Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ ಮತ್ತೊಂದು ಡೈರಿ ಸ್ಫೋಟ?! ಬಂಧಿತ ನಾಗ ಸಹಚರರ ಬಳಿ ರಹಸ್ಯ ಡೈರಿ!

ತಲೆಮರೆಸಿಕೊಂಡಿರುವ ರೌಡಿ ಶೀಟರ್ ನಾಗನ ನಾಲ್ವರು ಸಹಚರರನ್ನು ಇಂದು ಬಂಧಿಸಲಾಗಿದ್ದು, ಇವರಿಂದ ಹಲವು ರೋಚಕ ಮಾಹಿತಿಗಳನ್ನೊಳಗೊಂಡ ಡೈರಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ಮೇ 05: ತಲೆಮರೆಸಿಕೊಂಡಿರುವ ರೌಡಿ ಶೀಟರ್ ನಾಗನ ನಾಲ್ವರು ಸಹಚರರನ್ನು ಇಂದು ಬಂಧಿಸಲಾಗಿದ್ದು, ಇವರಿಂದ ಹಲವು ರೋಚಕ ಮಾಹಿತಿಗಳನ್ನೊಳಗೊಂಡ ಡೈರಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ.

ರೌಡಿ ಶೀಟರ್ ನಾಗನ ಸಹಚರರಾದ ಶ್ರೀನಿವಾಸ, ಶರವಣ, ಅಪ್ಪು, ಜಯಕುಮಾರ್ ಅವರನ್ನು ಬಂಧಿಸಲಾಗಿದ್ದು, ನೋಟು ರದ್ದತಿಯ ಸಮಯದಲ್ಲಿ ಹಲವು ಪರಭಾವಿ ರಾಜಕಾರಣಿಗಳು ರೌಡಿ ಶೀಟರ್ ನಾಗನ ಸಹಾಯದಿಂದಾಗಿ ನೋಟು ಬದಲಿಸಿಕೊಂಡಿದ್ದರು ಎಂಬ ಆಘಾತಕಾರಿ ಮಾಹಿತಿ ಈ ಡೈರಿಯಲ್ಲಿದೆ ಎನ್ನಲಾಗಿದೆ.[ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಾಂಬ್ ನಾಗ?]

ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಕೆಲ ಪ್ರಭಾವಿ ರಾಜಕಾರಣಿಗಳು 40:50 ಲೆಕ್ಕಾಚಾರದಲ್ಲಿ ನೋಟು ಬದಲಾಯಿಸಿಕೊಂಡಿದ್ದರು ಎಂಬ ಮಾಹಿತಿ ಈ ಡೈರಿಯಲ್ಲಿದ್ದು, ಪ್ರಭಾವಿ ರಾಜಕಾರಣಿಗಳು ಹೆಸರೂ ಇದರಲ್ಲಿ ಉಲ್ಲೇಖವಾಗಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.[100 ಕೋಟಿ ಹಣ 3ಮಚ್ಚು 2 ಡ್ಯಾಗರ್ ಪತ್ತೆ, ವಿ ನಾಗರಾಜ್ ಪರಾರಿ!]

ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಗುಮಾನಿಯ ಮೇಲೆ ಏಪ್ರಿಲ್ 14 ರಂದು ವಿ. ನಾಗರಾಜ್ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆದರೆ ದಾಳಿ ಸಂದರ್ಭದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ರೌಡಿ ಶೀಟರ್ ನಾಗ ಪರಾರಿಯಾಗಿದ್ದ. ನಾಗ ಕೇರಳದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಆತನ ಹುಡುಕಾಟಕ್ಕೆ ಪೊಲೀಸರು ಬಲೆಬೀಸಿದ್ದರೂ, ಆತ ಮಾತ್ರ ಇಂದಿಗೂ ಸಿಕ್ಕಿಲ್ಲ. ಅಜ್ಞಾತ ಸ್ಥಳದಲ್ಲೇ ಕೂತು ವಿಡಿಯೋ ಸಂದೇಶ ಕಳಿಸಿ, ಕರ್ನಾಟಕದ ಪ್ರಭಾವಿ ರಾಜಕಾರಣಿಗಳ ಬಣ್ಣ ಬಯಲು ಮಾಡುತ್ತೇನೆ ಎನ್ನುತ್ತಿರುವ ನಾಗನ ಸಹಚರರ ಬಂಧನವಾಗಿರುವುದು ಮತ್ತು ಡೈರಿ ಸಿಕ್ಕಿರುವುದು ಪ್ರಕರಣಕ್ಕೆ ಮತ್ತಷ್ಟು ರೋಚಕತೆಯನ್ನು ನೀಡಿದೆ.[ಬಾಂಬ್ ನಾಗ' ಎಂದಿದ್ದಕ್ಕೆ ಕಮಿಷನರ್ ಗೆ ನೊಟೀಸ್ ರವಾನಿಸಿದ ನಾಗರಾಜ್]

