• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ? ಹಾಗಾದರೆ 100ಕ್ಕೆ ಡಯಲ್ ಮಾಡಿ

|

ಬೆಂಗಳೂರು, ಜನವರಿ 08: ನೀವು ಸೈಬರ್ ವಂಚನೆಗೆ ಒಳಗಾಗಿದ್ದೀರಾ ಹಾಗಾದರೆ 100ಕ್ಕೆ ಡಯಲ್ ಮಾಡಿ ನಿಮ್ಮ ದೂರು ನೀಡಿ.

ಯಾವುದೇ ಕಾರಣಕ್ಕೂ ನೀವು ಘಟನೆ ನಡೆದು 24 ಗಂಟೆಗಳ ಬಳಿಕ ದೂರು ನೀಡಬೇಡಿ. ನೀವು ಹಣ ಕಳೆದುಕೊಂಡು 24 ತಾಸಿನೊಳಗೆ ದೂರು ನೀಡಿದರೆ ನಿಮ್ಮ ಹಣ ನಿಮ್ಮ ಕೈಸೇರುವ ಸಾಧ್ಯತೆ ಹೆಚ್ಚಿದೆ.

ಬೆಂಗಳೂರು ಪೊಲೀಸರು ಅದರಲ್ಲೂ ಸೈಬರ್‌ಕ್ರೈಂ ಎಕಾನಾಮಿಕ್ ಆಂಡ್ ನಾರ್ಕೋಟಿಕ್ಸ್ ಪೊಲೀಸರು ಈ ಸೈಬರ್ ಅಪರಾಧಗಳ ತಡೆಗೆ ಬೇರೆ ರೀತಿಯ ದಾರಿಯನ್ನೇ ಹಿಡಿಯಬೇಕು ಹಿಡಿಯಲು ಮುಂದಾಗಿದ್ದಾರೆ.

ಎಷ್ಟು ಬೇಗ ಪ್ರಕರಣಗಳ ಕುರಿತು ತನಿಖೆ ನಡೆಸುತ್ತೇವೋ ಅಷ್ಟು ಬೇಗ ಸಂತ್ರಸ್ತರ ಹಣ ವಾಪಸ್ ಸಿಗುವ ಸಾಧ್ಯತೆ ಇದೆ, ಆನ್‌ಲೈನ್ ವಂಚನೆಗಳನ್ನು ತಡೆಯಲು ಪೊಲೀಸರು ಪ್ರಾಯೋಗಿಕ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು,100ಕ್ಕೆ ಕರೆ ಮಾಡುವ ಮೂಲಕ ನೀವು ದೂರು ನೀಡಬಹುದಾಗಿದೆ.ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ.

ಆನ್‌ಲೈನ್ ತುರ್ತು ಸಾಲಕ್ಕೆ ಕೈ ಹಾಕಿ ಬದುಕು ತೂತು ಮಾಡಿಕೊಳ್ಳಬೇಡಿ!

ಡಿಸಿಪಿ ಕಮಾಂಡ್ ಸೆಂಟರ್ ಇಶಾ ಪಂತ್ ಮಾತನಾಡಿ, ಡಿಸೆಂಬರ್ 22ರಂದೇ ಪೊಲೀಸ್ ಇಲಾಖೆಯು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.

ಒಂದೊಮ್ಮೆ ನೀವು ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 100ಕ್ಕೆ ಕರೆ ಮಾಡಬೇಕು, ಪೊಲೀಸರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜತೆ ಹಾಗೂ ಇತರೆ ಬ್ಯಾಂಕ್‌ಗಳ ಜತೆ ಸಂಪರ್ಕದಲ್ಲಿದ್ದು, ತಕ್ಷಣದಲ್ಲಿ ಖಾತೆಯನ್ನು ಲಾಕ್ ಮಾಡಲಾಗುತ್ತದೆ.

ಮೊದಲು ದಿನಕ್ಕೆ ನಾಲ್ಕರಿಂದ ಐದು ಸೈಬರ್ ಕ್ರೈಂ ದೂರುಗಳು ಬರುತ್ತಿದ್ದರು, ಆದರೆ ಈಗ ದಿನಕ್ಕೆ 20ಕ್ಕೂ ಅಧಿಕ ಕರೆಗಳು ಬರುತ್ತಿವೆ.

ಈ ಪ್ರಾಯೋಗಿಕ ಯೋಜನೆಯಲ್ಲಿ 22 ಮಂದಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕರಣಗಳ ಬಗ್ಗೆ ಅರಿಯಲು ಪೊಲೀಸ್ ಅಧಿಕಾರಿ ನಿತ್ಯ ಕಂಟ್ರೋಲ್ ರೂಂಗಳಿಗೆ ತೆರಳಲಿದ್ದಾರೆ.

ಚೆನ್ನೈನಲ್ಲಿ ಆಗಸ್ಟ್ 1 ರಂದು ಸೈಬರ್ ಕ್ರೈಂ ಸೆಲ್‌ಗಳನ್ನು ತೆರೆಯಲಾಗಿದೆ. ಸಾಕಷ್ಟು ಮಂದಿಯ ಹಣ ವಾಪಸ್ ಕೈಸೇರಿದೆ.

ಸೈಬರ್ ಕ್ರೈಂ ವರದಿ ಮಾಡುವುದು ಹೇಗೆ?

*100 ಡಯಲ್ ಮಾಡಿ

*ಸೈಬರ್ ಕ್ರೈಂ ಆಯ್ಕೆಮಾಡಿ

*ಸಂತ್ರಸ್ತರಿಂದ ಕೆಲವು ಮಾಹಿತಿ ಪಡೆಯಲಾಗುತ್ತದೆ

*ಪ್ರಕರಣ ದಾಖಲಾಗುತ್ತದೆ

*ಸೈಬರ್ ಕ್ರೈಂ ಪೊಲೀಸರು ಆರ್‌ಬಿಐ, ಬ್ಯಾಂಕ್‌ನೊಂದಿಗೆ ಸಂಪರ್ಕ

*ಸಂತ್ರಸ್ತರ ಬ್ಯಾಂಕ್ ಖಾತೆ ಲಾಕ್ ಮಾಡಲಾಗುವುದು

*ಎಫ್‌ಐಆರ್ ದಾಖಲು

English summary
City Police have initiated a pilot project to stop cyber crimes,where victim of online crime can dial 100 and report the incident on the phone and action will be taken immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X