Get Updates
Get notified of breaking news, exclusive insights, and must-see stories!

Bengaluru Auto Strike: ಬೈಕ್ ಟ್ಯಾಕ್ಸಿ ವಿರುದ್ಧದ ಆಟೋ ಚಾಲಕರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಆಟೋ ಮುಷ್ಕರದ ಕಾರಣಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದಲ್ಲಿ ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದೆ.

ಬೆಂಗಳೂರು, ಮಾರ್ಚ್ 20: ಬೆಂಗಳೂರಿನಲ್ಲಿ ಕೆಲವು ಆಟೋ ಸಂಘಟನೆಗಳು ಕರೆ ನೀಡಿರುವ ಆಟೋ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕು ಮತ್ತು ವೈಯಕ್ತಿಕ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸುವುದನ್ನು ನಿಷೇಧಿಸಬೇಕು ಎಂದು ಒಕ್ಕೂಟಗಳು ಒತ್ತಾಯಿಸಿವೆ.

ಆಟೋ ಚಾಲಕರ ಮುಷ್ಕರಕ್ಕೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹಲವು ಭಾಗಗಳಲ್ಲಿ ಆಟೋಗಳು ಓಡಾಡುತ್ತಿವೆ. ಕೆಲವು ಆಟೋ ಚಾಲಕರು ಮಾತ್ರ ತಮ್ಮ ವಾಹನಗಳನ್ನು ರಸ್ತೆಗೆ ಇಳಿಸಿಲ್ಲ. ಉಳಿದಂತೆ ಹಲವು ಮಂದಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಭಾನುವಾರ ಮಧ್ಯರಾತ್ರಿಯಿಂದ ಆರಂಭವಾಗಿರುವ ಮುಷ್ಕರ ಸೋಮವಾರ ಮಧ್ಯರಾತ್ರಿಗೆ ಕೊನೆಗೊಳ್ಳಲಿದೆ.

Auto Strike Today : Luke warm response to the auto strike called by unions in Bengaluru

ಬೆಂಗಳೂರು ನಗರದಲ್ಲಿ 21 ಆಟೋ ಚಾಲಕರ ಸಂಘಟನೆಗಳಿವೆ. ಸುಮಾರು 2.10 ಲಕ್ಷ ಆಟೋಗಳಿವೆ. ಕೊರೊನಾ ಸಮಯದಲ್ಲಿ ಆಟೋ ಚಾಲಕರು ಭಾರೀ ನಷ್ಟವನ್ನು ಅನುಭವಿಸಿದ್ದು, ಈಗ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿರುವ ಕಾರಣ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬ ಅಸಮಾಧಾನ ಅಟೋ ಚಾಲಕರದ್ದು. ಇದರ ಜೊತೆಗೆ ಜನರು ತಮ್ಮ ವೈಯಕ್ತಿಕ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸುತ್ತಿದ್ದು, ಆಟೋ ಚಾಲಕರ ಅದಾಯಕ್ಕೆ ಮತ್ತಷ್ಟು ಹೊಡೆತ ನೀಡಿದೆ.

ದೇಶದ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕು. ಇನ್ನೇನು ವಿಧಾನಸಭಾ ಚುನಾವಣೆಗೆ ದಿನಾಂಕ ಘೊಷಣೆಯಾಗಲಿದ್ದು, ಅಷ್ಟರಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಸೋಮವಾರ ಬೃಹತ್ ಹೋರಾಟ ನಡೆಸುತ್ತಿದೆ.

