ಬೆಂಗಳೂರು ಆಟೋ ಚಾಲಕರಿಗೆ ಗುಡ್ ನ್ಯೂಸ್, ಷರತ್ತುಗಳು ಅನ್ವಯ

ಬೆಂಗಳೂರು, ಜುಲೈ 07: ಉದ್ಯಾನ ನಗರಿ ಬೆಂಗಳೂರಿನ ಆಟೋ ಚಾಲಕರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ಬೆಂಗಳೂರು ನಗರದಲ್ಲಿ ಆಟೋಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಹೊಸ ಆಟೋ ಪರ್ಮಿಟ್ ಪಡೆಯಲು ಸರ್ಕಾರ ಷರತ್ತುಗಳನ್ನು ಸಹ ನಿಗದಿ ಮಾಡಿದೆ.

ಸರ್ಕಾರ ಹೊಸ ಆಟೋ ಪರ್ಮಿಟ್ ಪಡೆಯುವ ಸಂಖ್ಯೆಯನ್ನು 1.55 ಲಕ್ಷದಿಂದ 2.55ಕ್ಕೆ ಏರಿಕೆ ಮಾಡಿದೆ. ಮುಂದಿನ 5 ವರ್ಷಗಳಿಗೆ ಇದು ಅನ್ವಯವಾಗಲಿದೆ ಎಂದು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

Auto Rickshaw Permits In Bengaluru City Increased

26/3/2018ರ ಆದೇಶದಲ್ಲಿ ಸರ್ಕಾರ ಬೆಂಗಳೂರು ನಗರದಲ್ಲಿ 1,25,000 ಆಟೋ ಪರ್ಮಿಟ್‌ಗಳನ್ನು 1,55,000ಕ್ಕೆ ಮುಂದಿನ 5 ವರ್ಷಗಳಿಗೆ ಏರಿಕೆ ಮಾಡಿತ್ತು. ಮೋಟಾರು ವಾಹನ ಕಾಯ್ದೆ 1988ರ ಅನ್ವಯ ಈ ಆದೇಶವನ್ನು ಹೊರಡಿಸಲಾಗಿತ್ತು.

ಬೇಡಿಕೆ ಹೆಚ್ಚಾಗುತ್ತಿದೆ: ಸದ್ಯ ಹೊರಡಿಸಿರುವ ಆದೇಶದಲ್ಲಿ ಸರ್ಕಾರ ಬೆಂಗಳೂರು ನಗರದ ಅಭಿವೃದ್ಧಿಯಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಹೊಸ ಲೇಔಟ್‌ಗಳು ನಿರ್ಮಾಣವಾಗುತ್ತಿವೆ ಎಂದು ಹೇಳಿದೆ. ಜನಸಂಖ್ಯೆ ಹೆಚ್ಚಾದಂತೆ ನಗರದಲ್ಲಿ ಹೊಸ ಆಟೋ ಪರ್ಮಿಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಬೆಂಗಳೂರು ನಗರದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಆಟೋಗಳಿಗೆ ಎಲ್‌ಪಿಜಿ/ ಸಿಎನ್‌ಜಿ ಅಳವಡಿಕೆ ಮಾಡಬೇಕಿದೆ. ಆಟೋ ಪರ್ಮಿಟ್ ಪಡೆಯಲು ಇರುವ ನಿಯಮಗಳಲ್ಲಿ ಪರಿಷ್ಕರಣೆ ಅಗತ್ಯವಿದೆ ಎಂದು ಆದೇಶದಲ್ಲಿ ಸರ್ಕಾರ ವಿವರಣೆ ನೀಡಿದೆ.

ಪ್ರಸ್ತಾವನೆಯನ್ನು ಪುರಸ್ಕರಿಸಿ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 74 (3) (ಎ) ಅನ್ವಯ ಈಗಿರುವ ನಿಯಮವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಸದ್ಯ ಇರುವ 1,55,000 ಆಟೋ ಪರ್ಮಿಟ್ ನಿಯಮವನ್ನು 2,55,000ಕ್ಕೆ ಮುಂದಿನ 5 ವರ್ಷಗಳಿಗೆ ಏರಿಕೆ ಮಾಡಲಾಗುತ್ತದೆ. ಆದರೆ ಇದಕ್ಕೆ ಷರತ್ತುಗಳು ಅನ್ವಯ ಎಂದು ಸ್ಪಷ್ಟಪಡಿಸಲಾಗಿದೆ.

