ತಾಕತ್ತಿದ್ದರೆ ರೋಷನ್ ಬೇಗ್ ಬಿಜೆಪಿಯಿಂದ ಸ್ಪರ್ಧಿಸಲಿ: ರಿಜ್ವಾನ್ ಅರ್ಷದ್

ಬೆಂಗಳೂರು, ಮೇ 21: ಕಾಂಗ್ರೆಸ್ ಪಕ್ಷ ಮತ್ತು ನಾಯಕರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್ ವಿರುದ್ಧ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಕಿಡಿಕಾರಿದ್ದಾರೆ.

ರೋಷನ್ ಬೇಗ್ ಒಬ್ಬ ಅವಕಾಶವಾದಿ. ಅವರಿಗೆ ಅಷ್ಟು ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಸ್ಪರ್ಧಿಸಲಿ. ಅವರಿಗೆ ಕಳೆದ ಹತ್ತು ವರ್ಷ ಅಧಿಕಾರ ನೀಡಿದ ಮತ್ತು ನಾಲ್ಕು ಬಾರಿ ಅವರನ್ನು ಶಾಸಕರನ್ನಾಗಿ ಮಾಡಿದ ಕಾಂಗ್ರೆಸ್ ಪಕ್ಷವು ಅಷ್ಟು ಕೆಟ್ಟದ್ದಾಗಿದ್ದರೆ, ಅವರು ರಾಜೀನಾಮೆ ನೀಡಿ, ಬಿಜೆಪಿಯಿಂದ ಕಣಕ್ಕಿಳಿಯಲಿ. ಶಿವಾಜಿನಗರದಲ್ಲಿ ಏನಾಗಲಿದೆಯೋ ಕಾದು ನೋಡೋಣ ಎಂದು ಅರ್ಷದ್ ಹೇಳಿದ್ದಾರೆ.

Bangalore central rizwan arshad challenged Roshan Baig to resign congress contest from bjp

ರೋಷನ್ ಬೇಗ್ ಅವರು ಬಳಸಿದ ಪದಗಳು ಅವರ ಮಟ್ಟ, ಅವರ ಹಿನ್ನೆಲೆಯನ್ನು ತೋರಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಯಾರೂ ಯಾರ ಮೇಲೆಯೂ ಅಂತಹ ಪದಗಳನ್ನು ಬಳಸುವುದಿಲ್ಲ. ಈ ಚುನಾವಣೆಗಳಲ್ಲಿ ಅವರು ನನ್ನ ವಿಚಾರದಲ್ಲಿ ಏನು ಮಾಡಿದ್ದಾರೆಂದು ಅವರಿಗೇ ತಿಳಿದಿದೆ. ಕಳೆದ ಚುನಾವಣೆಯಲ್ಲಿ ಏನು ಮಾಡಿದ್ದರೆಂದೂ ಅವರಿಗೆ ತಿಳಿಸಿದೆ. ಪಕ್ಷಕ್ಕೆ ಸಲಹೆ ನೀಡಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಅರ್ಷದ್ ಕಿಡಿಕಾರಿದ್ದಾರೆ.

ಈ ನಡುವೆ ರೋಷನ್ ಬೇಗ್ ಅವರು, ನನಗೆ ಕೆಪಿಸಿಸಿ ನೀಡಿರುವ ಷೋಕಾಸ್ ನೋಟಿಸ್ ಅನ್ನು ಓದಲು ಕೂಡ ಹೋಗುವುದಿಲ್ಲ. ಏಕೆಂದರೆ ಈ ಪತ್ರವು ನಾನು ಉಲ್ಲೇಖ ಮಾಡಿರುವ ಅಸಮರ್ಥ ವ್ಯಕ್ತಿಗಳ ಆದೇಶದಂತೆಯೇ ಕಳುಹಿಸಲಾಗಿರುತ್ತದೆ ಎನ್ನುವುದು ಸ್ಪಷ್ಟ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+