ತೆಲುಗು ಭಾಷಿಕರಿಗೆ ಮೋದಿಯಿಂದ ಮೋಸ: ರಘುವೀರ್ ರೆಡ್ಡಿ ಆರೋಪ
ಬೆಂಗಳೂರು, ಮೇ 1: ಆಂಧ್ರ ಪ್ರದೇಶಕ್ಕೆ ಪ್ರತ್ಯೇಕ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ತೆಲುಗು ಭಾಷಿಕರಿಗೆ ಮೋಸ ಮಾಡಿದ್ದು, ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ಭಾಷಿಕರು ಕಾಂಗ್ರೆಸ್ ಬೆಂಬಲಿಸ ಬೇಕು ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಘುವೀರ್ ರೆಡ್ಡಿ ಮನವಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ಈಗಾಗಲೇ ಅಲ್ಲಿನ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ.

ಆಂಧ್ರಪ್ರದೇಶ-ತೆಲಂಗಾಣ ವಿಭಜನೆಯಾದ ನಂತರ ವಿಭಜಿತ ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ಈ ವಿಶೇಷ ಸ್ಥಾನಮಾನ ನೀಡುವುದಾಗಿ ತಿರುಪತಿ ಭೇಟಿ ವೇಳೆ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ ಎನ್‌ಡಿಎ ಸರ್ಕಾರ ರಚನೆಯಾದ ನಂತರ ಆಂಧ್ರಪ್ರದೇಶದ ಹಿತವನ್ನು ಬದಿಗಿಟ್ಟು ತೆಲುಗು ಭಾಷಿಕರಿಗೆ ಮೋಸವೆಸಗಿದ್ದಾರೆ ಹೀಗಾಗಿ ಕರ್ನಾಟಕ ಲಕ್ಷಾಂತರ ತೆಲುಗು ಭಾಷಿಕರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ದೇಶದಲ್ಲಿ 11 ಕೋಟಿ ತೆಲುಗಿನವರಿದ್ದಾರೆ ತೆಲುಗು ಮಾತನಾಡುವ ಎಲ್ಲರೂ ಸಹ ಶೇ. 90 ರಷ್ಟು ಕಾಂಗ್ರೆಸ್ ಗೆ ಮತ ಹಾಕ್ತಾರೆ. ರಾಹುಲ್ ಪ್ರಧಾನಿ ಆದಮೇಲೆ ಮೊದಲು ಮಾಡುವ ಕೆಲಸ ಅಂದರೆ ತೆಲುಗಿನವರಿಗೆ ಸ್ಪೆಷಲ್ ಕೆಟಗಿರಿ ನೀಡುತ್ತಾರೆ ಎಂದು ಹೇಳಿದರು.












Click it and Unblock the Notifications