ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈ-ಫೈ
ಬೆಂಗಳೂರು, ಮಾರ್ಚ್ 4: ಬೆಂಗಳೂರು ಹಾಗೂ ಮೈಸೂರಿನ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈ-ಫೈ ಸೌಲಭ್ಯ ಲಭ್ಯವಾಗುತ್ತಿದೆ.
ಈ ಹಿಂದೆಯೇ ಈ ಯೋಜನೆ ಹಾಕಿಕೊಳ್ಳಲಾಗಿತ್ತು ಆದರೆ ಕಾರಣಾಂತರಗಳಿಂದ ಯೋಜನೆ ತಡವಾಗಿತ್ತು ಈಗ ಮತ್ತೊಮ್ಮೆ ವೈಫೈ ಯೋಜನೆ ಆರಂಭಿಸಲಾಗಿದೆ.
ಬೆಂಗಳೂರು-ಮೈಸೂರು ರೈಲು ಮಾರ್ಗದ 17 ನಿಲ್ದಾಣಗಳಲ್ಲೂ ಉಚಿತ ವೈಫೈ ಸೇವೆ ಆರಂಭವಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ರೈಲ್ವೆ ಇಲಾಖೆ ಎಲ್ಲಾ ನಿಲ್ದಾಣಗಳಿಗೆ ಉಚಿತ ವೈಫೈ ನೀಡುತ್ತಿದೆ.
ಬೆಂಗಳೂರಲ್ಲಿ ಮೊದಲ ಹಂತದಲ್ಲಿ ಮೆಜೆಸ್ಟಿಕ್ ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಕೆಲ ನಿಲ್ದಾಣಗಳಲ್ಲಿ ಸೌಲಭ್ಯ ನೀಲಡಾಗಿತ್ತು. ಈಗ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮೈಸೂರು, ನಾಯಂಡಹಳ್ಳಿ, ಹೆಜ್ಜಾಲ, ಪಾಂಡವ[ಉರ, ನಾಗೇನಹಳ್ಳಿ ನಿಲ್ದಾಣಗಳಲ್ಲೂ ವೈಫೈ ಲಭ್ಯವಾಗಿದೆ.

ಒಟ್ಟು 138 ಕಿ.ಮೀ ರೈಲು ಮಾರ್ಗ
ಒಟ್ಟು 138 ಕಿ.ಮೀ ಉದ್ದದ ರೈಲು ಮಾರ್ಗದ ಎಲ್ಲಾ ನಿಲ್ದಾಣಗಳೂ ವೈ-ಫೈ ಸೌಲಭ್ಯ ಪಡೆದಿದೆ. ಈ ಕುರಿತು ಮಾಹಿತಿ ನೀಡಿದ ವೈಫೈ ಸೇವೆ ನೀಡುವ ರೇಲ್‌ಟೆ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪುಈತ ಚಾವ್ಲಾ, ದೇಶದ 831 ನಿಲ್ದಾಭಗಳಿಗೆ ವೈಫೈ ಸೇವೆ ನೀಡಲಾಗಿದೆ. ಪ್ರತಿ ತಿಂಗಳು 80 ಲಕ್ಷ ಪ್ರಯಾಣಿಕರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಹತ್ತೇ ದಿನಗಳಲ್ಲಿ 1 ಸಾವಿರ ರೈಲ್ವೆ ನಿಲ್ದಾಣಗಳು ವೈಫೈ ಸೌಲಭ್ಯ ಪಡೆಯಲಿವೆ.

ಒಮ್ಮೆ ಲಾಗಿನ್ ಆದರೆ 30 ನಿಮಿಷ ಮಾತ್ರ ವೇಗವಾದ ಇಂಟರ್‌ನೆಟ್ ಪಡೆಯಬಹುದು
ಒಮ್ಮೆ ಲಾಗಿನ್ ಆದರೆ 30 ನಿಮಿಷಗಳು ಮಾತ್ರ ವೇಗವಾದ ಇಂಟರ್‌ನೆಟ್ ಸೌಲಭ್ಯ ಪಡೆಯಬಹುದು. ಒಂದು ಎಂಬಿಪಿಎಸ್ ಅಪ್‌ಲೋಡ್ ಹಾಗೂ 3 ಎಂಬಿಪಿಎಸ್ ಡೌನ್‌ಲೋಡ್ ವೇಗ ಇರಲಿದೆ. ಬಳಿಕ 64 ಕೆಬಿಪಿಎಸ್ ಗೆ ಇಳಿಕೆಯಾಗಲಿದೆ.

ವೈಫೈ ಬಳಕೆ ಹೇಗೆ ಮಾಡಬೇಕು
ನಿಲ್ದಾಭದ ಒಳಗೆ ಮಾತ್ರ ಈ ವೈಫೈ ಸೇವೆ ದೊರೆಯಲಿದೆ. ಪ್ರಯಾಣಿಕರು ನಿಲ್ದಾಣದ ಒಳಗೆ ಹೋದಾಗ ಸ್ಮಾರ್ಟ್ ಫೋನ್‌ನಲ್ಲಿ ವೈಫೈ ಆನ್ ಮಾಡಬೇಕು. ಆಗ ರೈಲ್‌ವಯರ್ ಎಂಬ ವೈಫೈ ಸೇವೆ ಇರುವುದು ಕಂಡುಬರುತ್ತದೆ. ಇದನ್ನು ಆಯ್ಕೆ ಮಾಡಿಕೊಂಡರೆ ರೈಲ್ ವಯರ್‌ನ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ ಸಬ್‌ಮಿಟ್ ಬಟನ್ ಒತ್ತಬೇಕು.

1.09 ಲಕ್ಷ ಜಿಬಿ ಬಳಕೆದಾರರು
2019ರ ಜನವರಿಯಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ವೈಫೈ ಲಭ್ಯವಿದ್ದ ಕೆಲ ನಿಲ್ದಾಣಗಳಲ್ಲಿ 3,16,157, ಪ್ರಯಾಣಿಕರು ಸೇವೆ ಪಡೆದುಕೊಂಡಿದ್ದಾರೆ. ಇಷ್ಟು ಪ್ರಯಾಣಿಕರು 1.09 ಲಕ್ಷ ಜಿಬಿ ಪ್ರಮಾಣದಷ್ಟು ವೈಫೈ ಬಳಸಿದ್ದಾರೆ












Click it and Unblock the Notifications