B-Khata to A-Khata: ಆನ್‌ಲೈನ್‌ನಲ್ಲಿ ಬಿ - ಖಾತಾದಿಂದ ಎ - ಖಾತಾ ಪಡೆಯುವುದು ಹೇಗೆ, ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕ ಸರ್ಕಾರವು ಬಿ - ಖಾತಾದಿಂದ ಇ - ಖಾತಾ ಪರಿವರ್ತನೆಗೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ರಾಜ್ಯ ಸರ್ಕಾರ ನೀಡಿರುವ ಗುಡ್‌ನ್ಯೂಸ್ ನಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಅಂದಾಜು 30ರಿಂದ 40 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿದಾರರಿಗೆ ವರದಾನವಾಗಿದೆ. ಬಿ ಖಾತ ಆಸ್ತಿ ಇದ್ದರೂ
ಅದಕ್ಕೆ ಸೂಕ್ತ ಮೌಲ್ಯ ಸಿಗುತ್ತಿರಲಿಲ್ಲ. ಕಟ್ಟಡಗಳ ನಿರ್ಮಾಣ ಹಾಗೂ ಬ್ಯಾಂಕ್‌ಗಳ ಲೋನ್‌ಗೂ ಸಮಸ್ಯೆ ಆಗುತ್ತಿತ್ತು. ಇದೀಗ ಸರ್ಕಾರ ಕೊಟ್ಟಿರುವ ಅವಕಾಶ ವರದಾನವಾಗಿದೆ. ಹಾಗಾದರೆ ಬಿ - ಖಾತಾದಿಂದ ಎ - ಖಾತಾ ಮಾಡಿಕೊಳ್ಳುವುದು ಹೇಗೆ, ಆನ್‌ಲೈನ್‌ನಲ್ಲಿ ನೀವೇ ಎ - ಖಾತಾ ಪಡೆಯುವುದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಮೊದಲ ಹಂತದಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿನ ಆಸ್ತಿಗಳಿಗೆ ಸೀಮಿತವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿ-ಖಾತಾವನ್ನು ಎ-ಖಾತಾ ಪರಿವರ್ತನೆಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಹೇಗೆ ಅಪ್ಲೈ ಮಾಡಿ ಹೇಗೆ ಪರಿವರ್ತಿಸುವುದು ಎನ್ನುವುದ ಸಂಪೂರ್ಣ ವಿವರ ನೀಡಿದೆ. ಇದೇ ವರ್ಷ ನವೆಂಬರ್ 1 ರಿಂದ ಕರ್ನಾಟಕ ಸರ್ಕಾರವು ನಡೆಸುವ 100 ದಿನಗಳ ಅಭಿಯಾನದಿಂದ ಬೆಂಗಳೂರಿನ ಸುಮಾರು 15 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿ ಮಾಲೀಕರಿಗೆ ಭರ್ಜರಿ ಲಾಭ ಆಗಲಿದೆ. ಇಷ್ಟು ಜನ ಆಸ್ತಿ ಮಾಲೀಕರು ತಮ್ಮ ಬಿ ಖಾತಾ ಆಸ್ತಿಯನ್ನು ಎ ಖಾತಾವನ್ನಾಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ.
ಇನ್ನು ಹೊಸ ನಿಯಮ ಅಥವಾ ಆದೇಶದ ಅನುಸಾರ 2,000 ಚದರ ಮೀಟರ್‌ವರೆಗಿನ ಆಸ್ತಿಗಳನ್ನು ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಅವಕಾಶ ಇರಲಿದೆ. ಇದನ್ನೂ ಹೆಚ್ಚು ವಿಸ್ತೀರ್ಣದ ಆಸ್ತಿಯನ್ನು ಹೊಂದಿರು ಆಸ್ತಿ ಮಾಲೀಕರು CAD ನಕ್ಷೆ ಹಾಗೂ ಇನ್ನಿತರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. 100 ದಿನಗಳ ಅಭಿಯಾನವು ನವೆಂಬರ್ 1 ರಂದು ಪ್ರಾರಂಭವಾಗಲಿದೆ. ಇನ್ನು ಈ ರೀತಿ ಆಸ್ತಿ ಪರಿವರ್ತನೆ ಮಾಡಿಕೊಳ್ಳಲು ಇಚ್ಛಿಸುವ ಆಸ್ತಿ ಮಾಲೀಕರು ₹500 ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದಾದ ನಂತರ ನಂತರ ಗ್ರೇಟರ್ ಬೆಂಗಳೂರು ಆಡಳಿತದ / ಪಾಲಿಕೆಯ ಅಧಿಕಾರಿಗಳು ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲು ಮನೆಗಳಿಗೆ ಭೇಟಿ ಕೊಡಲಿದ್ದಾರೆ.

ಇನ್ನು ಆಸ್ತಿ ಮಾಲೀಕರು ಮಾರ್ಗದರ್ಶನ ಮೌಲ್ಯ / ಗೈಡ್‌ಲೈನ್ಸ್ ವ್ಯಾಲ್ಯೂ (Guidelines Value) 5% ಅನ್ನು ಸರ್ಕಾರಕ್ಕೆ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹಂತ ಹಂತವಾಗಿ ಬಿ - ಖಾತಾದಿಂದ ಎ - ಖಾತಾಗೆ ಆಸ್ತಿಯನ್ನು ಪರಿವರ್ತನೆ ಮಾಡುವುದು ಹೇಗೆ ಎನ್ನುವ ಸಂಪೂರ್ಣ ವಿವರ ನೋಡೋಣ.
ಆನ್‌ಲೈನ್‌ನಲ್ಲಿ ಬಿ - ಖಾತಾದಿಂದ ಎ - ಖಾತಾ ಪರಿವರ್ತನೆ ಹೇಗೆ ?
ಇನ್ನು ಬಿ - ಖಾತಾದಿಂದ ಎ- ಖಾತಾ ಮಾಡಿಕೊಳ್ಳುವುದಕ್ಕೆ ಸರಳ ಹಂತಗಳನ್ನು ಪಾಲಿಸಿದರೆ ಸಾಕು.
1. ಬಿ - ಖಾತಾ ದಿಂದ ಎ - ಖಾತಾ ಪರಿವರ್ತನೆಗೆ ಸರ್ಕಾರದಿಂದ ಅಧಿಕೃತವಾಗಿರುವ ಪರಿಚಯಿಸಲಾಗಿರುವ (https://bbmp.karnataka.gov.in/BtoAKhata). ಪೋರ್ಟಲ್‌ಗೆ ಭೇಟಿ ಕೊಡಿ.
2. ನಿಮ್ಮ ಮೊಬೈಲ್ ಸಂಖ್ಯೆ, ಕ್ಯಾಪ್ಚರ್ ಕ್ಯಾಪ್ಚಾ ನಮೂದಿಸಿ ಮತ್ತು OTP ನಮೂದಿಸಿ.
3. ನೀವು ಲಾಗಿನ್ ಆಗಿರುವ ಪೇಜ್‌ನ ಮೇಲೆ ಬಿ - ಖಾತಾದಿಂದ ಎ- ಖಾತಾ ಪರಿವರ್ತನೆ ಮತ್ತು ಒಂದೇ ಪ್ಲಾಟ್ ಅನುಮೋದನೆಯ ಮೂಲಕ ಸೈಟ್‌ಗಳಿಗೆ ಹೊಸ ಎ-ಖಾತಾ ಎನ್ನುವ ಆಯ್ಕೆ ಕಾಣಿಸಲಿದೆ.
4. ಇನ್ನು ನಾಲ್ಕನೇ ಹಂತದಲ್ಲಿ ಹೊಸ ರಿಕ್ವೆಸ್ಟ್ ಕೊಡಿ ಮತ್ತು ಪರಿವರ್ತಿಸಬೇಕಾದ ಖಾತಾ ಐಡಿಯನ್ನು ನಮೂದಿಸಿ. ಫೆಚ್ ಮೇಲೆ ಕ್ಲಿಕ್ ಮಾಡಿ.
5. ಸೈಟ್ ಮಾಲೀಕರ ಆಧಾರ್ ದೃಢೀಕರಣ ಮಾಡಬೇಕಾಗುತ್ತದೆ. ಅಲ್ಲದ್ದೇ ಇದರೊಂದಿಗೆ ಇ-ಕೆವೈಸಿ ಪರಿಶೀಲನೆ ಪ್ರಕ್ರಿಯೆಗಳನ್ನು ಮುಗಿಸಿ.
6. ಪ್ಲಾಟ್ ಸರ್ವೆ ಸಂಖ್ಯೆಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ.
7. ಕೃಷಿಯಿಂದ ಕೃಷಿಯೇತರಕ್ಕೆ ಡಿಸಿ ಪರಿವರ್ತನೆ ಆರ್ಡರ್ ನಮೂದಿಸಿ.
8. ಆಸ್ತಿಯ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಕಟ್ಟಡದ ರೇಖಾಚಿತ್ರವನ್ನು (Building Sketch) ಅಪ್‌ಲೋಡ್ ಮಾಡಿ.
9. ನಿಮ್ಮ ಆಸ್ತಿಯ ಮಾರ್ಗ, ರಸ್ತೆಗಳು ಅಥವಾ ಹತ್ತಿರದ ರಸ್ತೆಗಳಿಗೆ ಸಂಬಂಧಿಸಿದ ಇನ್ನಿತರ ಪ್ರಮುಖ ದಾಖಲೆಗಳು ಮತ್ತು ವಿವರಗಳನ್ನು ಅಪ್‌ಲೋಡ್ ಮಾಡಿ.
10. ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದಂತೆ ಒಬ್ಬರಿಗಿಂತ ಹೆಚ್ಚು ಜನ ಆಸ್ತಿ ಮಾಲೀಕರು ಇದ್ದರೆ, ಇತರ ಮಾಲೀಕರ ಇ-ಕೆವೈಸಿ. ಫೋನ್ ನಂಬರ್ ಪರಿಶೀಲನೆ ಮಾಡಿ ಹಾಗೂ ಪ್ಲಾಟ್ ವಿವರಗಳನ್ನು ನಮೂದಿಸಿ.
11. ಕೊನೆಯದಾಗಿ ಅರ್ಜಿ ಸಲ್ಲಿಸಿ ಮತ್ತು ಪಾವತಿ ಮಾಡಿ.
12. ಡ್ಯಾಶ್‌ಬೋರ್ಡ್‌ನಿಂದ ಬಿ ಖಾತಾದಿಂದ ಎ ಖಾತಾ ಸ್ವೀಕೃತಿ ಸ್ಲಿಪ್ / ಬಿಲ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.












Click it and Unblock the Notifications