ಕೋಟೆಗದ್ದೆ ರವಿ ಅವರ 'ತಂತ್ರ' ಚಿತ್ರಕಲಾ ಪ್ರದರ್ಶನ ಯಶಸ್ವಿ
ಬೆಂಗಳೂರು, ಏಪ್ರಿಲ್ 30 : ಬೆಂಗಳೂರಿನ ಫಿಡೆಲಿಟಸ್ ಗ್ಯಾಲರಿಯಲ್ಲಿ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಕೋಟೆಗದ್ದೆ ರವಿ ಅವರ ಕಲಾಕೃತಿಗಳ ಪ್ರದರ್ಶನ 'ತಂತ್ರ' ಗೋವಾದಲ್ಲಿ ಯಶಸ್ವಿಯಾಗಿ ಜರುಗಿತು.
ವಾಗತ್ತೋರ್ ಬೀಚ್ ರಸ್ತೆಯಲ್ಲಿರುವ ಉಜ್ವಲ್ ಕಲಾ ಗ್ಯಾಲರಿಯಲ್ಲಿ ಏಪ್ರಿಲ್ 18ರಿಂದ 22ರವರೆಗೆ ನಡೆಯಿತು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಬೆಂಗಳೂರಿನ ಫಿಡಿಲಿಟಸ್ ಗ್ಯಾಲರಿಯು ಈ ಪ್ರದರ್ಶನವನ್ನು ಪ್ರಸ್ತುತಪಡಿಸಿತ್ತು.
ಕೋಟೆಗದ್ದೆ ರವಿ ಅವರ ಸುಮಾರು 23 ಕಲಾಕೃತಿಗಳನ್ನೊಳಗೊಂಡ ಪ್ರದರ್ಶನವು 'ತಂತ್ರ' ಎಂಬ ಶಿರೋನಾಮೆಯಲ್ಲಿ ಮೊದಲ ಬಾರಿಗೆ ಗೋವಾದಲ್ಲಿ ಆಯೋಜಿಸಲಾಗಿದ್ದು ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 7ರವರೆಗೆ ಐದು ದಿನಗಳ ಕಾಲ ಪ್ರದರ್ಶಿಸಲ್ಪಟ್ಟವು.

18 ಏಪ್ರಿಲ್ 2018ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆಗೊಂಡ ಪ್ರದರ್ಶನಕ್ಕೆ ಪಣಜಿಯ ಇನ್‌ಸ್ಟಿಟ್ಯೂಟ್ ಆಫ್
ಮರಿಜಸ್ ಬ್ರಿಗಾಂಜ್ ನ ಚೇರಮನ್ ಸಂಜಯ್ ಹರ್ಮಾಲ್ಕರ್ ಚಾಲನೆ ನೀಡಿದರು.
ಗೋವಾದ ಓಜೋನ್ ಗ್ರುಪ್‌ನ ಉಪಾಧ್ಯಕ್ಷ ಗಜಾನನ ಕರ್ಕರೆ ಹಾಗೂ ಬೆಂಗಳೂರಿನ ಫಿಡೆಲಿಟಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಚ್ಯುತ್ ಗೌಡ ಅತಿಥಿಗಳಾಗಿ ಆಗಮಿಸಿದ್ದರು. ಜೊತೆಗೆ ಫಿಡಿಲಿಟಸ್ ಗ್ಯಾಲರಿಯ ಮುಖ್ಯಸ್ಥರು ಹಾಗು ಸಹೋದ್ಯೋಗಿಗಳು ಜೊತೆಗೆ ಗೋವಾದ ಕಲಾ ಪ್ರೇಮಿಗಳು ಈ ಪ್ರದರ್ಶನಕ್ಕೆ ಸಾಕ್ಷಿಗಳಾಗಿದ್ದರು.

ಕಲಾವಿದರ ಪರಿಚಯ : ಕೋಟೆಗದ್ದೆ ರವಿ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಚಿಕ್ಕ ಗ್ರಾಮ ಕೋಟೆಗದ್ದೆಯವರು. ತಮ್ಮೂರಲ್ಲೇ ಶಿಕ್ಷಣ ಮುಗಿಸಿ ನಂತರ ಮೈಸೂರಿನ ಡಿಎಂಎಸ್ ಲಲಿತ ಕಲಾ ಮಹಾ ಸಂಸ್ಥಾನದಿಂದ ಲಲಿತಕಲೆಯಲ್ಲಿ ಪದವಿ ಪಡೆದರು.
ಅಕ್ರೈಲಿಕ್ ಮಾದ್ಯಮದಲ್ಲಿ ಕ್ಯಾನ್ವಾಸ್‌ನ ಮೇಲೆ ಸಮಕಾಲೀನ ಶೈಲಿಯಲ್ಲಿ ಸೃಜನಾತ್ಮಕ ಕಲಾಕೃತಿಗಳನ್ನು ರಚಿಸುವ ರವಿಯವರು ಒಬ್ಬ ಪ್ರಯೋಗಶೀಲ ಕಲಾವಿದ ಕೂಡ. ಭಾರತೀಯ ಸಂಸ್ಕೃತಿ ಆದ್ಯಾತ್ಮ ಹಾಗು ಪೌರಾಣಿಕ ವಿಷಯಗಳನ್ನು ಸಮಕಾಲೀನ ಶೈಲಿಗೆ ಒಗ್ಗಿಸುವಲ್ಲಿ ಪ್ರರಿಣಿತರಾಗಿರುವ ಹಾಗು ಈಗಾಗಲೇ ಚಿತ್ರಕಲಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ರವಿ ದೇಶದ ಹಲವಾರು ಭಾಗಗಳಲ್ಲಿ ತಮ್ಮ ಕಲಾ ಪ್ರದರ್ಶನದ ಮೂಲಕ ಹೆಸರು ಮಾಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications