ಬೆಂಗಳೂರಿನ ಬಾಲಕಿ ಅಮನಾಗೆ ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ

ಬೆಂಗಳೂರು, ಡಿಸೆಂಬರ್ 14: ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಬೆಂಗಳೂರಿನ ಬಾಲಕಿ ಅಮನ ಜೆ. ಕುಮಾರ್‌ಗೆ ಸ್ಥಾನ ಸಿಕ್ಕಿದೆ. ಕುಮಾರಿ ಅಮನ ಜೆ. ಕುಮಾರ್ ''Most Prolific Poet'' ಎಂದು ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಕರ್ನಾಟಕದಿಂದ ವಿಶ್ವದಾಖಲೆಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ 8ನೇ ತರಗತಿ ಓದುತ್ತಿರುವ ಕುಮಾರಿ ಅಮನಾ ಕರ್ನಾಟಕದಿಂದ ಪ್ರತಿಷ್ಠಿತ ನೋಬಲ್ ಬುಕ್ ನ ವಿಶ್ವದಾಖಲೆಯಲ್ಲಿ ''Most Prolific Poet'' ಎಂದು ದಾಖಲಾಗಿದ್ದಾರೆ.

ಕುಮಾರಿ ಅಮನರವರು ಒಟ್ಟು 337 ಕವನಗಳನ್ನು ಏಪ್ರಿಲ್ 4, 2020ರಿಂದ ದಿನಾಂಕ 29ನೇ ನವೆಂಬರ್ 2021ರವರೆಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ರಚಿಸಿದ್ದಾರೆ. ಈ ಕವಿತೆಗಳು ಒಟ್ಟು 10070 ಸಾಲುಗಳನ್ನು ಹೊಂದಿವೆ. ಪ್ರಕೃತಿ, ಕೋವಿಡ್, ಕುಟುಂಬ, ಹಾಸ್ಯ, ದೇವರು, ಸಾಹಿತ್ಯ, ಭಾವನೆ, ಶಾಂತಿ ಕೃತಜ್ಞತೆ, ಮಾನವೀಯತೆ, ರಾಷ್ಟ್ರ, ಸಮಾಜ, ಜೀವನ, ಪ್ರೀತಿ, ಮಹತ್ವಾಕಾಂಕ್ಷೆ, ಕನಸು, ಅನುಭವ ಇತರೆ ವಿಷಯಗಳನ್ನು ಒಳಗೊಂಡಿರುತ್ತದೆ. ಇದು ನೂತನ ವಿಶ್ವ ದಾಖಲೆಯಾಗಿದೆ.

Amana J Kumar get Most Prolific Poet award from Nobel Book of World Record

ಕುಮಾರಿ ಅಮನ ಅವರು ಇತ್ತೀಚೆಗಷ್ಟೇ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಭಾರತದ ಅತ್ಯಂತ ಕಿರಿಯ ಕವಯತ್ರಿ ಎಂದು ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಗ್ರ್ಯಾಂಡ್ ಮಾಸ್ಟರ್- ಚಿಕ್ಕವಯಸ್ಸಿನಲ್ಲಿ ಕವನಗಳನ್ನು ಬರೆಯುತ್ತಾರೆ ಎಂದು ದಾಖಲೆ ಮಾಡಿರುತ್ತಾರೆ. ಅತಿ ಶೀಘ್ರದಲ್ಲಿಯೇ ಇವರ ಎರಡನೇ ಕವನ ಸಂಕಲನವೂ ಪ್ರಕಟವಾಗಲಿದೆ. ಅಮನಾ ಅವರ ಪ್ರತಿಭೆಗೆ ಶಾಲೆಯಿಂದ ತಕ್ಕ ಪ್ರೋತ್ಸಾಹ ಸಿಕ್ಕಿದೆ ಎಂದು ಅವರ ತಾಯಿ ಡಾ. ಲತಾ ಟಿ.ಎಸ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+