ಬೆಂಗಳೂರು : ಬಾಂಗ್ಲಾ ಮಹಿಳೆಗೆ ಮಾಲ್‌ನಲ್ಲಿ ಥಳಿತ
ಬೆಂಗಳೂರು, ಮೇ 29 : ನಾನು ಪೊಲೀಸ್ ಎಂದು ಹೇಳಿಕೊಂಡು ಬಾಂಗ್ಲಾದೇಶದ ಮಹಿಳೆಗೆ ಥಳಿಸಿ ಹಣ ದೋಚಿದ್ದ ಮಹಿಳೆಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಮೇ 25ರಂದು ಡಿ ಮಾರ್ಟ್‌ನಲ್ಲಿ ಮಹಿಳೆ ಹಲ್ಲೆ ನಡೆಸಿದ್ದಳು.
ಬಾಂಗ್ಲಾದೇಶದ ಮಹಿಳೆ ರಶೀದಾ ಬೇಗಂ ನೀಡಿದ ದೂರಿನ ಅನ್ವಯ ಮಂಜುಳಾ (36) ಎಂಬ ಮಹಿಳೆಯನ್ನು ಶುಕ್ರವಾರ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಮಾಲ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡುದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. [ಬೆಂಗಳೂರಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಳ]

ರಶೀದಾ ಬೇಗಂ ಪತಿಗೆ ಚಿಕಿತ್ಸೆ ಕೊಡಿಸಲು ಬಾಂಗ್ಲಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ನಾರಾಯಣ ಹೃದಯಾಲಯದಲ್ಲಿ ಪತಿಯನ್ನು ದಾಖಲಿಸಿದ್ದಾರೆ. ಮಂಜುಳಾ 65 ಸಾವಿರ ಹಣ ಮತ್ತು 5 ಸಾವಿರ ಮೌಲ್ಯದ ಬಾಂಗ್ಲಾದ ಕರೆನ್ಸಿಯನ್ನು ದೋಚಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. [ಠಾಣೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಪೇದೆಗಳು ಅಮಾನತು]
ಘಟನೆ ವಿವರ : ಮೇ 25ರ ಸೋಮವಾರ ರಶೀದಾ ಬೇಗಂ ಅವರು ಹೆಬ್ಬಗೋಡಿಯಲ್ಲಿರುವ ಡಿ ಮಾರ್ಟ್‌ಗೆ ತೆರಳಿದ್ದರು. ಕೆಲವು ಬಟ್ಟೆ ಮತ್ತು ಚಪ್ಪಲಿ ಖರೀದಿ ಮಾಡಿದ್ದರು. ಆದರೆ, ಬಿಲ್ ಪಾವತಿ ಮಾಡಲು ಹೋದಾಗ ಮರೆತು ಬಟ್ಟೆಗಳಿಗೆ ಮಾತ್ರ ಬಿಲ್ ಕೊಟ್ಟಿದ್ದರು.
ಭದ್ರತಾ ಸಿಬ್ಬಂದಿ ಚಪ್ಪಲಿಗೆ ಹಣ ಪಾವತಿ ಮಾಡಿ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದ ಮಂಜುಳಾ ತಾನು ಪೊಲೀಸ್ ಎಂದು ಹೇಳಿಕೊಂಡು ಭದ್ರತಾ ಸಿಬ್ಬಂದಿ ಬಳಿ ಇದ್ದ ಲಾಠಿ ತೆಗೆದುಕೊಂಡು ರಶೀದಾಗೆ ಥಳಿಸಿದ್ದಾರೆ. ಹಣ ಪಾವತಿ ಮಾಡುತ್ತೇನೆ ಎಂದು ರಶೀದಾ ಹೇಳಿದರೂ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ಬಳಿಕ ರಶೀದಾ ಬಳಿ ಇದ್ದ 65 ಸಾವಿರ ಹಣ ಮತ್ತು ಬಾಂಗ್ಲಾ ಕರೆನ್ಸಿಯನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಮಂಜುಳಾ ಅವರು ಹಲ್ಲೆ ನಡೆಸುವ ದೃಶ್ಯ ಡಿ ಮಾರ್ಟ್‌ನ ಸಿಸಿಟಿಯಲ್ಲಿ ಸೆರೆಯಾಗಿತ್ತು. ರಶೀದಾ ಬೇಗಂ ನೀಡಿದ ದೂರಿನ ಅನ್ವಯ ಮಂಜುಳಾ ಅವರನ್ನು ಇಂದು ಬಂಧಿಸಲಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ












Click it and Unblock the Notifications