10 ರೂ. ನಾಣ್ಯದ ವಿವಾದ; ಬಿಎಂಟಿಸಿಯಿಂದ ಸುತ್ತೋಲೆ

ಬೆಂಗಳೂರು, ಫೆಬ್ರವರಿ 25 : ಹತ್ತು ರೂಪಾಯಿ ನಾಣ್ಯ ಚಾಲ್ತಿಯಲ್ಲಿ ಇರುವ ಬಗ್ಗೆ ಪ್ರತಿದಿನ ಗೊಂದಲ ಉಂಟಾಗುತ್ತದೆ. ಅದರಲ್ಲಿಯೂ ಬಸ್‌ಗಳಲ್ಲಿ ನಾಣ್ಯವನ್ನು ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ವಾಹಕರು, ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 10 ರೂ. ನಾಣ್ಯದ ಕುರಿತು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಹತ್ತು ರೂ. ನಾಣ್ಯವನ್ನು ಆರ್‌ಬಿಐ ನಿಷೇಧ ಮಾಡಿಲ್ಲ. ನ್ಯಾಣ್ಯವನ್ನು ಪ್ರಯಾಣಿಕರಿಂದ ಸ್ವೀಕರಿಸಿ ಎಂದು ಸುತ್ತೋಲೆಯಲ್ಲಿ ಹೇಳಿದೆ.

Allow 10 Rs Coin BMTC Issues Circular

ಬಸ್, ಬಸ್ ಡಿಪೋಗಳಲ್ಲಿ 10 ರೂ. ನಾಣ್ಯವನ್ನು ಸ್ವೀಕಾರ ಮಾಡಬಹುದು. ಪ್ರಯಾಣಿಕರು ನಾಣ್ಯವನ್ನು ನೀಡಿದರೆ ಅದನ್ನು ನಿರ್ವಾಹಕರು ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ ಗೊಂದಲ ನಿವಾರಣೆಯಾಗಿದೆ.

ಪ್ರಯಾಣಿಕರು ಟಿಕೆಟ್ ಪಡೆಯುವಾಗ 10 ರೂ. ನಾಣ್ಯ ನೀಡಿದರೆ ಸ್ವೀಕಾರ ಮಾಡಬಹುದು. ನಿರ್ವಾಹಕರು ಚಿಲ್ಲರೆ ನೀಡುವಾಗ 10 ರೂ. ನಾಣ್ಯವನ್ನು ನೀಡಬಹುದು ಎಂದು ಬಿಎಂಟಿಸಿಯ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

10 ರೂ. ನಾಣ್ಯವನ್ನು ಆರ್‌ಬಿಐ ನಿಷೇಧಿಸಿದೆ. ಇದು ಚಲಾವಣೆಯಾಗುವುದಿಲ್ಲ ಎಂಬ ಕುರಿತು ಹಲವಾರು ಸುದ್ದಿಗಳು ಹಬ್ಬಿವೆ. ಆದ್ದರಿಂದ, ಬಸ್, ಅಂಗಡಿ ಸೇರಿದಂತೆ ಹಲವು ಕಡೆ ನಾಣ್ಯಗಳನ್ನು ತೆಗೆದುಕೊಳ್ಳುವುದಿಲ್ಲ.

ಬಿಎಂಟಿಸಿ ಬಸ್‌ನಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಸಂಚಾರ ನಡೆಸುವರು. ಒಂದಲ್ಲ ಒಂದು ಬಾರಿ 10 ರೂ. ನಾಣ್ಯ ಪ್ರಯಾಣಿಕರು ಅಥವ ನಿರ್ವಾಹಕರ ಕೈ ಸೇರುತ್ತದೆ. ನಾಣ್ಯ ತೆಗೆದುಕೊಳ್ಳುವ ವಿಚಾರದಲ್ಲಿಯೇ ಮಾತಿನ ಚಕಮಕಿ ನಡೆಯುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+