ಬೆಂಗಳೂರಿನ SSLC, 2nd PUC ವಿದ್ಯಾರ್ಥಿಗಳಿಗೆ GBA ಗುಡ್‌ನ್ಯೂಸ್: ಪ್ರತಿಭಾವಂತರಿಗೆ ‘ಪ್ರತಿಭಾ ಪುರಸ್ಕಾರ’
ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ SSLC ಹಾಗೂ 2nd PUC ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್ ಕೊಡಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ SSLC ಹಾಗೂ 2nd PUC ವಿದ್ಯಾರ್ಥಿಗಳಿಗೆ "ಪ್ರತಿಭಾ ಪುರಸ್ಕರ" ನೀಡಿ ಗೌರವಿಸುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಸೂಚನೆ ಮೂಲಕ ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಕಾರ್ಯನಿರ್ವಹಿಸುತ್ತಿರುವ, ಸರ್ಕಾರಿ, ಅನುದಾನಿತ, ಅನುದಾನ ರಹಿತ, ವಸತಿ ಶಿಕ್ಷಣ ಸಂಸ್ಥೆ, CBSE, ICSE, Jawaharalal Nehru Vidyalaya (JNV), 2 GBA ಶಾಲಾ/ಕಾಲೇಜುಗಳಲ್ಲಿ 2025-2026ನೇ ಸಾಲಿನ ಮಾರ್ಚ್/ಏಪ್ರಿಲ್ ರಲ್ಲಿ ನಡೆದ SSLC ಪರೀಕ್ಷೆಯಲ್ಲಿ 99% ಮತ್ತು 2nd PUC ಪರೀಕ್ಷೆಯಲ್ಲಿ 99% ಮತ್ತು ಹೆಚ್ಚು ಅಂಕಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಉದ್ದೇಶದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೆಲವು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.
SSLC: ಅರ್ಹತೆಯ ಮಾನದಂಡಗಳು
* 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ 625ಕ್ಕೆ 621 ಅಂಕಗಳು ಅಥವಾ ಅದಕ್ಕಿಂತ ಹೆಚ್ಚು ಪಡೆದಿರಬೇಕು.
* 2025-26ನೇ ಸಾಲಿನ II PUC ಪರೀಕ್ಷೆಯಲ್ಲಿ 600ಕ್ಕೆ 596 ಅಂಕಗಳು ಅಥವಾ ಅದಕ್ಕಿಂತ ಹೆಚ್ಚು ಪಡೆದಿರಬೇಕು.
* Central Board of Secondary Education (CBSE & ICSE), SSLC II PUC 500ಕ್ಕೆ 496 ಅಂಕಗಳು ಅಥವಾ ಅದಕ್ಕಿಂತ ಹೆಚ್ಚು ಪಡೆದಿರಬೇಕು.
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ನೀಡಿರುವ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಭರ್ತಿ ಮಾಡಿದ ಮೂಲಕ ಅರ್ಜಿಗಳನ್ನು ಸಂಬಂಧಪಟ್ಟ ಶಾಲಾ/ಕಾಲೇಜು ಮುಖ್ಯಸ್ಥರುಗಳ ದೃಢೀಕಣ ಪಡೆದು ವಿದ್ಯಾರ್ಥಿಗಳು/ಪೋಷಕರುಗಳು ದಿನಾಂಕ: 25-08-2026ರೊಳಗೆ, ಹಿರಿಯ ಸಹಾಯಕ ನಿರ್ದೇಶಕರ (ಶಿಕ್ಷಣ), ಜಿ.ಬಿ.ಎ ಕೇಂದ್ರ ಕಛೇರಿ, ಎನ್.ಆರ್. ವೃತ್ತ, ಬೆಂಗಳೂರು-02. ಅನೆಕ್ಸ್-3ನೇ ಕಟ್ಟಡ, 3ನೇ ಮಹಡಿಯಲ್ಲಿ ಖುದ್ದಾಗಿ ಅಥವಾ email: [email protected]ಗೆ ಸಲ್ಲಿಸತಕ್ಕದ್ದು, ದಿನಾಂಕ: 25-08-2026ರ ರಾತ್ರಿ 12 ಗಂಟೆ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದುವರಿದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಎಲ್ಲಾ ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರು/ಉಪ ನಿರ್ದೇಶಕರುಗಳು, ಬೆಂಗಳೂರು ಉತ್ತರ, ದಕ್ಷಿಣ ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ ಹಾಗೂ ಉಪ ನಿರ್ದೇಶಕರುಗಳು, ಬೆಂಗಳೂರು ಉತ್ತರ, ದಕ್ಷಿಣ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಡಳಿತ ಮಂಡಳಿಯಿಂದ ಈ ಅಧಿಸೂಚನೆಯನ್ನು ವ್ಯಾಪಕವಾಗಿ ಪ್ರಚಾರಪಡಿಸಿ, ಅರ್ಹ ವಿದ್ಯಾರ್ಥಿಗಳ ವಿವರವನ್ನು ಕಡ್ಡಾಯವಾಗಿ ಮೇಲಿನ ವಿಳಾಸ ಅಥವಾ ಇ-ಮೇಲ್ ಗೆ ಸಲ್ಲಿಸಲು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆಯೂ ನಿರ್ದೇಶನ ನೀಡಲಾಗಿದೆ ಎಂದು ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.
ಅರ್ಜಿ ನಮೂನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಆದ https://bbmp.gov.in ಲಿಂಕ್‌ಗೆ ಭೇಟಿ ನೀಡುವ ಮೂಲಕ ಪಡೆಯಬಹುದಾಗಿದೆ ಎಂದೂ ಹೇಳಲಾಗಿದೆ.


Click it and Unblock the Notifications
