿಗೆ ತೆರಳಿದ್ದರು. ಸಮಯ ಸಾಧಿಸಿ, ಸೂರ್ಯ ಯುವತಿಯನ್ನು ಬೆಡ್ ರೂಮಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವತಿ ಈ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾಳೆ.

ಪೋಷಕರು, ಸೂರ್ಯನನ್ನು ಕರೆಯಿಸಿ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಸೂರ್ಯ ನಿರಾಕರಿಸಿದ್ದಾನೆ. ಒತ್ತಾಯ ಹೆಚ್ಚಾಗುತ್ತಿದ್ದಂತೆ ಅಪಾಯದ ಸುಳಿವರಿತ ಸೂರ್ಯ ಸಮಯ ಸಾಧಿಸಿ ಯಾರಿಗೂ ಹೇಳದೆ ಪರಾರಿಯಾಗಿದ್ದಾನೆ. ಪೊಲೀಸರು ಇದೀಗ ಅವನ ಬೆನ್ನು ಹತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+