ಬಿಐಇಸಿ ಕೋವಿಡ್ ಆರೈಕೆ ಕೇಂದ್ರದಲ್ಲಿ ರೋಗಿಗೆ ಮದ್ಯ ಪೂರೈಕೆ!

ಬೆಂಗಳೂರು, ಆಗಸ್ಟ್ 06: ಬೆಂಗಳೂರು ನಗರದ ಹೊರ ವಲಯದ ಬಿಐಇಸಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಮದ್ಯ ಪೂರೈಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ದೇಶದಲ್ಲಿಯೇ ಅತಿ ದೊಡ್ಡ ಕೇಂದ್ರವಾದ ಇದರಲ್ಲಿ 10,500 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.

Recommended Video

      ರಸಗೊಬ್ಬರ ಮತ್ತು ಬಾಂಬ್ ಬಳಕೆಯಲ್ಲಿ ಬಳಸುವ ಅಮೋನಿಯಂ ನೈಟ್ರೇಟ್ ಸ್ಪೋ | Oneindia Kannada

      ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಕೋವಿಡ್ ಸೋಂಕಿತ ರೋಗಿಗೆ ಸಿಬ್ಬಂದಿಯೊಬ್ಬರು ಮದ್ಯ ಪೂರೈಕೆ ಮಾಡುತ್ತಿದ್ದರು. ಬುಧವಾ ಮದ್ಯದ ಬಾಟಲ್ ಜೊತೆಗೆ ಬಿಬಿಎಂಪಿ ಮಾರ್ಷಲ್‌ಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

      ಎರಡು ವಿಸ್ಕಿ ಪ್ಯಾಕೆಟ್‌ಗಳು, ನೀರಿನ ಬಾಟಲಿ ಮತ್ತು ಚಿಪ್ಸ್‌ಗಳನ್ನು ಸಿಬ್ಬಂದಿ ವಾಹನದಲ್ಲಿ ಪತ್ತೆ ಮಾಡಲಾಗಿತ್ತು. ಮಾರ್ಷಲ್‌ಗಳು ಪ್ರಶ್ನಿಸಿದಾಗ ಇದು ನನಗಾಗಿ ತಂದಿದ್ದು ಎಂದು ಯುವಕ ಹೇಳಿಕೆ ನೀಡಿದ್ದ. ಬಳಿಕ ರೋಗಿಗೆ ಸರಬರಾಜು ಮಾಡುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದ.

       Alcohol Supply For Patients At Covid Care Centre

      ಈ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಕೋವಿಡ್ ಸೋಂಕು ತಗುಲಿ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೆ ಅವರನ್ನು ಬೆಂಗಳೂರು ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾದ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲು ಮಾಡಲಾಗುತ್ತದೆ.

      ಕೋವಿಡ್ ಆರೈಕೆ ಕೇಂದ್ರಕ್ಕೆ ಬೇರೆ ಯಾರಿಗೂ ಪ್ರವೇಶವಿಲ್ಲ. ಬಿಬಿಎಂಪಿ ಮಾರ್ಷಲ್ ಮತ್ತು ಪೊಲೀಸರು ಆರೈಕೆ ಕೇಂದ್ರಕ್ಕೆ ಭದ್ರತೆ ಒದಗಿಸುತ್ತಿದ್ದಾರೆ. ಸಿಬ್ಭಂದಿಗಳೇ ರೋಗಿಗಳಿಗೆ ಮದ್ಯ ಪೂರೈಕೆ ಮಾಡಿದರೆ ಯಾರು? ಏನು ಮಾಡಲು ಸಾಧ್ಯ?

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+