ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ: ಸಹೋದರ ಬಾಲಚಂದ್ರ ಹೇಳಿದ್ದೇನು?

ಬೆಂಗಳೂರು, ಮಾರ್ಚ್ 3: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿ ಜೊತೆ ಇರುವ ಸೆಕ್ಸ್ ಸಿಡಿ ಬಿಡುಗಡೆಯಾಗಿದ್ದು, ಇದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ವಿಪಕ್ಷ ಹಾಗೂ ಸಾರ್ವಜನಿಕ ವಿರೋಧ ಎದುರಿಸುವ ಮೊದಲೇ ಜಾರಕಿಹೊಳಿ ಅವರ ರಾಜೀನಾಮೆ ಪಡೆಯಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲೇ ಒತ್ತಡ ಶುರುವಾಗಿದೆ.

ಈ ಕುರಿತು ರಮೇಶ್ ಜಾರಕಿಹೊಳಿ ಕಾಮಕೇಳಿ ಪುರಾಣದ ಬಗ್ಗೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದು, "ಈ ಸಿಡಿ ಕುರಿತು ಸಿಐಡಿ ಅಥವಾ ಸಿಬಿಐ ತನಿಖೆಯಾಗಬೇಕು'' ಎಂದು ಒತ್ತಾಯಿಸಿದ್ದಾರೆ.

Balachandra Jarkiholi reaction to Ramesh Jarkiholi Sex CD Case

"ಅಲ್ಲದೇ ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ, ಇದು ಫೇಕ್ ವಿಡಿಯೋ ಅಥವಾ ನೈಜ ವಿಡಿಯೋನಾ ಅನ್ನುವುದು ಸೂಕ್ತ ತನಿಖೆ ಮಾಡಿದರೆ ಗೊತ್ತಾಗಲಿದೆ'' ಎಂದಿದ್ದಾರೆ.

"ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ಮಾಡಿದ್ದೇವೆ. ವಕೀಲರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ'' ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

Balachandra Jarkiholi reaction to Ramesh Jarkiholi Sex CD Case

"ಈ ವಿಡಿಯೋ ರಷ್ಯಾ, ಸಿಂಗಾಪುರ್ ನಲ್ಲಿ ಅಪಲೋಡ್ ಅಗಿದೆ, ಇದರ ಹಿಂದೆ ರಾಜಕೀಯ ಪ್ರಭಾವಿಗಳಿದ್ದಾರೆ. ತನಿಖೆಯಾದರೆ ಓರಿಜಿನಲ್ ಅಥವಾ ಫೇಕ್ ಅನ್ನುವುದು ಗೊತ್ತಾಗಲಿದೆ. ನನಗೆ ಇರುವ ಮಾಹಿತಿ ಪ್ರಕಾರ ಇದು ಫೇಕ್ ವಿಡಿಯೋ'' ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

"ಸಹೋದರನನ್ನು ರಾಜಕೀಯವಾಗಿ ಕುಗ್ಗಿಸಲು ಈ ರೀತಿಯ ಬಲೆ ಹೆಣೆಯಲಾಗಿದೆ. ಇದೊಂದು ಫೇಕ್ ವಿಡಿಯೋ ಆಗಿದ್ದು, ಒಂದು ವೇಳೆ ಸಿಡಿ ನಿಜವಾಗಿದ್ದರೆ ನಾನೇ ಖುದ್ದಾಗಿ ರಾಜೀನಾಮೆ ನೀಡಲು ಹೇಳುತ್ತೇನೆ'' ಎಂದು ಸಚಿವ ರಮೇಶ್ ರಾಸಲೀಲೆ ಸಿಡಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

"ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಚ್.ವೈ ಮೇಟಿ ರಾಜೀನಾಮೆ ಕೊಡುವ ವೇಳೆ ಸಂತ್ರಸ್ಥ ಮಹಿಳೆ ದೂರು‌ ನೀಡಿದ್ದರು. ಅದಕ್ಕೆ ಅವರು ರಾಜೀನಾಮೆ ಕೊಟ್ಟಿದ್ದರು. ಈಗ ರಮೇಶ್ ಜಾರಕಿಹೊಳಿ ಜೊತೆಗಿರುವ ಮಹಿಳೆ ಯಾರು ಅಂತಾನೇ ಗೊತ್ತಿಲ್ಲ" ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

"ರಮೇಶ್ ಜಾರಕಿಹೊಳಿ ಜೊತೆಗಿನ ಮಹಿಳೆ ವಿಡಿಯೋ ಫೇಕ್ ಆಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ಅಗತ್ಯತೆ ಇಲ್ಲ. ಒಂದು ವೇಳೆ ಮುಂದೆ ಸಂತ್ರಸ್ಥ ಮಹಿಳೆ ಬಂದು ದೂರು ನೀಡಿದರೆ ರಾಜೀನಾಮೆ ಬಗ್ಗೆ ನೋಡೋಣ"ವೆಂದರು.

"ಆ ಮಹಿಳೆ ದೂರು ನೀಡದೆ, ಬರೀ ಯಾರೋ ಒಬ್ಬರು ಬಂದು ದೂರು ಕೊಟ್ಟರೆ ಹೇಗೆ? ಅದನ್ನು ದೂರು ಎಂತಲೂ ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ನಾನಂತು ರಮೇಶ್ ಅವರಿಗೆ ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದೇನೆ. ಬುಧವಾರ ಮಧ್ಯಾಹ್ನ ಸಿಎಂ ಯಡಿಯೂರಪ್ಪ ಅವರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡುತ್ತಾರೆ" ಎಂದರು.

"ಈ ವೀಡಿಯೋ ಹಿಂದೆ ಯಾರದ್ದೋ ಒಬ್ಬರ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡವಿದೆ. ಆ ರಾಜಕಾರಣಿ ಬಿಜೆಪಿಯವರಲ್ಲ. ಬೇರೆ ಪಕ್ಷದ ರಾಜಕಾರಣಿಯಾಗಿದ್ದಾರೆ ಎಂದು ಸ್ಪೋಟಕ ಮಾಹಿತಿ ಹೊರ ಹಾಕಿದರು. ಹೀಗಾಗಿ, ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು, ಸಿಎಂ ಕೂಡ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ" ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+