ಸಿಎಂಆರ್ ನಲ್ಲಿ ಹೊಸ ಸಂಶೋಧನಾ ತರಗತಿ ಆರಂಭ
ಬೆಂಗಳೂರು, ಸೆ. 12 : ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವತ್ತ ಗಮನ ಹರಿಸಿರುವ ಸಿಎಂಆರ್ ವಿಶ್ವವಿದ್ಯಾಲಯದ ಪಿಜಿ ಮತ್ತು ಸಂಶೋಧನಾ ತರಗತಿಗಳನ್ನು ಹೊಸದಾಗಿ ಆರಂಭಿಸಿದೆ. ಹೊಸ ಕೋರ್ಸ್ ಗಳ ಉದ್ಘಾಟನಾ ಸಮಾರಂಭ ಸೆಪ್ಟಂಬರ್ 4 ರಂದು ನೆರವೇರಿತು.
ವಿಶ್ವವಿದ್ಯಾಲಯ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದು ಸ್ವಾತಕೋತ್ತರ ಪದವಿ ಪ್ರವೇಶ ಆರಂಭಿಸಿದೆ. ಈ ಬಾರಿ ಎಂಎಸ್‌ಡಬ್ಲೂ, ಎಂಎಸ್‌ಸಿ, ಎಂಕಾಂಗೆ 47 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸಂಶೋಧನಾ ಕಾರ್ಯಕ್ರಮಕ್ಕೆ ಸಂಬಂಧಿಸಿ 48 ಜನ ದಾಖಲಾತಿ ಪಡೆದುಕೊಂಡಿದ್ದಾರೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ.(ಬೆಂಗಳೂರು ವಿವಿಯ 12 ಕಾಲೇಜುಗಳಿಗೆ ಬೀಗ?)
ಉದ್ಘಾಟನೆ ನೆರವೇರಿಸಿ ಮಾತನಾಡಿದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಬೆಂಗಳೂರು ಉಪನ್ಯಾಸಕ ಡಾ.ರವಿ ಕುಮಾರ್, ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಉಳಿದ ಕಾಲೇಜುಗಳಿಗೆ ಹೋಲಿಸಿದರೆ ನಾವು ಭಿನ್ನವಾಗಿ ನಿಲ್ಲುವುದು ಇದೇ ಕಾರಣಕ್ಕೆ ಎಂದು ಹೇಳಿದರು.
ಸಂಶೋಧನೆ ಸುಲಭ ಕೆಲಸವಲ್ಲ. ಇದಕ್ಕೆ ಆಳ ಅಧ್ಯಯನ ಮತ್ತು ಪರಿಶ್ರಮ ಅಗತ್ಯ. ಸಾಂಪ್ರದಾಯಿಕ ಪದ್ಧತಿಗಳನ್ನು ತೊರೆದು ಕೆಲವೊಮ್ಮೆ ಹೊರಬರಬೇಕಾಗುತ್ತದೆ ಎಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿಎಂಆರ್ ವಿಶ್ವವಿದ್ಯಾಲಯದ ವೈಸ್ ಛಾನ್ಸೆಲರ್ ಆನಂದ ಜೋಷಿ ಮಾತನಾಡಿ, ನೂತನ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾಲೇಜಿನಲ್ಲಿ ನಡೆದುಕೊಳ್ಳಬೇಕಾದ ಬಗೆ ಮತ್ತು ಸೌಲಭ್ಯಗಳನ್ನು ವಿವರಿಸಿದರು.

ವಿದ್ಯಾರ್ಥಿನಿಯರ ಸಂಭ್ರಮ
ಸಂಶೋಧನಾ ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಭ್ರಮ.

ಇತಿಕಾ ಮಾತು
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ತಾಂಜೇನಿಯಾ ವಿಶ್ವವಿದ್ಯಾಲಯದ ಡೆಪ್ಯೂಟಿ ವೈಸ್ ಛಾನ್ಸೆಲರ್ ಜೆ,ಎಸ್.ಇತಿಕಾ.

ಹೊಸ ಪರಿಚಯ
ಕೋರ್ಸ್‌ಗಳಿಗೆ ಪ್ರವೇಶ ಪಡೆದ ನಂತರ ಪರಸ್ಪರ ಪರಿಚಯ ಮಾಡಿಕೊಂಡ ವಿದ್ಯಾರ್ಥಿಗಳು

ರವಿಕುಮಾರ್ ಕಿವಿಮಾತು
ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಬೆಂಗಳೂರು ಉಪನ್ಯಾಸಕ ಡಾ.ರವಿ ಕುಮಾರ್ ಮಾತನಾಡಿದರು.

ನೆನಪಿನ ಕಾಣಿಕೆ ವಿತರಣೆ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ನೆನಪಿನ ಕಾಣಿಕೆ ವಿತರಣೆ












Click it and Unblock the Notifications