ಬಿಬಿಎಂಪಿಯಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ

ಬೆಂಗಳೂರು, ಜ.8 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31.

ಹುದ್ದೆಗಳ ಸಂಖ್ಯೆಯನ್ನು ಹೆಚ್ಚು ಅಥವ ಕಡಿಮೆ ಮಾಡುವ ಅಧಿಕಾರ ಮಹಾನಗರ ಪಾಲಿಕೆಯ ಆಯುಕ್ತರಿಗೆ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಂಜೆ ಅಥವ ಕೋರಿಯರ್ ಜನವರಿ 31ರೊಳಗೆ ಸಲ್ಲಿಸಬೇಕು. ಖುದ್ದಾಗಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

BBMP

ಪ್ರಥಮ ದರ್ಜೆ ಸಹಾಯಕರ 2, ದ್ವಿತೀಯ ದರ್ಜೆ ಸಹಾಯಕರ 3, ಶುಶ್ರೂಷಕಿಯರ 1, ಶಿಕ್ಷಕರು (ಸರ್ಸರಿ) 2, ವೈರ್ ಮೆನ್ 3, ಫಾರ್ಮಾಸಿಸ್ಟ್ 1, ಶೀಘ್ರ ಲಿಪಿಕಾರರ 1 ಹುದ್ದೆಗಳು ಖಾಲಿ ಇವೆ. [ನೇಮಕಾತಿ ಆದೇಶ ಇಲ್ಲಿದೆ ನೋಡಿ]

ಅರ್ಜಿ ಸಲ್ಲಿಸಲು ಕನಿಷ್ಠ ಮಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 40 ವರ್ಷ. ಎಲ್ಲಾ ಹುದ್ದೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾತ್ರ ಮೀಸಲಾಗಿರುತ್ತದೆ. ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿರುತ್ತದೆ.

ಅರ್ಜಿಯನ್ನು ಪಾಲಿಕೆಯ http://www.bbmp.gov.in/ ವೆಬ್‌ಸೈಟ್‌ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಅರ್ಜಿಯನ್ನು ಪಾಲಿಕೆ ಕಚೇರಿಯಲ್ಲಿ ಒದಗಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31.

ಅರ್ಜಿ ಸಲ್ಲಿಸಲು ವಿಳಾಸ : ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಹಾಯಕ ಆಯುಕ್ತರು, ನೇಮಕಾತಿ ಮತ್ತು ವಿಚಾರಣೆ ವಿಭಾಗ, ಅನೆಕ್ಸ್ ಬಿಲ್ಡಿಂಗ್ - 2, 3ನೇ ಮಹಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್‌.ಆರ್.ಚೌಕ, ಬೆಂಗಳೂರು - 560002 ವಿಳಾಸಕ್ಕೆ ಲಕೋಟೆಯ ಮೇಲೆ ಬ್ಯಾಕ್‌ಲಾಗ್ ಹುದ್ದೆಗಾಗಿ ಅರ್ಜಿ ಎಂದು ಬರೆದು ಹುದ್ದೆಯ ಹೆಸರನ್ನು ಬರೆದು ಕಳುಹಿಸಬೇಕು.

ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರತ್ಯೇಕ ಹುದ್ದೆಗೆ ಪ್ರತ್ಯೇಕ ಅರ್ಜಿಯನ್ನು ದಾಖಲೆಯೊಂದಿಗೆ ಸಲ್ಲಿಸಬೇಕಾಗುತ್ತದೆ. 100 ರೂ.ಗಳ ನಿಗದಿತ ಇಂಡಿಯನ್ ಪೋಸ್ಟಲ್ ಆರ್ಡರ್‌ ಅನ್ನು ಆಯಕ್ತರು ಬೆಂಗಳೂರು ಮಹಾನಗರ ಪಾಲಿಕೆ, ಎನ್‌.ಆರ್‌.ಚೌಕ, ಬೆಂಗಳೂರು - 560002 ಅವರ ಹೆಸರಿಗೆ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+