ಕೃಷ್ಣರಾವ್ ಪಾರ್ಕ್ ಅಭಿವೃದ್ಧಿಗೆ ಕ್ರಮ: ಅನಂತಕುಮಾರ್
ಬೆಂಗಳೂರು, ಜೂ.30: ಬಿಬಿಎಂಪಿಯ ‘ನಮ್ಮ ಬೆಂಗಳೂರು-ನನ್ನ ಕೊಡುಗೆ' ಯೋಜನೆಯಡಿಯಲ್ಲಿ ಬಸವನಗುಡಿಯ ಕೃಷ್ಣರಾವ್ ಪಾರ್ಕ್‍ನ್ನು ಅಭಿವೃದ್ದಿ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದ್ದಾರೆ. [ಏನಿದು ನಮ್ಮ ಬೆಂಗಳೂರು ನನ್ನ ಕೊಡುಗೆ ಯೋಜನೆ?]
ಭಾನುವಾರ ಬೆಳಗ್ಗೆ ಪಾರ್ಕ್‌ಗೆ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಬಿಎಂಪಿಯ ಮಹಾಪೌರರಾದ ಕಟ್ಟೆ ಸತ್ಯನಾರಾಯಣರವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪಾರ್ಕ್‍ನಲ್ಲಿದ್ದ ನೂರಾರು ಜನರು ಹಾಗೂ ನಡಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಪಾರ್ಕ್ ಅಭಿವೃದ್ಧಿ ಹಾಗೂ ಇಲ್ಲಿನ ವ್ಯವಸ್ಥೆಗಳ ನಿರ್ವಹಣೆ ಕುರಿತು ಸಮಾಲೋಚನೆ ನಡೆಸಿದರು.[ಬಡಗನಾಡು ಹಾಸ್ಟೆಲಿಗೆ 25 ಲಕ್ಷ ಕೊಟ್ಟ ಅನಂತಕುಮಾರ್]

ಪಾರ್ಕ್ ಅಭಿವೃದ್ಧಿ:
ಬಿಬಿಎಂಪಿಯ ‘ನಮ್ಮ ಬೆಂಗಳೂರು-ನಮ್ಮ ಕೊಡುಗೆ' ಯೋಜನೆಯಡಿಯಲ್ಲಿ ಬಸವನಗುಡಿಯ ಕೃಷ್ಣರಾವ್ ಪಾರ್ಕ್‍ನ್ನು ಅಭಿವೃದ್ದಿ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದ್ದಾರೆ.

ಸಚಿವರ ವಾಯುವಿಹಾರ:
ಪಾರ್ಕ್ ಭೇಟಿ ನೀಡುವ ವಾಯುವಿಹಾರಿಗಳ ಜೊತೆ ಸಚಿವರು ವಾಯುವಿಹಾರ ನಡೆಸಿದರು.

ಸಾರ್ವಜನಿಕರೊಂದಿಗೆ ಸಮಾಲೋಚನೆ:
ಕೃಷ್ಣರಾವ್ ಪಾರ್ಕ್ ನಡಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಕೃಷ್ಣರಾವ್ ಪಾರ್ಕ್ ಅಭಿವೃದ್ಧಿ ಹಾಗೂ ಇಲ್ಲಿನ ವ್ಯವಸ್ಥೆಗಳ ನಿರ್ವಹಣೆ ಕುರಿತು ಸಮಾಲೋಚನೆ ನಡೆಸಿದರು.

ಯುವಕರೊಂದಿಗೆ ವ್ಯಾಯಾಮ:
ಸಚಿವ ಅನಂತಕುಮಾರ್ ಕೃಷ್ಣರಾವ್ ಪಾರ್ಕ್‌ನಲ್ಲಿ ವ್ಯಾಯಾಮ ಹಾಗೂ ಕ್ರೀಡಾ ನಿರತ ಯುವಕರೊಂದಿಗೆ ಸೇರಿ ಸ್ವಲ್ಪ ಸಮಯ ವ್ಯಾಯಾಮ ನಡೆಸಿದರು.












Click it and Unblock the Notifications