ಬೆಂಗಳೂರು: ತಾಯಿ ಮಲಗಿದ್ದಾರೆ ಎಂದು ಆಕೆಯ ಶವದೊಂದಿಗೆ ಎರಡು ದಿನ ಕಳೆದ ಬಾಲಕ

ತನ್ನ ಅಮ್ಮ ಕೋಪಗೊಂಡಿದ್ದರಿಂದ ನನ್ನ ಜೊತೆ ಮಾತನಾಡುತ್ತಿಲ್ಲ. ಹೀಗಾಗಿ ಮಲಗಿದ್ದಾರೆ ಎಂದು ತಿಳಿದ ಬಾಲಕ ಸುಮ್ಮನೆ ಎರಡು ದಿನ ಅದೇ ಮನೆಯಲ್ಲಿ ಕಾಲು ಕಳೆದಿದ್ದಾನೆ.

ಬೆಂಗಳೂರು, ಮಾರ್ಚ್ 02: ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ 11 ವರ್ಷದ ಬಾಲಕ ತನ್ನ ಮೃತ ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಘಟನೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಬಾಲಕನಿಗೆ ತನ್ನ ತಾಯಿ ಸತ್ತಿರುವುದು ತಿಳಿದಿರಲಿಲ್ಲ.

ತನ್ನ ಅಮ್ಮ ಕೋಪಗೊಂಡಿದ್ದರಿಂದ ನನ್ನ ಜೊತೆ ಮಾತನಾಡುತ್ತಿಲ್ಲ. ಹೀಗಾಗಿ ಮಲಗಿದ್ದಾರೆ ಎಂದು ತಿಳಿದ ಬಾಲಕ ಸುಮ್ಮನೆ ಎರಡು ದಿನ ಅದೇ ಮನೆಯಲ್ಲಿ ಕಾಲು ಕಳೆದಿದ್ದಾನೆ. 44 ವರ್ಷ ಅಣ್ಣಮ್ಮ ಅವರು ಫೆ.26 ರಂದು ಶುಗರ್ ಹಾಗೂ ರಕ್ತದೊತ್ತಡ ಕಡಿಮೆಯಾಗಿ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದರು. ಆಕೆ ಮಲಗಿದ್ದಾಗಲೇ ಮೃತಪಟ್ಟಿದ್ದರಿಂದ ತಾಯಿ ಇಡೀ ಹೊತ್ತು ಮಲಗಿದ್ದಾರೆ ಎಂದು ಮಗ ಭಾವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

An 11-year-old boy spent two days with his dead mothers body

ಅಣ್ಣಮ್ಮ ಅವರ ಪತಿ ಒಂದು ವರ್ಷದ ಹಿಂದೆ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಆರ್.ಟಿ.ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿ ಇರುವ ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರ ವಾಸಿಸುತ್ತಿದ್ದರು. ಈ ಎರಡು ದಿನ ಬಾಲಕ ಮನೆಯಿಂದ ಹೊರಗೆ ಬಂದು ಹೊರಗೆ ತನ್ನ ಸ್ನೇಹಿತರೊಂದಿಗೆ ಆಟವಾಡಿ ಮನೆಗೆ ಹಿಂತಿರುಗುತ್ತಿದ್ದನು. ತನ್ನ ಸ್ನೇಹಿತನ ಮನೆಯಲ್ಲಿ ಊಟ ಮಾಡುತ್ತಿದ್ದರು.

ಎರಡು ದಿನ ಈ ರೀತಿ ಮಾಡುತ್ತಿದ್ದ ಬಾಲಕ, ಫೆ. 28 ರಂದು ತನ್ನ ತಾಯಿ ಅಣ್ಣಮ್ಮ ತನ್ನೊಂದಿಗೆ ಎರಡು ದಿನದಿಂದ ಮಾತನಾಡದಿರುವ ಬಗ್ಗೆ ತಂದೆಯ ಸ್ನೇಹಿತರಿಗೆ ತಿಳಿಸಿದ್ದಾನೆ. ಏನೋ ಆಗಿದೆ ಎಂದು ತಿಳಿದ ಅವರು ತಕ್ಷಣ ಮನೆಗೆ ಬಂದು ಪರಿಶೀಲಿಸಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ಆರ್.ಟಿ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+