ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗಣೇಶ ಉತ್ಸವ: ವಾಸುಕಿ ವೈಭವ್, ಚಿನ್ಮಯಿ ಸಂಗೀತ

|
Google Oneindia Kannada News

ಬೆಂಗಳೂರು, ಆಗಸ್ಟ್ 29: ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ- ಬೆಂಗಳೂರು ಗಣೇಶ ಉತ್ಸವದ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡು, 11 ದಿನಗಳ ಉತ್ಸವದ 58 ನೇ ಆವೃತ್ತಿಯನ್ನು ಈ ವರ್ಷ ವರ್ಚುವಲ್ ಆಗಿ ನಡೆಸಲಾಗುತ್ತಿದೆ.

Recommended Video

Lakshmi Hebbalkar, ಕೆಲವು ದಿನದ ಹಿಂದೆ ಮಗ.. ಈ ವಾರ ಮಗಳ ಸಿಹಿಸುದ್ಧಿ | Oneindia Kannada

ಬೆಂಗಳೂರು ಗಣೇಶ ಉತ್ಸವದ ( ಬಿಜಿಯು) 8ನೇ ದಿನದಂದು ಮಂಜು ಡ್ರಮ್ಸ್ ಕಲೆಕ್ಟಿವ್ ಸಂಗೀತ ಸಂಜೆ ನಡೆಯಲಿದೆ. ಆಗಸ್ಟ್ 29, 2020ರಂದು ಸಂಜೆ 6.30ರಿಂದ ಮಂಜುನಾಥ್ , ಚಿನ್ಮಯಿ ಶ್ರೀಪಾದ, ಸುರೇಶ್ ಪೀಟರ್ಸ್ ಮತ್ತು ಖ್ಯಾತ ಗಾಯಕ ವಾಸುಕಿ ವೈಭವ್ ರವರ ಸಂಗೀತ ಸಂಜೆ ಜುಗಲ್ ಬಂಧಿ ನಡೆಯಲಿದ್ದು, ಸಂಗೀತಾಭಿಮಾನಿಗಳ ಗಮನ ಸೆಳೆಯಲಿದೆ.

ಈ ಬಾರಿ ಆನ್ಲೈನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ ಈ ಬಾರಿ ಆನ್ಲೈನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ

ಮಂಜು ಡ್ರಮ್ಸ್ ಕಲೆಕ್ಟಿವ್ (ಎಮ್ ಡಿ ಸಿ) ಸಂಗೀತ ಮತ್ತು ನೃತ್ಯದ ಒಂದು ಮಿಶ್ರಣವಾಗಿದ್ದು ಇದು ಪ್ರೇಕ್ಷಕರಿಗೆ ಬೆರಗುಗೊಳಿಸುವ ಅನುಭವವನ್ನು ನೀಡುತ್ತದೆ.

Bangalore Ganesh Utsav: Vasuki Vaibhav, Chinmayi Music concert

ಬೆಂಗಳೂರಿನ ತಾಳವಾದ್ಯ ಮತ್ತು ಡ್ರಮ್ಮರ್ ಪ್ರತಿಭೆ ಮಂಜುನಾಥ್ ಎನ್ ಎಸ್ ಅವರ ಕನಸಿನ ಕೂಸು ಎಂಡಿಸಿ, ಈ ವರ್ಷ ಮತ್ತೆ ಬೆಂಗಳೂರು ಗಣೇಶ ಉತ್ಸವ (ಬಿಜಿಯು)ಗೆ ಬಂದಿದೆ. ಕಳೆದ ವರ್ಷವೂ ಬೆಂಗಳೂರು ಗಣೇಶ ಉತ್ಸವದಲ್ಲಿ ಮಂಜು ಡ್ರಮ್ಸ್ ಕಲೆಕ್ಟಿವ್ (ಎಮ್ ಡಿ ಸಿ) ಪಾಲ್ಗೊಂಡು ಅಧ್ಭುತ ಕಾರ್ಯಕ್ರಮ ನೀಡಿತ್ತು. ಮನರಂಜನಾ ಉದ್ಯಮಕ್ಕೆ ತನ್ನದೇ ಆದ ರೀತಿಯಲ್ಲಿ ಗೌರವ ಸಲ್ಲಿಸಲು 'ಮಂಜು ಡ್ರಮ್ಸ್ ಕಲೆಕ್ಟಿವ್ ರಿಲೋಡ್' ಆಗಿದೆ.

Bangalore Ganesh Utsav: Vasuki Vaibhav, Chinmayi Music concert

ಸೆಪ್ಟೆಂಬರ್ 1 ರ ತನಕ ಜರುಗಲಿರುವ ಬೆಂಗಳೂರು ಗಣೇಶ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್ ಬುಕ್ , ಯೂ ಟ್ಯೂಬ್ , ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಲೈವ್ ಆಗಿ ಮೂಡಿ ಬರುತ್ತಿದೆ.

English summary
58th Bangalore Ganesh Utsav: Manju drums, Vasuki Vaibhav, Chinmayi Music concerton August 29,2020 via virtual live concert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X