ಆಟೋ ಮುಷ್ಕರಕ್ಕೆ ಓಲಾ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್ ಕೂಡ ಬೆಂಬಲ ನೀಡಿದ್ದು, ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಲು ಆಟೋ ಚಾಲಕರಿಗೆ ಒತ್ತಾಯಿಸಿದೆ. ಈ ಬಗ್ಗೆ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿಕೆ ನೀಡಿದ್ದು, "ಪ್ರತಿಭಟನೆಗೆ ನಮ್ಮ ಸಂಘಟನೆಯ ಬೆಂಬಲ ಕೂಡ ಇದೆ. ಆದರೆ, ಯಾವ ಚಾಲಕರಿಗೂ ಒತ್ತಾಯ ಮಾಡಲಾಗಿಲ್ಲ. ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಲು ತಿಳಿಸಿದ್ದೇವೆ. ಸರ್ಕಾರ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೇ ಲಕ್ಷಾಂತರ ಚಾಲಕರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ" ಎಂದಿದ್ದಾರೆ.

Auto Strike Today : Luke warm response to the auto strike called by unions in Bengaluru

ಇನ್ನು, ಆಟೋ ಮುಷ್ಕರದ ಕಾರಣಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದೆ. ನಗರದ ಪ್ರಮುಖ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂದು ಶಿವಾಜಿನಗರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ , ಶಾಂತಿನಗರ, ಯಶವಂತಪುರ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಬಸ್‌ಗಳನ್ನು ಹಲವು ಭಾಗಗಳಿಗೆ ನಿಗದಿ ಮಾಡಲಾಗಿದೆ.

ಇನ್ನು, ಕೆಲವು ಭಾಗಗಳಲ್ಲಿ ಆಟೋ ಚಾಲಕರು ಹೆಚ್ಚುವರಿ ಹಣ ವಸೂಲಿ ಮಾಡಿರುವ ಘಟನೆಗಳು ವರದಿಯಾಗಿವೆ. ಮೀಟರ್ ಹಾಕದಿರುವುದು, ಮೀಟರ್ ಮೇಲೆ ಇಷ್ಟು ಕೊಡಿ, ಅಲ್ಲಿಂದ ಖಾಲಿ ಬರಬೇಕು ಎಂದು ಹೆಚ್ಚುವರಿ ಹಣ ಕೇಳುತ್ತಾರೆ ಎಂದು ಆಟೋ ಚಾಲಕರ ಮೇಲೆ ಹಲವು ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತವೆ.

ಆಟೋ ಚಾಲಕರು ನಿಗದಿತ ಮೀಟರ್ ಶುಲ್ಕದಲ್ಲಿ ಟ್ರಿಪ್‌ಗಳನ್ನು ತೆಗೆದುಕೊಳ್ಳುವತ್ತ ಗಮನಹರಿಸಿದರೆ, ಸಭ್ಯರಾಗಿದ್ದರೆ ಮತ್ತು ಟ್ರಿಪ್‌ಗಳನ್ನು ನಿರಾಕರಿಸದಿದ್ದರೆ ಅವರಿಗೆ ಇನ್ನು ಹೆಚ್ಚಿನ ಆದಾಯ ಸಿಗುತ್ತದೆ. ಆದರೆ, ಅವರು ಸರಿಯಾಗಿ ಮುಖ ಕೊಟ್ಟು ಮಾತನಾಡುವುದಿಲ್ಲ. ಏರಿದ ಧ್ವನಿಯಲ್ಲಿ ಮಾತನಾಡುತ್ತಾರೆ. ನಿಗದಿತ ಬೆಲೆ , ಮೀಟರ್ ಇಲ್ಲ , ಮೀಟರ್‌ನ ಮೇಲೆ, ಮೀಟರ್ ಹೆಚ್ಚುವರಿ ದರ, ಡ್ರಾಪಿಂಗ್ ಅಥವಾ ಪಿಕಪ್ ಸ್ಥಳದಲ್ಲಿ ಸುಮ್ಮನೆ ವಾದ ಮಾಡುತ್ತಾರೆ. ಇದು ಓಲಾ/ಉಬರ್/ಬೈಕ್ ಟ್ಯಾಕ್ಸಿಗೆ ಕಾರಣವಾಗಿದೆ. ಇದನ್ನು ಅವರು ಅರ್ಥ ಮಾಡಿಕೊಂಡರೇ ಸಾಕು ಎಂದು ನೆಟ್ಟಿಗರು ಹೇಳುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+