ಕನ್ನಡ ಕಲಿಸಲು ಆಸಕ್ತಿಯಿದೆಯೆ, ಇಲ್ಲಿದೆ ಉದ್ಯೋಗಾವಕಾಶ

ಬೆಂಗಳೂರು, ಜೂನ್ 07 : ಬೆಂಗಳೂರಿನ ವಿಸ್ತೀರ್ಣ ಅಗಾಧವಾಗುತ್ತಿದ್ದಂತೆ, ಇಲ್ಲಿ ಉದ್ಯೋಗದ ನಿಮಿತ್ತ ಬಂದು ಸೇರುವ ಅನ್ಯ ಭಾಷೀಯ ಜನರು ಹೆಚ್ಚಾಗುತ್ತಿದ್ದಂತೆ, ಅವರಿಗೆ ಕನ್ನಡ ಕಲಿಸುವ ಅಗತ್ಯವೂ ಹೆಚ್ಚುತ್ತಿದೆ.

ಬೆಂಗಳೂರಿನಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಹಲವಾರು ಸಂಸ್ಥೆಗಳಿವೆ. ಅವುಗಳಲ್ಲಿ ಪ್ರತಿವಾರ ಕನ್ನಡದ ಏಳ್ಗೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಿಸುತ್ತಿರುವ 'ಮುನ್ನೋಟ' ಕನ್ನಡ ಪುಸ್ತಕ ಮಳಿಗೆಯೂ ಒಂದು.

Are you interested to teach Kannada? Here is an opportunity

ಈ ಸಂಸ್ಥೆಯ ಮೂಲಕ ಕನ್ನಡೇತರರಿಗೆ ಕನ್ನಡ ಕಲಿಸಲು ಉತ್ಸುಕತೆ ಇದ್ದರೆ, ಈ ಉದ್ಯೋಗಾವಕಾಶವನ್ನು ಬಳಸಿಕೊಂಡು ಕನ್ನಡಕ್ಕೆ ಅಳಿಲುಸೇವೆ ಮಾಡಲು ಆಸಕ್ತಿಯಿದ್ದರೆ ಕೆಳಗಿನ ವಿಳಾಸಕ್ಕೆ ಕೂಡಲೆ ಸಂಪರ್ಕಿಸಿ.

ಕೆಲ ನಿಬಂಧನೆಗಳು ಇಂತಿವೆ

* ಕಲಿಸಲು ಆಸಕ್ತಿಯಿರುವವರು ಮೂವತ್ತು ವರ್ಷದೊಳಗಿನ ಯುವಕರಾಗಿರಬೇಕು.
* ಇಂಗ್ಲಿಷ್ ಮತ್ತು ಕನ್ನಡ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿರಬೇಕು.
* ಕನ್ನಡ ಕಲಿಸುವ ಬಗ್ಗೆ ಆಸಕ್ತಿ ಮತ್ತು ಪ್ರೀತಿ ಇರಬೇಕು.
* ಬೆಂಗಳೂರಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಈ ಎಲ್ಲ ನಿಬಂಧನೆಗಳು ಒಪ್ಪಿಗೆಯಾದಲ್ಲಿ [email protected] ವಿಳಾಸಕ್ಕೆ ತಮ್ಮ ಬಯೋಡೇಟಾವನ್ನು ಕಳಿಸಬಹುದು. ಬೇರೆ ಯಾರಾದರೂ ಉತ್ಸುಕರಾಗಿದ್ದರೆ ಅವರಿಗೆ ಕೂಡ ಈ ಉದ್ಯೋಗಾವಕಾಶದ ಬಗ್ಗೆ ತಿಳಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+