ಓದಿದ್ದು ಏಳನೇ ತರಗತಿ!

ಓದಿದ್ದು ಏಳನೇ ತರಗತಿ!

56 ವರ್ಷದ ವಿ.ನಾಗರಾಜ್ 2013ರಲ್ಲಿ ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ, ಬೆಂಗಳೂರಿನ ಶ್ರೀರಾಮಪುರ ಸ್ವತಂತ್ರಪಾಳ್ಯದ ನಾಲ್ಕನೇ ಮುಖ್ಯರಸ್ತೆಯ 34ನೇ ನಂಬರಿನ ಮನೆಯಲ್ಲಿ ವಾಸವಿರುವ ಇವರು ಸ್ಪರ್ಧೆ ಸಂದರ್ಭದಲ್ಲಿ ತೋರಿಸಿರುವ ಪ್ರಕಾರ ಇವರ ಒಟ್ಟು ಆದಾಯ 3,39,075 ರುಪಾಯಿ! ಕೋಟ್ಯತರ ರೂಪಾಯಿ ಅವ್ಯವಹಾರದಲ್ಲಿ ಕುಖ್ಯಾತಿ ಪಡೆದ ರೌಡಿ ಶೀಟರ್ ನಾಗ ಓದಿದ್ದು ಕೇವಲ ಏಳನೇ ತರಗತಿ![ಇಂದು ರೌಡಿ ಶೀಟರ್ ನಾಗ ಜಾಮೀನು ಅರ್ಜಿ ವಿಚಾರಣೆ]

ಭೂತದ ಬಾಯಲ್ಲಿ ಭಗವದ್ಗೀತೆ!

ಭೂತದ ಬಾಯಲ್ಲಿ ಭಗವದ್ಗೀತೆ!

ನಾಗನ ಕಚೇರಿಗೆ ನುಗ್ಗಿದ ಪೊಲೀಸರಿಗೆ 3 ಮಚ್ಚು 2 ಡ್ಯಾಗರ್ ಹಾಗೂ ಸುಮಾರು ನೂರು ಕೋಟಿ ಹಳೆಯ ಐನೂರು ಸಾವಿರ ಮುಖಬೆಲೆ ನೋಟುಗಳಿರುವ ಬ್ಯಾಗ್ ಗಳು ಸಿಕ್ಕಿತ್ತು. ನೋಟುಗಳನ್ನು ಲೆಕ್ಕ ಮಾಡುವುದಕ್ಕೆ ಪೊಲೀಸರು ಸಾಕಷ್ಟು ಸಮಯ ತೆಗೆದುಕೊಂಡರು ಎಂದರೆ ನಾಗ ಕೂಡಿಟ್ಟಿದ್ದ ಹಣವೆಷ್ಟು ಎಂಬುದನ್ನು ನೀವು ಊಹಿಸಬಹುದು. ಇನ್ನೂ ತಮಾಷೆಯ ಸಂಗತಿ ಎಂದರೆ ಈ ಹಣಗಳ ಕಂತೆಯ ನಡುವಲ್ಲಿ ಭಗವದ್ಗೀತೆಯ ಪುಸ್ತಕವೊಂದು ಸಿಕ್ಕಿದ್ದು! ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಭೃಂದಾವನ ಎಂಬಂತೆ ಅವ್ಯವಹಾರವನ್ನೇ ಮಾಡುತ್ತ ಬಂದ ನಾಗ ಹಣದೊಂದಿಗೆ ಭಗವದ್ಗೀತೆಯನ್ನಿಟ್ಟುಕೊಂಡಿದ್ದು ಅಣಕವೆನ್ನಿಸಿತ್ತು.

