ಬೆಂಗಳೂರಿನ ಕೆಲವೆಡೆ ಇಂದು ನೀರು ಬರೋಲ್ಲ

ಬೆಂಗಳೂರು, ಅ.24: ದೀಪಾವಳಿ ಸಂಭ್ರಮದಲ್ಲಿರುವ ಮಹಾನಗರದ ಕೆಲವೊಂದು ಏರಿಯಾಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನೀರು ಸರಬರಾಜು ಪೈಪ್ ಒಡೆದಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು ರಿಪೇರಿಯಾಗುವವರೆಗೆ ಕೆಲ ಬಡಾವಣೆಗಳಿಗೆ ನೀರು ಸರಬರಾಜು ಸಾಧ್ಯವಿಲ್ಲ.

ನಗಗರದ ಮಾಗಡಿ ರಸ್ತೆ ಸಮೀಪದ ಬೆಗ್ಗರ್ಸ್ ಕಾಲೋನಿ ಬಳಿ ನೀರಿನ ಪೈಪ್ ಒಡೆದಿದ್ದು ಹಲವೆಡೆ ನೀರು ಪೂರೈಕೆ ವ್ಯತ್ಯಯವಾಗಲಿದೆ. ಪೈಪ್ ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.[ಮಗುವಿನ ಮೇಲೆ ಅತ್ಯಾಚಾರ ಮಾಡಿದವನು ಗುಂಡಣ್ಣ?]

water

ಪೈಪ್ ಒಡೆದಿರುವ ಪರಿಣಾಮ ನಂದಿನಿ ಲೇಔಟ್, ರಾರಾಜಿನಗರ, ಮಾಗಡಿ ರಸ್ತೆ, ಮಹಾಲಕ್ಷ್ಮೀ ಲೇಔಟ್ ಮತ್ತು ಜೆಪಿ ನಗರದ ಸುತ್ತಮುತ್ತಲ ಭಾಗದಲ್ಲಿ ಅಕ್ಟೋಬರ್ 24 ರಂದು ನೀರು ಪೂರೈಕೆ ಯಲ್ಲಿ ವ್ಯತ್ಯಯವಾಗಲಿದೆ.

ಕಾವೇರಿ ನೀರು ಸರಬರಾಜು ಮಾಡುತ್ತಿದ್ದ 80 ವರ್ಷ ಹಳೆಯ ಪೈಪ್ ಗುರುವಾರ ಮಧ್ಯರಾತ್ರಿ ಒಡೆದು ಹೋಗಿದೆ. ತಕ್ಕಣ ಪರಿಹಾರಕ್ಕೆ ಮುಂದಾದರೂ ನೀರಿನ ರಭಸ ತಡೆಯಲಾಗಲಿಲ್ಲ. ಟ್ಯಾಂಕ್ ನಲ್ಲಿದ್ದ ಸುಮಾರು 90 ದಶಲಕ್ಷ ಲೀಟರ್ ನೀರು ಖಾಲಿಯಾದ ಮೇಲೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.[ಆರ್ಕಿಡ್ಸ್ ಶಾಲೆಯಲ್ಲಿ ಅತ್ಯಾಚಾರ, ಆರೋಪಿ ಎಲ್ಲಿ?]

ಅತ್ಯಂತ ಹಳೆಯ ಮಾದರಿ ಪೈಪ್ ಸಿಗುವುದು ದುಸ್ತರವಾಗಿದ್ದು ಜಲಮಂಡಳಿ ಕಂಪನಿಯೊಂದಕ್ಕೆ ಕೂಡಲೇ ತಯಾರು ಮಾಡಿ ನೀಡುವಂತೆ ತಿಳಿಸಿದೆ. ಒಂದು ವೇಳೆ ಶುಕ್ರವಾರ ಸಂಪೂರ್ಣ ದುರಸ್ತಿ ಸಾಧ್ಯವಾಗಿದ್ದರೆ ಕೆಲ ಬಡವಣೆಗಳ ಜನರು ಶನಿವಾರವೂ ನೀರಿಗೆ ಪರದಾಡಬೇಕಿದೆ.

ಗುರುವಾರ ರಾತ್ರಿ 36 ಇಂಚಿನ ನೀರಿನ ಪೈಪ್ ಒಡೆದಿತ್ತು. ತಕ್ಷಣ ಕಾರ್ಯನಿರತರಾದರೂ ದುರಸ್ತಿ ಸಾಧ್ಯವಾಗಿಲ್ಲ. ಅಲ್ಲದೇ ಆಗಾಗ ಬೀಳುತ್ತಿದ್ದ ಮಳೆ ಸಹ ಕೆಲಸಕ್ಕೆ ಅಡ್ಡಿಯಾಗಿ ಪರಿಣಿಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+