ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಟೋನ್ಮೆಂಟ್ ನಿಂದ ವೈಟ್ ಫೀಲ್ಡ್ ವರೆಗೆ ಆಟೋ ಸಿಗ್ನಲಿಂಗ್

|
Google Oneindia Kannada News

ಬೆಂಗಳೂರು, ಜನವರಿ 05 : ಹೆಚ್ಚು ರೈಲು ಸಂಚಾರಕ್ಕೆ ಅನುಕೂಲವಾಗಲು ಕಂಟೋನ್ಮೆಂಟ್ ನಿಂದ ವೈಟ್ ಫೀಲ್ಡ್ ರೈಲು ನಿಲ್ದಾಣದವರೆಗೆ ಸ್ವಯಂ ಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು ಇದರ ಪೂರ್ಣ ವರದಿಯನ್ನು ರೈಲ್ವೆ ಸುರಕ್ಷತಾ ಆಯುಕ್ತರ ಒಪ್ಪಿಗೆಗಾಗಿ ಕಳುಹಿಸಲಾಗಿದೆ ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ತಿಳಿಸಿದೆ.

ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ಮೆಟ್ರೋ ಕಾಮಗಾರಿ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಕಂಟೋನ್ಮೆಂಟ್, ಬೈಯ್ಯಪ್ಪನಹಳ್ಳಿಯಿಂದ ಹೆಚ್ಚು ರೈಲು ಸೇವೆ ಆರಂಭಿಸಬೇಕು ಎಂದು ಬೆಂಗಳೂರು ವಿಭಾಗಕ್ಕೆ ವೈಟ್ ಫೀಲ್ಡ್ ರೈಸಿಂಗ್ ಸಂಘಟನೆ ಮನವಿ ಸಲ್ಲಿಸಿತ್ತು.

ಕಂಟೋನ್ಮೆಂಟ್-ವೈಟ್ ಫೀಲ್ಡ್ ಮಾರ್ಗದಲ್ಲಿ ಮತ್ತೆರಡು ಜೋಡಿ ಹಳಿಕಂಟೋನ್ಮೆಂಟ್-ವೈಟ್ ಫೀಲ್ಡ್ ಮಾರ್ಗದಲ್ಲಿ ಮತ್ತೆರಡು ಜೋಡಿ ಹಳಿ

ಅದಕ್ಕೆ ಲಿಖಿತವಾಗಿ ಉತ್ತರಿಸಿರುವ ವಿಭಾಗ, 15.06 ಕೋಟಿ ರೂ. ವೆಚ್ಚದಲ್ಲಿ ಕಂಟೋನ್ಮೆಂಟ್-ವೈಟ್ ಫೀಲ್ಡ್ ನಡುವೆ ಆಟೋಮ್ಯಾಟಿಕ್ ಸಿಗ್ನಲಿಂಗ್ ಅನುಷ್ಠಾನಕ್ಕೆ ಮಂಜೂರಾತಿ ದೊರೆತಿದೆ. ಕಾಮಗಾರಿ ಒಪ್ಪಿಗೆ ಪಡೆಯಲು ಈ ಯೋಜನಾ ವರದಿಯನ್ನು ರೈಲ್ವೆ ಸುರಕ್ಷತಾ ಅಯುಕ್ತರಿಗೆ ಕಳುಹಿಸಿಕೊಲಾಗಿದೆ.

Automatic signaling system from contonment to White field raliway station

ಅದರಲ್ಲಿ ಕೊಂಚ ಬದಲಾವಣೆಯನ್ನು ಅಯುಕ್ತರು ಸೂಚಿಸಿದ್ದು, ಒಪ್ಪಿಗೆ ದೊರೆತ ತಕ್ಷಣವೇ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದೆ. ಮಾರ್ಚ್ ಒಳಗೆ ಪ್ಲಾಟ್ ಫಾರ್ಮ್ ವಿಸ್ತರಣೆ: ಬೈಯಪ್ಪನಹಳ್ಳಿಯ 1 ಮತ್ತು 2ನೇ ಪ್ಲಾಟ್ ಫಾರಂ ವಿಸ್ತರಣಾ ಕಾಮಗಾರಿ ಪ್ರಾರಂವಾಗಿದ್ದು, ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ.

ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳಿಗೆ ಬೈಯಪ್ಪನಹಳ್ಳಿಯಲ್ಲಿ ನಿಲುಗಡೆ ನೀಡಲು ಸಾದ್ಯವಾಗುತ್ತಿಲ್ಲ. ಇಂತಹ ರೈಲುಗಳಲ್ಲಿ ೨೪ ಬೋಗಿಗಳಿದ್ದು, ಬೈಯಪ್ಪನಹಳ್ಳಿ ನಿಲ್ದಾಣದ ಪ್ಲಾಟ್ ಫಾರಂಗಳು ಇದಕ್ಕೆ ಪೂರಕವಾಗಿಲ್ಲ ಎಂದು ತಿಳಿಸಿವೆ.

English summary
South Western railway decided to start automatic signaling system between contonment to White field railwa station. Proposal has been sent to raliway safety Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X