Upendra: ಜಾತಿ ನಿಂದನೆ ಆರೋಪ ಹಿನ್ನೆಲೆ ಉಪೇಂದ್ರ ವಿರುದ್ಧ ಸಮರಕ್ಕೆ ಸಜ್ಜಾದ ಬೆಂಗಳೂರು ವಿವಿ ವಿದ್ಯಾರ್ಥಿಗಳು
ಬೆಂಗಳೂರು, ಆಗಸ್ಟ್, 14: ಜಾತಿ ನಿಂದನೆ ಆರೋಪ ಹಿನ್ನೆಲೆ ನಟ ಉಪೇಂದ್ರ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದೆ. ಅಲ್ಲದೆ ಇದೀಗ ಹಲವು ಸಂಘಟನೆ ಹಾಗೂ ವಿದ್ಯಾರ್ಥಿಗಳ ಕೋಪಕ್ಕೆ ನಟ ಉಪೇಂದ್ರ ಗುರಿಯಾಗಿದ್ದಾರೆ. ಹಾಗೆಯೇ ಇಂದು ಬೆಂಗಳೂರು ವಿವಿಯ ವಿದ್ಯಾರ್ಥಿಗಳು ಕೂಡ ಸಮರಕ್ಕೆ ಸಜ್ಜಾಗಿದ್ದಾರೆ.
ಪೊಲೀಸರು ಕೂಡ ಸದ್ಯ ಉಪ್ಪಿ ಎಲ್ಲಿದ್ಯಾಪ್ಪ ಅಂತಾ ಹುಡುಕಾಟದಲ್ಲಿ ಇದ್ದಾರೆ. ಇದೀಗ ಬಂದ ಮಾಹಿತಿಯ ಪ್ರಕಾರ ಉಪ್ಪಿ ಸಂಪರ್ಕಕ್ಕೆ ಸಿಗುತ್ತಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದ್ದು, ಉಪ್ಪಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ದೂರು ದಾಖಲಾಗಿದ್ದು, ಸದ್ಯ ಬಂಧನ ಭೀತಿಯಲ್ಲಿ ನಟ ಉಪೇಂದ್ರ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಚಾರಣೆಗೆ ಹಾಜರಾಗಬೇಕಾದ ಬೆನ್ನಲ್ಲೆ ನಟ ಉಪೇಂದ್ರ ನಾಪತ್ತೆ ಆಗಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಹಾಗೆಯೇ ಈ ತನಿಖೆ ಯಾವ ತರ ನಡೆಯುತ್ತದೆ ಅಂತಾ ಕಾದುನೋಡಬೇಕಿದೆ. ಫೋನ್ ಮಾಡಿದರೆ ಸ್ವಿಚ್ಡ್ ಆಫ್ ಬರುತ್ತಿದೆ. ಎಲ್ಲಾ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಫ್ ಆಗಿರುವ ಉಪೇಂದ್ರ ಪೊಲೀಸರ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ.
ಸದ್ಯ ಉಪೇಂದ್ರ ನಿವಾಸಕ್ಕೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಂದ ನೋಟೀಸ್ ಕೂಡ ಕೊಡಲಾಗಿದೆ. ಆದರೆ ನಟ ಉಪೇಂದ್ರ ಕಡೆಯಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇಂದು 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ನೋಟಿಸ್ ನೀಡಲಾಗಿತ್ತು. ಅಟ್ರಾಸಿಟಿ ಕೇಸ್ ದಾಖಲಾಗಿರುವ ಹಿನ್ನೆಲೆ ಹೇಳಿಕೆ ಪಡೆಯಲು ನೋಟಿಸ್ ನೀಡಲಾಗಿದ್ದು, ಈ ವೇಳೆಯೇ ನಟ ಉಪೇಂದ್ರ ನಾಪತ್ತೆ ಆಗಿರುವುದು ಬೆಳಕಿಗೆಬಂದಿದೆ. ಸದ್ಯ ರಿಯಲ್ ಸ್ಟಾರ್ ಉಪ್ಪಿ ಅವರ ಕತ್ರಿಗುಪ್ಪೆ ಹಾಗೂ ಸದಾಶಿವನಗರದಲ್ಲಿರುವ ನಿವಾಸಗಳಿಗೆ ತೆರಳಿ ಪೊಲೀಸರು ನೊಟೀಸ್ ನೀಡಿದ್ದಾರೆ. ಸ್ನೇಹಿತರು ಹಾಗೂ ಸಂಬಂಧಿಕರ ಸಂಪರ್ಕದಲ್ಲಿರುವ ಬಗ್ಗೆಯೂ ತೀವ್ರ ಶೋಧ ನಡೆಸುತ್ತಿದ್ದಾರೆ.
ಜಾತಿ ನಿಂದನೆ ಹಿನ್ನೆಲೆ ನಟ ಉಪೇಂದ್ರ ವಿರುದ್ಧ ರಾಜ್ಯದೆಲ್ಲಡೆ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಇಂದು ನಟ ಉಪೇಂದ್ರಗೆ ಪ್ರತಿಭಟನೆ ಬಿಸಿ ಮುಟ್ಟಿಸಲು ಬೆಂಗಳೂರು ವಿವಿ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ವಿವಿ ಕಚೇರಿ ಮುಂದೆ ಉಪೇಂದ್ರ ಪ್ರತಿಕೃತಿ ದಹಿಸಿ ಪ್ರತಿಭಟಿಸಲು ನಿರ್ಧಾರ ಮಾಡಿದ್ದಾರೆ.












Click it and Unblock the Notifications