Chaddi Gang: ಬೆಂಗಳೂರಿಂದ ಹೊರಗೆ ಒಬ್ಬೊಬ್ಬರೇ ಓಡಾಡ್ತೀರಾ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು!
ಬೆಂಗಳೂರು: ದಿನದಿಂದ ದಿನಕ್ಕೆ ಕ್ರಿಮಿನಲ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ದರೋಡೆಕೋರರ ಕಾಟಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಹೀಗೆ ಬೆಂಗಳೂರು ಕೂಡ ಹಲವು ಪಾತಕ ಕೃತ್ಯಗಳಿಗೆ ಸಾಕ್ಷಿಯಾಗ್ತಿದ್ದು, ರಾತ್ರಿ ರಸ್ತೆಗಳಲ್ಲಿ ಓಡಾಡುವವರನ್ನು ಅಡ್ಡ ಹಾಕಿ ದರೋಡೆ ಮಾಡಲಾಗುತ್ತಿದೆ. ಅದರಲ್ಲೂ ಬೆಂಗಳೂರು ಹೊರವಲಯದ ಕಡೆ ನೀವು ರಾತ್ರಿ ವೇಳೆ ಸಂಚಾರ ಮಾಡುತ್ತಿದ್ದರೆ ತಪ್ಪದೆ ಈ ಸ್ಟೋರಿ ಓದಿ.
ಬೆಂಗಳೂರು ನಗರ ವಿಶಾಲವಾಗಿ ಬೆಳೆದ ನಂತರ ಹೊರವಲಯ ಕೂಡ ಅಭಿವೃದ್ಧಿ ಆಗಿದೆ. ಅದು ಯಾವ ಮಟ್ಟಿಗೆ ಎಂದರೆ, ಕೇವಲ 10-15 ವರ್ಷದ ಹಿಂದೆ ಕಾಡು, ಹಳ್ಳಿಯಂತಿದ್ದ ಜಾಗಗಳು ಈಗ ಬೆಂಗಳೂರು ನಗರವನ್ನೂ ಮೀರಿಸುವ ಹಂತಕ್ಕೆ ಬೆಳೆದಿವೆ. ಹೀಗಾಗಿ ಜನರು ಕೂಡ ಬೆಂಗಳೂರು ನಗರ ಬಿಟ್ಟು ಹೊರವಲಯದ ಪ್ರದೇಶದಲ್ಲಿ ಜಾಗ, ಇಲ್ಲ ಮನೆಗಳನ್ನ ಕೊಂಡು ಸೆಟಲ್ ಆಗುತ್ತಿದ್ದಾರೆ. ಆದರೆ ಹೀಗೆ ಬೇರೆ ಕಡೆಯಿಂದ ಬಂದು ಸೆಟಲ್ ಆದವರ ಮೇಲೆ ಕಣ್ಣು ಹಾಕಿರುವ ದರೋಡೆಕೋರರ ಗುಂಪು, ರಾತ್ರಿ ವೇಳೆ ಅಡ್ಡ ಹಾಕಿ ದರೋಡೆ ಮಾಡುತ್ತಿದ್ದಾರೆ. ರಾತ್ರಿ ವೇಳೆ ಬಿಡಿ ಈಗ ಹಗಲು ಹೊತ್ತಲ್ಲೇ ರಾಬರಿ ಶುರುವಾಗಿದೆ!

ಸರ್ಜಾಪುರ-ವರ್ತೂರು ರಸ್ತೆಯಲ್ಲಿ ದರೋಡೆ ಯತ್ನ!
ಹೌದು, ಬೆಂಗಳೂರಿನಿಂದ ಕೇವಲ 30 ಕಿಲೋ ಮೀಟರ್ ಅಂತರದಲ್ಲಿರುವ ಸರ್ಜಾಪುರ-ವರ್ತೂರು ರಸ್ತೆಯಲ್ಲಿ ದರೋಡೆಕೋರರ ಹಾವಳಿ ಮಿತಿಮೀರಿದೆ. ಇಷ್ಟುದಿನ ಬರೀ ರಾತ್ರಿ ವೇಳೆ ಆಕ್ಟಿವ್ ಆಗಿರುತ್ತಿದ್ದ ಇವರೆಲ್ಲಾ, ಈಗ ಹಗಲು ಅಂದ್ರೆ ಬೆಳ್ಳಂಬೆಳಗ್ಗೆ ಆಕ್ಟೀವ್ ಆಗಿ ಕಳ್ಳತನಕ್ಕೆ ನುಗ್ಗುತ್ತಿದ್ದಾರೆ. ಹೀಗೆ ಕಾರ್‌ನಲ್ಲಿ ಹೋಗುತ್ತಿದ್ದ ಇಬ್ಬರನ್ನು ಹಿಂಬಾಲಿಸಿದ್ದ ಕೆಲ ದರೋಡೆಕೋರರ ಗುಂಪು ಪೊಲೀಸರ ಅತಿಥಿಯಾಗಿದೆ. ಘಟನೆ ಬಗ್ಗೆ ವಿಡಿಯೋ ಮಾಡಿದ್ದ ಕಾರ್ ಮಾಲೀಕರು, ಬೆಂಗಳೂರು ಪೊಲೀಸರಿಗೆ ಟ್ವೀಟ್ ಟ್ಯಾಗ್ ಮಾಡಿ ಘಟನೆಯ ಮಾಹಿತಿ ನೀಡಿದ್ದರು.