'ಬಾಂಬ್ ನಾಗ' ಅನ್ನೋಹಾಗಿಲ್ಲ!

'ಬಾಂಬ್ ನಾಗ' ಅನ್ನೋಹಾಗಿಲ್ಲ!

ಅಫರಣ, ಬ್ಲ್ಯಾಕ್ ಮೇಲ್, ದರೋಡೆ, ಭ್ರಷ್ಟಾಚಾರ, ಅಕ್ರಮ ಶಸ್ತಾಸ್ತ್ರ ಸಂಗ್ರಹ ಸೇರಿದಂತೆ ಹಲವು ಆರೋಪಗಳನ್ನು ಹೊತ್ತ ವಿ.ನಾಗರಾಜ್ 'ಬಾಂಬ್ ನಾಗ' ಎಂದೇ ಚಿರಪರಿಚಿತನಾಗಿದ್ದ. ಆದರೆ ತನ್ನನ್ನು ಹಾಗೆ ಕರೆಯುವುದರಿಂದ ತನಗೆ ಇರಿಸುಮುರಿಸಾಗುತ್ತದೆಂದು ಆತನ ಮಾಧ್ಯಮಗಳು ಮತ್ತು ಯಾರೇ ಆದರೂ ತನ್ನನ್ನು ಆ ರೀತಿ ಕರೆಯುವಂತಿಲ್ಲ ಎಂದು ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ!

1000 ಮತ್ತು 500 ಮುಖಬೆಲೆಯ ನೋಟುಗಳು

1000 ಮತ್ತು 500 ಮುಖಬೆಲೆಯ ನೋಟುಗಳು

1000 ಮತ್ತು 500 ಮುಖಬೆಲೆಯ ನೋಟುಗಳು ರದ್ದಾಗುತ್ತಿದ್ದಂತೆಯೇ ನಾಗ ಎಲ್ಲಿಲ್ಲದಷ್ಟು ಚಟುವಟಿಗೆಯಿಂದಿದ್ದ. ಪ್ರಭಾವಿ ರಾಜಕಾರಣಿಗಳಿಗೆ ಹಳೆ ನೋಟಿಗೆ ಹೊಸ ನೋಟನ್ನು ಬದಲಿಸಿಕೊಂಡು, ಕಮಿಶನ್ ಕೇಳುವ ಕೆಲಸದಲ್ಲೂ ತಲ್ಲೀನನಾಗಿದ್ದ. ಈತನ ಸಹಚರರೂ ಇದೇ ಕಾರ್ಯದಲ್ಲಿ ತೊಡಗಿದ್ದರು. ಆದರೆ ಇದೀಗ ಎಲ್ಲರೂ ಜೈಲುಪಾಲಾಗಿದ್ದು, ನಾಗ ಮಾತ್ರ ತಲೆಮರೆಸಿಕೊಂಡಿದ್ದಾನೆ.

ಶತಕೋಟಿಯ ಸರದಾರ ಈ ನಾಗ!

ಶತಕೋಟಿಯ ಸರದಾರ ಈ ನಾಗ!

ನಾಗನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಅಂದು ಸಿಕ್ಕಿದ್ದು ಬರೋಬ್ಬರಿ ನೂರು ಕೋಟಿಗೂ ಅಧಿಕ ಮೌಲ್ಯದ ಹಳೇ ನೋಟುಗಳು! ಮನೆಯ ಸುತ್ತ ಪೊಲೀಸರಿದ್ದರೂ ಅದ್ಹೇಗೋ ಕಣ್ಣಿಗೆ ಮಣ್ಣೆರಚಿ ಪರಾರಿಯಾದ ನಾಗ ಕೇರಳ ಅಥವಾ ತಮಿಳು ನಾಡಿನಲ್ಲಿದ್ದಾನೆ ಎಂಬ ಮಾಹಿತಿ ಬಂದಿದ್ದವು. ಆದರೆ ಇಂದಿಗೂ ಅವನ ಪತ್ತೆ ಮಾತ್ರ ಸಾಧ್ಯವಾಗಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+