ಷರತ್ತುಗಳು: ಹಸಿರು ಆಟೋ ರಿಕ್ಷಾಗಳಿಗೆ ಮಾತ್ರ ಪರ್ಮಿಟ್ ನೀಡಬೇಕು. ಬಿಎಸ್‌-6 ಇಂಜಿನ್ ಹೊಂದಿರುವ ಪ್ರಮಾಣೀಕೃತ ಎಲ್‌ಪಿಜಿ/ ಸಿಎನ್‌ಜಿ/ ಎಲೆಕ್ಟ್ರಿಕ್ ಕಿಟ್ ಮತ್ತು ಡಿಜಿಟರ್ ದರದ ಮೀಟರ್‌ಗಳನ್ನು ಆಟೋಗಳು ಹೊಂದಿರಬೇಕು.

ಈಗಾಗಲೇ ಆಟೋ ರಿಕ್ಷಾ ಚಾಲನೆ ಪರ್ಮಿಟ್ ಹೊಂದಿರುವ ಯಾವುದೇ ಚಾಲಕರಿಗೆ ಹೊಸದಾಗಿ ಪರ್ಮಿಟ್ ನೀಡಬಾರದು. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ಪರಿಶೀಲನೆ ಮಾಡಬೇಕು.

ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಪಾನ್ ಕಾರ್ಡ್‌ಗಳನ್ನು ಪರ್ಮಿಟ್ ನೀಡುವ ಸಂದರ್ಭದಲ್ಲಿ ದಾಖಲೆಗಳನ್ನಾಗಿ ಪರಿಗಣಿಸಬಹುದು.

ಅರ್ಜಿ ಸಲ್ಲಿಕೆ ಮಾಡುವವರು ಮಾನ್ಯತೆ ಪಡೆದ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಎಂದು ಸಾರಿಗೆ ಇಲಾಖೆ ಷರತ್ತುಗಳನ್ನು ಹಾಕಿದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗಿದೆ. ಈಗ ಸರ್ಕಾರ ಹೊಸ ಪರ್ಮಿಟ್ ಮಿತಿಯನ್ನು ಏರಿಕೆ ಮಾಡಿರುವುದರಿಂದ ಮತ್ತಷ್ಟು ಆಟೋಗಳು ರಸ್ತೆಗೆ ಇಳಿಯಲಿವೆ. ಕ್ಯಾಬ್, ಬೈಕ್ ಟ್ಯಾಕ್ಸಿ, ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ನಷ್ಟ ಉಂಟಾಗುತ್ತಿದೆ ಎಂಬ ಕೂಗು ಇದೆ.

ಕೆಲವು ಆಟೋ ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಾರೆ. ಹೆಚ್ಚಿನ ದರವನ್ನು ಸುಲಿಗೆ ಮಾಡುತ್ತಾರೆ. ಕರೆದಲ್ಲಿಗೆ ಬರುವುದಿಲ್ಲ ಎಂಬ ಆರೋಪಗಳ ನಡುವೆಯೇ ಸರ್ಕಾರ ಹೊಸ ಆಟೋಗಳಿಗೆ ಪರ್ಮಿಟ್ ನೀಡುವ ಮಿತಿಯನ್ನು ಏರಿಕೆ ಮಾಡಿದೆ.

ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಪೆಟ್ರೋಲ್, ಡೀಸೆಲ್ ದರಗಳನ್ನು ಏರಿಕೆ ಮಾಡಿದೆ. ಬಳಿಕ ಆಟೋ ಚಾಲಕರು ಕನಿಷ್ಠ ಪ್ರಯಾಣದರವನ್ನು ಏರಿಕೆ ಮಾಡಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸರ್ಕಾರ ಈ ಕುರಿತು ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+