@east_bengaluru @BlrCityPolice @blrcitytraffic . Incident occurred on the new road which is connecting from DSR rivera to Varthur. Goons on the street of Bangalore . Is there any action taken yet on it @DCPTrEastBCP pic.twitter.com/kk8uENgdeB
— RON (@ronmania2009) July 13, 2023
ಸುಮ್ಮನೆ ಹೋಗುತ್ತಿದ್ದಾಗಲೇ ಕಿರಿಕ್!
ಸರ್ಜಾಪುರ-ವರ್ತೂರು ರಸ್ತೆ ಕೆಲ ವರ್ಷದಿಂದ ಅಭಿವೃದ್ಧಿ ಕಾಣುತ್ತಿದೆ. ಹೀಗಾಗಿಯೇ ಇಲ್ಲಿ ಇನ್ನೂ ಹಳ್ಳಿಯ ವಾತಾವರಣ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿ ಗುಂಪು, ನಿತ್ಯವೂ ಅಮಾಯಕರನ್ನ ಹೆದರಿಸಿ & ಬೆದರಿಸಿ ದರೋಡೆ ಮಾಡುತ್ತಿದ್ದಾರೆ. ಹೀಗೆ ಕಾರೊಂದನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಲ್ವರು ಕಿರಾತಕರ ಗುಂಪು, ಮೊದಲಿಗೆ ಕಾರ್‌ಗೆ ಗುದ್ದಿಸಿ ಕಿರಿಕ್ ತೆಗೆಯೋದಕ್ಕೆ ನೋಡಿದೆ. ಆದರೆ ಕಾರು ಚಾಲಕ ಇದನ್ನು ಅರ್ಥ ಮಾಡಿಕೊಂಡು ಬಚಾವ್ ಆಗಿದ್ದಾನೆ. ಮುಂದೆ ಹೋಗಿ ಕಾರನ್ನು ಅಡ್ಡ ಹಾಕಿ ದರೋಡೆಗೆ ಯತ್ನಿಸಿದ್ದು, ತಕ್ಷಣ ಕಾರು ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ.
Several harrowing robberies took place at Metropolis Fair Oaks, Sarjapur, in the last 2-3 days. Five armed people entered the society illegally. Residents are in touch with the police, but to no avail. @DgpKarnataka @BlrCityPolice, please help! pic.twitter.com/MPSNp1WQaN
— Citizens Movement, East Bengaluru (@east_bengaluru) July 13, 2023
ದರೋಡೆ ಆರೋಪಿಗಳು ಕಂಬಿ ಹಿಂದೆ!
ಇನ್ನು ಈ ಬಗ್ಗೆ ವಿಡಿಯೋ ಟ್ವೀಟ್ ಮಾಡುತ್ತಿದ್ದಂತೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದರು. ಅಲ್ಲದೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದು ಕಂಬಿ ಹಿಂದೆ ತಳ್ಳಿದ್ದಾರೆ. ಅಲ್ಲದೆ ಆರೋಪಿಗಳ ಫೋಟೋ ಟ್ವೀಟ್ ಮಾಡಿ, ಘಟನೆಯಲ್ಲಿ ಸಂತ್ರಸ್ತರಾಗಿದ್ದ ವ್ಯಕ್ತಿಗೂ ಮಾಹಿತಿ ನೀಡಿದ್ದಾರೆ. ಆದರೆ ಈಗ ವಿಡಿಯೋ ನೋಡುತ್ತಿರುವ ಜನ ಭಯಗೊಂಡಿದ್ದು, ಬೆಂಗಳೂರಿನ ಹೊರಗೆ ಹೇಗಪ್ಪಾ ಹೋಗೋದು ಅಂತಾ ಚಿಂತೆ ಮಾಡುವಂತಾಗಿದೆ.

ಚಡ್ಡಿ ಗ್ಯಾಂಗ್ ಹಾವಳಿ ಜೋರು!
ಇದಿಷ್ಟೂ ಒಂದು ಕಡೆಯಾದರೆ, ಇನ್ನೊಂದು ಕಡೆ ಬೆಂಗಳೂರು ಹೊರವಲಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಹಾವಳಿ ಜೋರಾಗುತ್ತಿದೆ. ಸರ್ಜಾಪುರ ರಸ್ತೆ ಸುತ್ತಮುತ್ತಲೂ ಚಡ್ಡಿ ಗ್ಯಾಂಗ್‌ನ ಹಾವಳಿ ಜೋರಾಗಿದೆ. ಕೈಯಲ್ಲಿ ಆಯುಧ ಹಿಡಿದು ಕಳ್ಳತನಕ್ಕೆ ಇಳಿಯುತ್ತಿರುವ ಈ ಗ್ಯಾಂಗ್ ಜನರನ್ನ ಭಯಪಡಿಸುತ್ತಿದೆ. ಐವರು ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಗ್ಯಾಂಗ್‌ನ ಸದಸ್ಯರು ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್, ವಿಲ್ಲಾಗಳ ಬಳಿ ಚಡ್ಡಿ ಗ್ಯಾಂಗ್ ಹೆಜ್ಜೆ ಹಾಕಿದ್ದಾರೆ. ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನ ಪ್ರಯತ್ನ ನಡೆದಿತ್ತು. ಆದರೆ ಕೆಲವು ತಿಂಗಳಿಂದ ಚಡ್ಡಿ ಗ್ಯಾಂಗ್ ಕಾಟ ತಪ್ಪಿತ್ತಾದರೂ ಈಗ ಮತ್ತೆ ಶುರುವಾಗಿದೆ.
-
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications