ನಟ ಜಗ್ಗೇಶ್ ಪುತ್ರನ ಮೇಲೆ ಹಲ್ಲೆ: ಆರೋಪಿಗೆ ಜಾಮೀನು
ಬೆಂಗಳೂರು, ಆಗಸ್ಟ್ .22 : ನಟ ಜಗ್ಗೇಶ್ ಪುತ್ರ ಗುರುರಾಜ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಶಂಕರ್ ಗೆ ಮಂಗಳವಾರ ಜಾಮೀನು ಸಿಕ್ಕಿದೆ.
ತಲೆ ಮರೆಸಿಕೊಂಡಿರುವ ಶಿವಶಂಕರ್ ಗೆ ಮಂಗಳವಾರ 69ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಮೂರ್ತೀ ನಂದಕುಮಾರ್ ಅವರು ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ಆಗಸ್ಟ್ 14ರಂದು ಬೆಂಗಳೂರಿನ ಆರ್ ಟಿನ ನಗರದಲ್ಲಿ ಬೆಳಗ್ಗೆ ಗುರುರಾಜ್ ತಮ್ಮ ಮಗನನ್ನ ಶಾಲೆಗೆ ಕರೆದುಕೊಂಡು ಹೊಗುವ ವೇಳೆ ಕ್ಷುಲಕ ಕಾರಣಕ್ಕೆ ಗುರುರಾಜ್ ಮೇಲೆ ಹಲ್ಲೆ ನಡೆದಿತ್ತು.












Click it and Unblock the Notifications