ವೇರ್‌ಹೌಸ್‌ನಿಂದ ನೈಕ್‌ ಶೂಗಳನ್ನು ತುಂಬಿದ್ದ ಲಾರಿಯನ್ನೇ ಕದ್ದ ಅಸ್ಸಾಂ ಮೂಲದ ಕಳ್ಳರ ಬಂಧನ

ಬೆಂಗಳೂರು, ಜನವರಿ 03: ಬೆಂಗಳೂರಿನ ಗೋದಾಮಿನಿಂದ 1,558 ನೈಕ್ ಶೂಗಳನ್ನು ತುಂಬಿದ್ದ ಕಂಟೈನರ್‌ ಅನ್ನು ಕಳವು ಮಾಡಿದ್ದ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತನಾದ ಒಬ್ಬ ಆರೋಪಿಯು ನೈಕ್ ಗೋದಾಮಿನಲ್ಲಿ ಸರಕು ವಾಹನ ಚಾಲಕನಾಗಿ ಸೇರಿಕೊಂಡಿದ್ದನು. ಕೆಲವ ಮಾಡುತ್ತಲೇ ಶೂ ತುಂಬಿದ ಕಂಟೈನರ್ ಅನ್ನು ಕದ್ದಿದ್ದಾನೆ ಎಂದು ವರದಿಗಳು ತಿಳಿಸಿವೆ.

 Assam-based thieves arrested for stealing container full of Nike shoes from warehouse

ಆರೋಪಿಗಳನ್ನು 30 ವರ್ಷದ ಶುಭಾನ್ ಪಾಷಾ, 26 ವರ್ಷದ ಮನ್ಸರ್ ಅಲಿ ಮತ್ತು 26 ವರ್ಷದ ಶಾಹಿದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಮೂವರೂ ಅಸ್ಸಾಂ ಮೂಲದವರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರ ನಾಲ್ವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಹಿಂದೆ ಸುಸ್ಥಾಪಿತ ಕಂಪನಿಗಳ ಗೋದಾಮುಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಈ ಗೋದಾಮುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ತಿಳಿದಿದ್ದರು ಎನ್ನಲಾಗಿದೆ.

ಶೂ ತುಂಬಿದ ಕಂಟೈನರ್ ಕಳವು:

ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಸಲೇಹ್ ಅಹಮದ್ ಆನೇಕಲ್‌ನ ಶೆಟ್ಟಿಹಳ್ಳಿಯಲ್ಲಿರುವ ನೈಕ್ ಶೂ ಗೋದಾಮಿನಲ್ಲಿ ಸರಕು ಸಾಗಣೆ ವಾಹನ ಚಾಲಕನಾಗಿ ಸೇರಿಕೊಂಡಿದ್ದ. ಅವನು 1,558 ಜೋಡಿ ಬ್ರಾಂಡೆಡ್ ಶೂಗಳನ್ನು ತುಂಬಿದ್ದ ಸರಕು ವಾಹನದೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಅನುಗೊಂಡನಹಳ್ಳಿ ಬಳಿಯ ಮೈಂತ್ರಾ ಗೋದಾಮಿಗೆ ಸರಕುಗಳನ್ನು ವರ್ಗಾಯಿಸಬೇಕಾಗಿತ್ತು. ಆದರೆ ಸಾಲೆ ಅವನು ಬೆಂಗಳೂರಿನ ರಜಾಕ್ ಪಾಳ್ಯದಲ್ಲಿರುವ ಕೋಣೆಗೆ ಸರಕುಗಳನ್ನು ತೆಗೆದುಕೊಂಡು ಹೋಗಿದ್ದನು. ಬಳಿಕ ಚಿಕ್ಕಜಾಲ ಸಮೀಪದ ತರಬನಹಳ್ಳಿಯಲ್ಲಿ ವಾಹನವನ್ನು ಬಿಟ್ಟು ಹೋಗಿದ್ದನು.

ಬಳಿಕ ಪೊಲೀಸರು ವಾಹನದಲ್ಲಿ ಅಳವಡಿಸಲಾಗಿರುವ ಜಿಪಿಎಸ್ ಟ್ರ್ಯಾಕರ್ ಬಳಸಿ ವಾಹನವನ್ನು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ. ಘಟನೆ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಕಳ್ಳತನವಾದ ಶೂಗಳನ್ನು ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+