ಕಚೇರಿಯಲ್ಲೇ ಬಿಬಿಎಂಪಿ ಅರಣ್ಯ ಅಧಿಕಾರಿ ಮೇಲೆ ಹಲ್ಲೆ !

ಬೆಂಗಳೂರು, ಮಾರ್ಚ್‌ 12: ಬಿಬಿಎಂಪಿ ಅರಣ್ಯ ಅಧಿಕಾರಿ ಮೇಲೆ ಗುತ್ತಿಗೆದಾರ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಅಧಿಕಾರಿಯನ್ನು ಸರ್ಕಾರಿ ಕಚೇರಿಯಲ್ಲಿಯೇ ಹಲ್ಲೆ ನಡೆಸುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Recommended Video

      ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿ-ಗುತ್ತಿಗೆದಾರರ ನಡುವೆ ಫೈಟಿಂಗ್ | Oneindia Kannada

      ಈ ಸಂಬಂಧ ಅರಣ್ಯ ಅಧಿಕಾರಿ ರಾಜಪ್ಪ ನೀಡಿದ ದೂರಿನ ಮೇರೆಗೆ ಗುತ್ತಿಗೆದಾರ ಚನ್ನಪ್ಪ, ಗೋವಿಂದಯ್ಯ ಹಾಗೂ ಶ್ರೀನಿವಾಸ್ ವಿರುದ್ಧ ಹಲಸೂರು ಗೇಟ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

      ದಾಸರಹಳ್ಳಿ ವಲಯದ ಅರಣ್ಯ ಅಧಿಕಾರಿ ರಾಜಪ್ಪ ಕೆಲಸದ ನಿಮಿತ್ತ ಬಿಬಿಎಂಪಿ ಮುಖ್ಯ ಕಚೇರಿಯ ಅರಣ್ಯ ವಿಭಾಗಕ್ಕೆ ಬಂದಿದ್ದರು. ಮಾರ್ಚ್ 04 ರಂದು ಪ್ರಕರಣದ ವಿಚಾರಣೆ ಸಂಬಂಧ ಗುತ್ತಿಗೆದಾರ ಚನ್ನಪ್ಪ, ಗೋವಿಂದಯ್ಯ, ಶ್ರೀನಿವಾಸ್ ಕೂಡ ಬಿಬಿಎಂಪಿ ಮುಖ್ಯ ಕಚೇರಿಗೆ ಬಂದಿದ್ದರು.

      Attack on BBMP forest officer : case registered in Ulsoor gate police

      ಹಳೇ ಕೇಸ್ ಸಂಬಂಧ ಹಣ ನೀಡುವಂತೆ ಅರಣ್ಯ ಅಧಿಕಾರಿ ರಾಜಪ್ಪ ಅವರ ಬಳಿ ಮಾತುಕತೆ ನಡೆದಿದೆ. ಈ ವೇಳೆ ರಾಜಪ್ಪ ಅವರ ಮೇಲೆ ಮೂವರು ಹಲ್ಲೆ ಮಾಡಿದ್ದು ಸಿಸಿಟಿವಿಯಲ್ಲಿ ದಾಕಲಾಗಿದೆ. ರಾಜಪ್ಪ ಸಿಸಿಟಿವಿ ದೃಶ್ಯ ಆಧರಿಸಿ ಪ್ರಕರಣ ದಾಖಲಿಸಿದ್ದು, ಹಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+