ಬಾಹುಬಲಿಗೆ ಪೈಪೋಟಿ ಕೊಡುತ್ತಿರುವ ಕನ್ನಡ ಪೋಸ್ಟರ್!
ಬಹುಕೋಟಿ ವೆಚ್ಚದ ಪ್ರಭಾಸ್ ಅಭಿನಯದ, ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಕನ್ನಡದ ಪೋಸ್ಟರ್ ವೊಂದು ಭಾರಿ ಪೈಪೋಟಿ ನೀಡುತ್ತಿದೆ. ಯಾವ ಚಿತ್ರದ್ದು? ಯಾರಿದ್ದಾರೆ ಅದರಲ್ಲಿ ಮುಂದೆ ಓದಿ...
ಬೆಂಗಳೂರು, ಏಪ್ರಿಲ್ 28: ಬಹುಕೋಟಿ, ಬಹು ತಾರಾಗಣವಿರುವ ಬಹುಭಾಷಾ ಚಿತ್ರ ಬಾಹುಬಲಿ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ಕನ್ನಡದ ಪೋಸ್ಟರ್ ವೊಂದು ಭಾರಿ ಪೈಪೋಟಿ ನೀಡುತ್ತಿದೆ. ಯಾವ ಚಿತ್ರದ್ದು? ಯಾರಿದ್ದಾರೆ ಅದರಲ್ಲಿ ಮುಂದೆ ಓದಿ...
ಅಸಲಿಗೆ ಬಾಹುಬಲಿ ಚಿತ್ರದ ಪೋಸ್ಟರ್ ಮಾದರಿಯಲ್ಲೇ ತಮಾಷೆಗಾಗಿ ಕನ್ನಡದಲ್ಲಿ ಪೋಸ್ಟರ್ ಮಾಡಿ ಬಿಡಲಾಗಿದೆ. ಇಂಟರ್ನೆಟ್ ನಲ್ಲಿ ಈಗೆಲ್ಲ ಟ್ರಾಲ್ಸ್, ಮೀಮ್ಸ್ ಮಾಮೂಲಿಯಾಗಿವೆ. ಕೆಲವೊಮ್ಮೆ ಹಾಸ್ಯ ಮಾಡಲು ಹೋಗಿ ಅಪಹಾಸ್ಯಕ್ಕೊಳಗಾದ ಪ್ರಸಂಗಗಳು ನಡೆದಿವೆ.

ಪೋಸ್ಟರ್ ನಲ್ಲಿ ಏನಿದೆ?: ಈ ಬಾರಿ ಮೀಮ್ಸ್ ತಯಾರಕರ ಕಣ್ಣು ಕರ್ನಾಟಕದ ಬಿಜೆಪಿ ಬಿಕ್ಕಟ್ಟಿನ ಮೇಲೆ ಬಿದ್ದಿದೆ. ಶಿಸ್ತಿನ ಪಕ್ಷ ಹೆಮ್ಮೆಯಿಂದ ಅರ್ಪಿಸುವ ಕಿತಾಪತಿ ಸ್ಟಾರ್ಸ್ ಯಡ್ಡಿ(ಯಡಿಯೂರಪ್ಪ) ಹಾಗೂ ಈಶು (ಈಶ್ವರಪ್ಪ) ಅಭಿನಯದ ಸಾಹಸ ಪ್ರಧಾನ ಚಿತ್ರ 'ಬಿಜೆಪಿ ಬಲಿ' ಎಂದು ಬರೆಯಲಾಗಿದೆ. ಬಾಹುಬಲಿ ಚಿತ್ರ ದಿ ಕನ್ ಕ್ಲೂಷನ್ ಆದರೆ, ಈ ಚಿತ್ರದ ಅಡಿಬರಹ ದಿ ಕನ್ ಫ್ಯೂಷನ್ ಎಂದು ಬರೆಯಲಾಗಿದೆ.
ಬಾಹುಬಲಿ ಚಿತ್ರದ ಪೋಸ್ಟರ್ ಹೋಲುವಂತೆ ಈ ಪೋಸ್ಟರ್ ಇದೆ. ಕವಚಧಾರಿ ಯಡಿಯೂರಪ್ಪ ಅವರ ಹೃದಯಭಾಗದಲ್ಲಿ ಕಮಲದ ಚಿತ್ರ ವಿದೆ. ಯುದ್ಧಭೂಮಿಯಲ್ಲಿ ವೀರ ಯೋಧರಂತೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ನಿಂತಿದ್ದಾರೆ. ಬಿಜೆಪಿ ಬಿಕ್ಕಟ್ಟು ತಾರಕಕ್ಕೇರಿ, ಎರಡು ಬಣದವರು ಮಾರಾಮಾರಿ ಮಾಡಿಕೊಂಡು ಕೈ ಕೈ ಮಿಲಾಯಿಸಿದ ಬೆನ್ನಲ್ಲೇ ಈ ಪೋಸ್ಟರ್ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಿದಾಡುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications