ಬೆಂಗಳೂರು : ಗುರುವಾರದಿಂದ ಸಜ್ಜನ್‌ರಾವ್ ವೃತ್ತದಲ್ಲಿ ಅವರೆ ಮೇಳ

ಬೆಂಗಳೂರು, ಜನವರಿ 06 : ಉದ್ಯಾನ ನಗರಿ ಬೆಂಗಳೂರಿನ ಜನರನ್ನು ಚಳಿ ಆವರಿಸಿಕೊಳ್ಳುತ್ತಿರುವಾಗಲೇ ಅವರೆ ಕಾಯಿ ಮೇಳವೂ ಆರಂಭವಾಗಲಿದೆ. 2016ನೇ ಸಾಲಿನ ಅವರೆ ಮೇಳ ಜನವರಿ 7ರಿಂದ 24ರ ತನಕ ಸಜ್ಜನ್ ರಾವ್ ವೃತ್ತದಲ್ಲಿ ನಡೆಯಲಿದೆ.

ವಾಸವಿ ಕಾಂಡಿಮೆಂಟ್ಸ್‌ ಕಳೆದ 16 ವರ್ಷದಿಂದ ಅವರೆ ಕಾಯಿ ಮೇಳವನ್ನು ಆಯೋಜಿಸುತ್ತಿದೆ. 2016ನೇ ಸಾಲಿನ ಮೇಳಕ್ಕೆ ಗುರುವಾರ ಚಾಲನೆ ಸಿಗಲಿದೆ. ಮಾಗಡಿ, ಹುಣಸೂರು, ಮೈಸೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳ ಅವರೆ ಕಾಯಿಗಳು ಮೇಳದಲ್ಲಿ ಸಿಗಲಿವೆ. [2015ರ ಅವರೆ ಮೇಳದ ಚಿತ್ರಗಳು]

avare mela

ಜನವರಿ 7ರ ಗುರುವಾರ ಬೆಳಗ್ಗೆ 10 ಗಂಟೆಗೆ ಚಿಕ್ಕಪೇಟೆ ಶಾಸಕ ಆರ್.‌ವಿ.ದೇವರಾಜ್ ಅವರೆ ಮೇಳವನ್ನು ಉದ್ಘಾಟಿಸಲಿದ್ದಾರೆ. ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಭೈರೇಗೌಡ, ನಟಿ ತಾರಾ, ರೂಪಿಕಾ, ನಟ ಯಶ್‌, ಪ್ರಜ್ವಲ್‌ ದೇವರಾಜ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. [ಬಸವನಗುಡಿ ಕಡ್ಲೆಕಾಯಿ ಪರಿಷೆ ಇತಿಹಾಸವೇನು?]

ಈ ಬಾರಿಯ ವಿಶೇಷವೇನು? : ಈ ಬಾರಿಯ ಅವರೆ ಮೇಳದಲ್ಲಿ ಅವರೆ ಕಾಯಿಯಿಂದ ಮಾಡಿದ ಜಹಾಂಗೀರು, ಹಿತಕಬೇಳೆ ಹಲ್ವಾ, ಕಾಜು ಬರ್ಫಿ, ಸ್ವೀಟ್‌ ಬೂಂದಿ, ಕಟ್‌ಲೆಟ್‌ಗಳು ವಿಶೇಷವಾಗಿವೆ. [ನನ್ನ ಮಗಂದ್, ಯಾಕಾದ್ರೂ ಬರುತ್ತೋ ಈ ಚಳಿಗಾಲ!]

ಅವರೆಕಾಯಿ ಹೋಳಿಗೆ, ನಿಪ್ಪಟ್ಟು, ಕೋಡುಬಳೆ, ಜಾಮೂನು, ಪಾಯಸ, ವಡೆ, ದೋಸೆ, ಉಪ್ಪಿಟ್ಟು, ಅವರೆಕಾಳು ಚಿತ್ರಾನ್ನ, ಮಸಾಲೆ ವಡೆ, ಅವಲಕ್ಕಿ ಮಿಕ್ಸ್‌ ಸೇರಿದಂತೆ ವಿವಿಧ ಭಕ್ಷ್ಯಗಳು ಮೇಳದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಜನವರಿ 7ರಿಂದ 24ರವರೆಗೆ ಬೆಳಗ್ಗೆ 11ರಿಂದ ರಾತ್ರಿ 10 ಗಂಟೆಯ ತನಕ ಮೇಳ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+