Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಶೀಘ್ರವೇ ಆಟೋ ಪ್ರಯಾಣ ದರ ಏರಿಕೆ ಸಾಧ್ಯತೆ; 30 ರೂ ಕನಿಷ್ಠ ದರಕ್ಕೆ ಚಿಂತನೆ

ಬೆಂಗಳೂರು, ಅಕ್ಟೋಬರ್ 01: ರಾಜ್ಯ ಸಾರಿಗೆ ಇಲಾಖೆಯು ಬೆಂಗಳೂರಿನಲ್ಲಿ ಆಟೊ ರಿಕ್ಷಾ ಪ್ರಯಾಣ ದರವನ್ನು ಏರಿಕೆ ಮಾಡುವ ಸಾಧ್ಯತೆಯಿದ್ದು, ಮೂಲ ದರವನ್ನು ಪ್ರಸ್ತುತ 25ರಿಂದ 30 ರೂಗೆ ಶೀಘ್ರವೇ ಏರಿಸುವ ಸಾಧ್ಯತೆಯಿದೆ.

ರಸ್ತೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಬೆಂಗಳೂರು ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರು ಇತ್ತೀಚೆಗೆ ಪ್ರಸ್ತಾವಿತ ದರ ಏರಿಕೆ ಕುರಿತು ಸಭೆ ನಡೆಸಿದ್ದು, ಆಟೊ ಪ್ರಯಾಣ ದರ ಹೆಚ್ಚಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಸುಮಾರು ಎಂಟು ವರ್ಷಗಳ ಹಿಂದೆ, ಅಂದರೆ 2013ರಲ್ಲಿ ಆಟೊ ಪ್ರಯಾಣ ದರವನ್ನು ಕೊನೆಯದಾಗಿ ಏರಿಸಲಾಗಿತ್ತು. 'ಆಟೊ ಪ್ರಯಾಣ ದರ ಏರಿಕೆ ಮಾಡುವ ಕುರಿತು ಪ್ರಸ್ತಾಪ ಮಾಡಲಾಗಿದೆ ಹಾಗೂ ಈ ವಿಷಯದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಆಟೊ ರಿಕ್ಷಾ ಒಕ್ಕೂಟಗಳು ದರ ಏರಿಕೆಗೆ ವಿನಂತಿ ಮಾಡಿವೆ' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

 Auto Fares Likely To Rise In Bengaluru

'ಕಳೆದ ಕೆಲವು ವರ್ಷಗಳಲ್ಲಿ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ. 2013ರಲ್ಲಿ ಒಂದು ಲೀಟರ್ ಆಟೋ ಎಲ್‌ಪಿಗೆ ಗ್ಯಾಸ್‌ಗೆ 28 ರೂ ಇತ್ತು. ಇದು ಈಗ ದುಪ್ಪಟ್ಟಾಗಿದೆ. ಅಂದರೆ ಈಗ 49.95ರೂಗೆ ಏರಿಕೆಯಾಗಿದೆ. ಆದ್ದರಿಂದ ಸರ್ಕಾರಕ್ಕೆ ಕನಿಷ್ಠ ದರವನ್ನು ಏರಿಕೆ ಮಾಡಲು ವಿನಂತಿ ಮಾಡಿದ್ದೇವೆ' ಎಂದು ಆಟೋರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎನ್. ಶ್ರೀನಿವಾಸ್ 'ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕನಿಷ್ಠ ಆಟೋ ದರ 25 ರೂ ಇದೆ. ಈ ದರವನ್ನು 30 ರೂಗೆ ಏರಿಕೆ ಮಾಡಬೇಕು, ಅಂದರೆ ಐದು ರೂಪಾಯಿ ಏರಿಸಬೇಕು ಎಂದು ಆಟೋ ಮಾಲೀಕರು ಹಾಗೂ ಚಾಲಕರ ಅಸೋಸಿಯೇಷನ್‌ಗಳು ಈಚೆಗೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಮತ್ತೆ ಗ್ಯಾಸ್ ದರ ಏರಿಕೆಯಾದ ಬೆನ್ನಲ್ಲೇ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಈಗಾಗದೇ ದರ ಏರಿಕೆ ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ.

'ಏರುತ್ತಿರುವ ಎಲ್‌ಪಿಜಿ ಬೆಲೆ ಹೊರತಾಗಿ, ಕೊರೊನಾ ಸೋಂಕು, ಲಾಕ್‌ಡೌನ್ ಕೂಡ ಆಟೊ ಚಾಲಕರ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಒಕ್ಕೂಟಗಳು ಅಳಲು ತೋಡಿಕೊಂಡಿವೆ. ಲಾಕ್‌ಡೌನ್‌ನಿಂದಾಗಿ ಹಲವು ಆಟೊ ಚಾಲಕರು ಸಂಕಷ್ಟದಲ್ಲಿದ್ದಾರೆ. ಆಟೊ ಚಾಲಕರು ಹಾಗೂ ಕುಟುಂಬದವರು ಪ್ರತಿದಿನ ಜೀವನ ನಡೆಸುವುದೇ ಸವಾಲು ಎನ್ನುವಂಥ ಪರಿಸ್ಥಿತಿ ಇದೆ. ಹೀಗಾಗಿ ಬೆಲೆ ಏರಿಕೆ ಮಾಡಲು ಒತ್ತಾಯಿಸಲಾಗಿದೆ' ಎಂದು ಶ್ರೀನಿವಾಸ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+