ಬಡಗನಾಡು ಹಾಸ್ಟೆಲಿಗೆ 25 ಲಕ್ಷ ಕೊಟ್ಟ ಅನಂತಕುಮಾರ್
ಬೆಂಗಳೂರು,
ಜೂನ್ 9: ನರೇಂದ್ರ ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿನ್ನೆ ಭಾನುವಾರ ಬೆಂಗಳೂರಿಗೆ ಬಂದಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತಕುಮಾರ್ ಅವರು ತಮ್ಮ ವ್ಯಾಪ್ತಿ ಮೀರಿ ಧನ ಸಹಾಯ ಮಾಡಿದ್ದಾರೆ. id="toptextpromo"> id='are-slot-1' class='oiad oi-axt oiadv'>ನಗರದ
ಶೇಷಾದ್ರಿ ಪುರಂನಲ್ಲಿರುವ ಬಡಗನಾಡು ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ 'ಅಮೃತಭವನ'ದ ಉದ್ಘಾಟನಾ ಸಮಾರಂಭದಲ್ಲಿ ದಂಪತಿ ಸಮೇತ ಅವರು ಪಾಲ್ಗೊಂಡಿದ್ದರು. ಶೇಷಾದ್ರಿ ಪುರಂ ಬಡಾವಣೆಯು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದಾಗ್ಯೂ ಸಂಘದ ಪ್ರಾಶಸ್ತ್ಯ ಮತ್ತು ಸಾಧನೆಯನ್ನು ಗಮನಿಸಿ ಕೇಂದ್ರ ಸಚಿವರ ಅನಂತ್ ಅವರು ಬಡಗನಾಡು ಸಂಘದ ವಿದ್ಯಾರ್ಥಿ ನಿಲಯಕ್ಕೆ ಸಂಸದರ ನಿಧಿಯಿಂದ ರು. 25 ಲಕ್ಷ ಅನುದಾನ ನೀಡುವುದಾಗಿ ಹೇಳಿದರು.id='are-slot-2' class='oiad oi-axt oiadv'>

ಬಡಗನಾಡು ಸಂಘ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ
ಬಡಗನಾಡು ಸಂಘಕ್ಕೆ ಹಲವು ದಶಕಗಳಿಂದಲೂ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಾ ಬಂದಿದೆ. ಸಂಘವು ತನ್ನ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ನಿಲಯದ ಮೂಲಕ ಅನುಕೂಲ ಕಲ್ಪಿಸಲು ಕೊಡುತ್ತಿದೆ. ಇದನ್ನು ಮತ್ತಷ್ಟು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಆದ್ದರಿಂದ ಈ ಕ್ಷೇತ್ರದ ಸಂಸದರಾದ ಪಿಸಿ ಮೋಹನ್ ಜತೆ ಮಾತುಕತೆ ನಡೆಸಿ ಸಂಸದರ ನಿಧಿಯಿಂದ 25 ಲಕ್ಷ ಅನುದಾನ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಅನಂತ್ ಭರವಸೆ ನೀಡಿದ್ದಾರೆ.

ಸಚ್ಚಿದಾನಂದ ಸರಸ್ವತಿ ಶ್ರೀಗಳು ಆಶೀರ್ವಚನ
ಅಮೃತ ಭವನ ಉದ್ಘಾಟಿಸಿದ ಹರಿಹರಪುರ ಶ್ರೀಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳು ಆಶೀರ್ವಚನ ನೀಡಿ, ಮನುಷ್ಯನ ಪ್ರಜ್ಞಾಶಕ್ತಿ ನಿಂತ ನೀರಾಗಬಾರದು. ಎಂಥಹದೇ ಸಂದರ್ಭದಲ್ಲೂ ಉತ್ಸಾಹ, ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಿಮ್ಮ ಬಗ್ಗೆಯೇ ನಿಮ್ಮಲ್ಲಿ ವಿಶ್ವಾಸವಿರಬೇಕೆಂದು ಹೇಳಿದರು.

ಸ್ಥಳೀಯ ಶಾಸಕ ಸಚಿವ ದಿನೇಶ್ ಗುಂಡೂರಾವ್
ಸ್ಥಳೀಯ ಶಾಸಕ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬಡಗನಾಡು ಸಂಘಕ್ಕೆ ಅಗತ್ಯವಾಗಿ ಬೇಕಾದ ಎಲ್ಲ ನೆರವು ನೀಡಲು ತಾವು ಸಿದ್ಧವಿರುವುದಾಗಿ ಹೇಳಿದರು. ಶಾಸಕ ಡಾ ಸಿ ಎನ್ ಅಶ್ವತ್ಥ ನಾರಾಯಣ, ಸಂಘದ ಸಾಧನೆಯನ್ನು ಮೆಚ್ಚಿ ಮಾತನಾಡಿದರು.

ಸಂಘದ ಸದಸ್ಯ ಮಹಾನಗರ ಪಾಲಿಕೆ ಮೇಯರ್ ಸತ್ಯನಾರಾಯಣ
ಸಂಘದ ಸದಸ್ಯರಲ್ಲೊಬ್ಬರಾದ ಮಹಾನಗರ ಪಾಲಿಕೆ ಮೇಯರ್ ಸತ್ಯನಾರಾಯಣ ಅವರು ಮಾತನಾಡಿ ಸಂಘದ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಸಮುದಾಯದ ಜನರಿಗೆ ಕೃತಜ್ಞತೆ ತಿಳಿಸಿದರು. ಸಂಘದ ಗೌರವ ಅಧ್ಯಕ್ಷ ಬಿಎಸ್ ರವಿಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ಬೆಳೆದು ಬಂದ ಹಾದಿಯನ್ನು ಸ್ಮರಿಸಿದರು.

'ಬಡಗನಾಡು ಬ್ರಾಹ್ಮಣರ ಇತಿಹಾಸ' ಪುಸ್ತಕ ಬಿಡುಗಡೆ
ಪಾಲಿಕೆ ಸದಸ್ಯ ಗೋಪಾಲಕೃಷ್ಣ, ಸಂಘದ ಪದಾಧಿಕಾರಿಗಳಾದ ಜಿಎಸ್ ನಾಗೇಶ್, ಎನ್ಎಲ್ ಚಿದಾನಂದ, ಎಚ್ಎಸ್ ನಾಗರಾಜ್, ಟಿಆರ್ ಕೃಷ್ಣಮೂರ್ತಿ, ಎಂಎನ್ ಗೋಪಿನಾಥ್ ಮತ್ತಿತರರು ಹಾಜರಿದ್ದರು. ಇದೇ ವೇಳೆ 'ಬಡಗನಾಡು ಬ್ರಾಹ್ಮಣರ ಇತಿಹಾಸ' ಪುಸ್ತಕವನ್ನು ಶ್ರೀಗಳು ಬಿಡುಗಡೆ ಮಾಡಿದರು.












Click it and Unblock the Notifications