ಜಿಮ್, ಬ್ಯೂಟಿ ಪಾರ್ಲರ್ ತೆರೆಯಲು ಯೋಚನೆ ಮಾಡ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ!
ಸ್ವಂತ ಉದ್ಯೋಗ ಮಾಡಬೇಕು, ಸ್ವಂತ ಉದ್ಯಮ ಕಟ್ಟಿ ಬೆಳೆಸಬೇಕು ಅನ್ನೋದು ಪ್ರತಿಯೊಬ್ಬ ಯುವಕ & ಯುವತಿಯರ ಕನಸು. ಅದರಲ್ಲೂ ಸ್ವಂತ ಜಿಮ್ & ಸ್ವಂತ ಬ್ಯೂಟಿ ಪಾರ್ಲರ್ ತೆರೆಯುವುದು ಅನೇಕರ ಕನಸು. ಆದರೆ ಇದಕ್ಕೆ ತರಬೇತಿ ಅತ್ಯಗತ್ಯ. ಇದೀಗ ಉಚಿತವಾಗಿ, ಈ ಬಗ್ಗೆ ತರಬೇತಿ ನೀಡಲು ಸರ್ಕಾರವೇ ಯೋಜನೆ ರೂಪಿಸಿದೆ. ಹಾಗಾದರೆ ಈ ತರಬೇತಿಗೆ ಅರ್ಜಿ ಸಲ್ಲಿಸೋದು ಹೇಗೆ? ಈ ಉಚಿತ ತರಬೇತಿ ಶಿಬಿರಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2023-24ರ ಸಾಲಿನಲ್ಲಿ ಯೋಜನೆಯ ಕೈಗೊಳ್ಳಲಾಗಿದೆ. ಜನವರಿ 24 ರಿಂದ ಫೆಬ್ರವರಿ 7 ರವರೆಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಮ್/ಫಿಟ್ನೆಸ್ ತರಬೇತಿ ಶಿಬಿರವು ಜನವರಿ 24 ರಿಂದ ಫೆಬ್ರವರಿ 7ರ ತನಕ, ಒಟ್ಟು 15 ದಿನ ಕಾಲ ನಡೆಯಲಿದೆ. ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ವಿದ್ಯಾನಗರ & ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಜಿಮ್ ಟ್ರೈನಿಂಗ್‌ಗೆ ಅರ್ಹತೆ ಏನು?
ಇನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡುವ ಜಿಮ್ ಟ್ರೈನಿಂಗ್‌ಗೆ ಅರ್ಜಿ ಸಲ್ಲಿಸುವವರ ವಯೋಮಿತಿ 16 ವರ್ಷದಿಂದ 30 ವರ್ಷದ ಒಳಗೆ ಇರಬೇಕಿದೆ. ಹಾಗೆ ವಿದ್ಯಾರ್ಹತೆ ದ್ವೀತಿಯ ಪಿಯುಸಿ ಹೊಂದಿರಬೇಕು. ಇದರ ಜೊತೆ ಬ್ಯೂಟೀಷಿಯನ್ ತರಬೇತಿ & ಇನ್ನಿತರ ತರಬೇತಿಗೂ ಅವಕಾಶ ಕಲ್ಪಿಸಲಾಗಿದೆ. ಆ ಕುರಿತು ಮಾಹಿತಿಗೆ ಮುಂದೆ ಓದಿ.
ಬ್ಯೂಟೀಷಿಯನ್ ತರಬೇತಿಗೂ ಅರ್ಜಿ ಆಹ್ವಾನ
ಅಂದಹಾಗೆ ಬ್ಯೂಟೀಷಿಯನ್ ತರಬೇತಿ ಶಿಬಿರ ಜನವರಿ 26 ರಿಂದ ಫೆಬ್ರವರಿ 7 ರವರೆಗೂ ಒಟ್ಟು 13 ದಿನ ಕಾಲ ಕುಂಬಳಗೋಡು ತರಬೇತಿ ಕೇಂದ್ರ ಬೆಂಗಳೂರು ಇಲ್ಲಿ ನಡೆಯಲಿದೆ. ಇದಕ್ಕಾಗಿ ವಯೋಮಿತಿಯ 15 ರಿಂದ 29 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಅಭ್ಯರ್ಥಿಗಳ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಇರಬೇಕಿದೆ. ಪಾಸ್ ಅಥವಾ ಫೇಲ್ ಆದವರು ಕೂಡ ಅರ್ಜಿ ಹಾಕಬಹುದು.
ವಾರ್ತಾ ವಾಚಕರ ತರಬೇತಿ
ವಿಡಿಯೋಗ್ರಫಿ ತರಬೇತಿ ಶಿಬಿರ ಜ.27 ರಿಂದ ಫೆ.7 ರವರೆಗೆ 12 ದಿನಗಳ ಕಾಲ ಕುಂಬಳಗೋಡು ತರಬೇತಿ ಕೇಂದ್ರ, ಬೆಂಗಳೂರು ಇಲ್ಲಿ ನಡೆಯಲಿದೆ. ವಯೋಮಿತಿಯು 15 ರಿಂದ 29 ವರ್ಷದ ತನಕ ಇರಲಿದೆ. ವಿದ್ಯಾರ್ಹತೆ ದ್ವೀತಿಯ ಪಿಯುಸಿ ಆಗಿರಬೇಕು. ಹಾಗೇ ನಿರೂಪಣಾ & ವಾರ್ತಾ ವಾಚಕರ ತರಬೇತಿ ಶಿಬಿರ ಜನವರಿ 31 ರಿಂದ ಫೆಬ್ರವರಿ 7 ರವರೆಗೆ 8 ದಿನಗಳ ಕಾಲ ಯುವನಿಕ ಸಭಾಂಗಣ, ನೃಪತುಂಗ ರಸ್ತೆ, ಬೆಂಗಳೂರು ಇಲ್ಲಿ ನಡೆಯಲಿದೆ. ವಯೋಮಿತಿಯ 15 ರಿಂದ 29 ವರ್ಷಕ್ಕೆ ಸೀಮಿತ ಮಾಡಲಾಗಿದೆ. ವಿದ್ಯಾರ್ಹತೆ, ಪದವಿ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ನೀಡಲಾಗುವುದು.
ಯಾರು ಅರ್ಜಿ ಸಲ್ಲಿಸಬಹುದು?
ಒಟ್ನಲ್ಲಿ ಯುವ ಸಬಲೀಕರಣ & ಕ್ರೀಡಾ ಇಲಾಖೆಯ ವತಿಯಿಂದ 2023-24ರ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಯುವ ಜನರು ಜನವರಿ 24 ರಿಂದ ಫೆಬ್ರವರಿ 7 ರವರೆಗೆ ನಡೆಯುವ ತರಬೇತಿ ಶಿಬಿರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಕೊಠಡಿ ಸಂಖ್ಯೆ: 17 ಮತ್ತು 18, ಶ್ರೀ ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಬೆಂಗಳೂರು-01 ಇಲ್ಲಿ ಖುದ್ದಾಗಿ ಜನವರಿ 19ರ ಒಳಗಾಗಿ ಸಲ್ಲಿಸಬಹುದು. ಅಥವಾ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕ ಮಾಡಬಹುದು. 9480886545, 7204266766 ಗೆ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.











Click it and Unblock the Notifications