Get Updates
Get notified of breaking news, exclusive insights, and must-see stories!

430 ಕಿಮೀ ಸಾಗಿ ಕ್ಯಾನ್ಸರ್ ರೋಗಿಗೆ ನೆರವಾದ ಕಾನ್ಸ್‌ಸ್ಟೇಬಲ್‌ಗೆ ಸೆಲ್ಯೂಟ್

ಬೆಂಗಳೂರು, ಏಪ್ರಿಲ್ 17: ಲಾಕ್‌ಡೌನ್‌ನಿಂದ ಅನೇಕರಿಗೆ ತೊಂದರೆಯಾಗಿರುವುದು ನಿಜ. ಈ ರೀತಿ ಧಾರವಾಡದಲ್ಲಿ ಕ್ಯಾನ್ಸರ್ ರೋಗಿಯೊಬ್ಬರು ಔಷಧ ಸಿಗದೆ ಪರಾದಾಡುತ್ತಿದ್ದರು. ತೊಂದರೆಯಲ್ಲಿದ್ದ ಅವರಿಗೆ ಹೆಡ್ ಕಾನ್ಸ್‌ಸ್ಟೇಬಲ್ ಕುಮಾರಸ್ವಾಮಿ ನೆರವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ಎಸ್‌ ಕುಮಾರಸ್ವಾಮಿ, ಧಾರವಾಡದ ಕ್ಯಾನ್ಸರ್ ರೋಗಿಗೆ ನೆರವಾಗಿದ್ದಾರೆ. ಔಷಧಿಯನ್ನು ಕೊಂಡುಕೊಂಡು, ಬೆಂಗಳೂರಿನಿಂದ ಬೈಕ್‌ನಲ್ಲಿ ಒಬ್ಬರೆ 430 ಕಿಮೀ ಪ್ರಯಾಣ ಮಾಡಿ ರೋಗಿಗೆ ಔಷಧವನ್ನು ತಲುಪಿಸಿದ್ದಾರೆ.

ಹೆಡ್ ಕಾನ್ಸ್‌ಸ್ಟೇಬಲ್ ಕುಮಾರಸ್ವಾಮಿ ಕಾರ್ಯವನ್ನು ಪೊಲೀಸ್ ಇಲಾಖೆ ಮೆಚ್ಚಿಕೊಂಡಿದೆ. ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಡ್ ಕಾನ್ಸ್‌ಸ್ಟೇಬಲ್ ಕುಮಾರಸ್ವಾಮಿ ಅವರನ್ನು ತಮ್ಮ ಕಛೇರಿಗೆ ಕರೆಸಿ ಮೆಚ್ಚುಗೆ ಮಾತುಗಳನ್ನು ಆಡಿ, ಗೌರವಿಸಿದ್ದಾರೆ.

Bangalore City Police Appreciated Head Constable S Kumaraswamy

ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದು, ಕುಮಾರಸ್ವಾಮಿ ಹಾಗೂ ಭಾಸ್ಕರ್ ರಾವ್ ಭೇಟಿಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ರೋಗಿಗೆ ಸಹಾಯ ಮಾಡಿದ ಕುಮಾರಸ್ವಾಮಿರಿಗೆ ಸೆಲ್ಯೂಟ್ ಹೊಡೆದಿದ್ದಾರೆ.

ಸಾವಿರಾರು ಜನರು ಕುಮಾರಸ್ವಾಮಿ ರವರ ಪೊಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದರೆ. ಇದರಲ್ಲಿ ಹಲವರು ಈ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮ ಕಷ್ಟದ ಪರಿಸ್ಥಿತಿಯನ್ನು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+