ಮೇ 28, ಜೂನ್ 11ರಂದು ನಿಗದಿಯಾಗಿದ್ದ ಬೆಂ.ವಿವಿ ಪರೀಕ್ಷೆಗಳು ಮುಂದಕ್ಕೆ
ಬೆಂಗಳೂರು, ಮೇ 26: ರಾಜಧಾನಿಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮೇ 28 ಹಾಗೂ ಜೂನ್ 11 ರಂದು ನಿಗದಿ ಪಡಿಸಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ತಿಳಿಸಿದೆ.
ಮೇ 28ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದರೆ, ಜೂನ್ 11 ರಂದು ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ.
ಹೀಗಾಗಿ ಈ ಎರಡೂ ದಿನ ನಡೆಯ ಬೇಕಿದ್ದ ಅನೇಕ ಪದವಿ ಪರೀಕ್ಷೆಗಳನ್ನು ಜೂ.7,13 ಹಾಗೂ 14 ಕ್ಕೆ ಮುಂದೂಡಲಾಗಿದೆ. ಮೇ 28ರಂದು ನಿಗದಿಯಾಗಿದ್ದ ಎರಡನೇ ಸೆಮಿಸ್ಟರ್ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಎಚ್‌ಎಂ, ಬಿಎಸ್‌ಡಬ್ಲ್ಯೂ, ಬಿಸಿಎ, ಬಿಎಸ್ಸಿ(ಫ್ಯಾಡ್) ಬಿಎಸ್ಸಿ (ಐಡಿಡಿ) ಬಿವಿಎ, ಬಿಕಾಂ(ವಿಕೇಷನಲ್), ಬಿ ವೋಕ್ (ಆರ್ಎಂ) ಬಿವೋಕ್(ಫುಡ್ ಪ್ರೊಸೆಸಿಂಗ್ ಆಂಡ್ ನ್ಯೂಟ್ರಾಸ್ಯೂಟಿಕಲ್ಸ್) 4ನೇ ಸೆಮಿಸ್ಟರ್ ಬಿವೋಕ್(ಎಂಎಲ್‌ಟಿ) ಪರೀಕ್ಷೆಗಳನ್ನು ಜೂನ್ 13ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಸಲಾಗುತ್ತದೆ.

ಅದೇ ರೀತಿ ಮೇ 28ರಂದು ಮಧ್ಯಾಹ್ನ ನಿಗದಿಪಿಡಿಸಿದ್ದ 6ನೇ ಸೆಮಿಸ್ಟರ್ನ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಎಚ್‌ಎಂ, ಬಿವಿಡ, ಬಿಎಸ್ಸಿ(ಫ್ಯಾಡ್), ಬಿವೋಕ್)ಡೇಟಾ ಆಂಡ್ ವೆಬ್ ಅನಾಲಿಟಿಕ್ಸ್) ಪರೀಕ್ಷೆಗಳನ್ನು ಜೂ.7ರಂದು ಮಧ್ಯಾಹ್ನ 2ರಿಂದ ಸಂಜೆ 5 ರವರೆಗೆ ನಡೆಸಲಾಗುತ್ತದೆ.
ಜೂ.11ರಂದು ಬೆಳಗ್ಗೆ ನಿಗದಿಪಡಿಸಿದ್ದ 2 ನೇ ಸೆಮಿಸ್ಟರ್ನ ಬಿಎ, ಬಿಎಸ್ಸಿ ಪರೀಕ್ಷೆಗಳನ್ನು ಜೂ.14ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಸಲಾಗುತ್ತದೆ. ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಮೃತಪಟ್ಟಿದ್ದ ಕಾರಣ ಜಯನಗರ ಚುನಾವಣೆಯನ್ನು ಮುಂದೂಡಲಾಗಿತ್ತು. ಇನ್ನು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ಅಪಾರ್ಟ್‌ಮೆಂಟ್ ವೊಂದರಲ್ಲಿ 10 ಸಾವಿರಕ್ಕೂ ಹೆಚ್ಚು ಮತದಾರರ ಚೀಟಿ ದೊರೆತಿದ್ದ ಕಾರಣ ರಾಜರಾಜೇಶ್ವರಿ ನಗರ ಚುನಾವಣೆಯನ್ನೂ ಮುಂದೂಡಲಾಗಿತ್ತು.












Click it and Unblock the Notifications