ಬೆಂಗಳೂರು ಸಂಚಾರಿ ಪೊಲೀಸರಿಗೆ ತಪ್ಪುತ್ತಿಲ್ಲ ಟಾರ್ಗೆಟ್ ಟಾರ್ಚರ್
ಬೆಂಗಳೂರು, ಸೆಪ್ಟೆಂಬರ್ 27: ಬೆಂಗಳೂರು ನಗರದಲ್ಲಿ ವಾಹನಗಳ ಟೋಯಿಂಗ್ ಸ್ತಬ್ಧವಾಗಿ ತಿಂಗಳುಗಳು ಕಳೆದುಹೋಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಬಿಟ್ಟು ಬೇರೆ ಯಾವುದೇ ವಾಹನವನ್ನು ತಡೆಯದಂತೆ ಡಿಜಿ ಕೂಡ ಆದೇಶ ಮಾಡಿದ್ದಾರೆ. ಹೀಗಿದ್ದರೂ ಸಂಚಾರ ಪೊಲೀಸರಿಗೆ ಇಂತಿಷ್ಟೇ ಕೇಸ್ ಹಾಕಬೇಕು ಅಂತ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಟಾರ್ಚರ್ ನೀಡ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ನಿರ್ಧಿಷ್ಟ ಕೇಸನ್ನು ದಾಖಲಿಸದಿದ್ದರೆ ನೊಟೀಸ್ ನೀಡಲಾಗುತ್ತಿದೆ.
ಗಾರ್ಮೆಂಟ್ ಫ್ಯಾಕ್ಟರಿಗಳಂತೆ ಟಾರ್ಗೆಟ್
ಈ ಮುಖಾಂತರ ಸಂಚಾರ ಪೊಲೀಸರಿಗೆ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ನೀಡುವಂತೆ ಟಾರ್ಗೆಟ್ ನೀಡುತ್ತಿದ್ದಾರೆ. ಆದರೆ ಈ ವಿಚಾರಕ್ಕೆ ಸಂಚಾರಿ ಜಂಟಿ ಆಯುಕ್ತರು ಆ ರೀತಿ ಯಾವ ಟಾರ್ಗೆಟ್ ನೀಡುತ್ತಿಲ್ಲ ಅಂತ ಮಾಹಿತಿ ನೀಡಿದ್ದರು.
ನಿರ್ಧಿಷ್ಟ ಕೇಸ್ ಹಾಕುವಂತೆ ನಿರ್ದೇಶನ
ರಸ್ತೆಯಲ್ಲಿ ದಂಡ ವಿಧಿಸುವ ಸಬ್ ಇನ್ಸ್‌ಪೆಕ್ಟರ್, ಎಎಸ್‌ಐ ಇಂತಿಷ್ಟೇ ಕೇಸ್ ಹಾಕಬೇಕು ಅಂತ ಟಾರ್ಗೆಟ್ ನೀಡ್ತಿದ್ದಾರೆ. ಟಾರ್ಗೆಟ್ ಸಂಪೂರ್ಣವಾಗದಿದ್ದರೆ ನೋಟೀಸ್ ಕೂಡ ಜಾರಿಯಾಗುತ್ತದೆ. ಪದೇ ಪದೇ ನೋಟೀಸ್ ಮೂಲಕ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿ ಎಚ್ಚರಿಕೆ ನೀಡಲಾಗ್ತಿದೆ. ಜೊತೆಗೆ ವೈರ್‌ಲೆಸ್ ನಲ್ಲಿ ಇಂಥಹ ಕೇಸ್‌ಗಳನ್ನೇ ಈ ದಿನ ಹಾಕ ಬೇಕು ಎನ್ನುವ ನಿರ್ದೇಶನ ಕೂಡ ನೀಡಲಾಗುತ್ತಿದೆ.

ರೂಲ್ಸ್ ಫಾಲೋ ಮಾಡುತ್ತಿರುವ ಜನರು
ಒಂದು ಟೋಯಿಂಗ್ ಇಲ್ಲ, ಸುಖಾಸುಮ್ಮನ ವೆಹಿಕಲ್ ಚೆಕ್ ಮಾಡುಗಿಲ್ಲ. ಆದರೂ ಟಾರ್ಗೆಟ್ ರೀಚ್ ಮಾಡಬೇಕು. ಇನ್ನೂ ಜನ ಫೈನ್ ಹೆಚ್ಚಳದ ಬಳಿಕ ರೂಲ್ಸ್ ಫಾಲೋ ಮಾಡುತ್ತಿರುವ ಕಂಡುಬರುತ್ತಿದೆ. ಜನರು ಕೂಡ ರೂಲ್ಸ್ ತಕ್ಕಮಟ್ಟಿಗೆ ಫಾಲೋ ಮಾಡುತ್ತಿರುವುದರಿಂದ ಕೇಸ್ ಗಳ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯಾಗಿದೆ ಇಷ್ಟಾದರೂ ಕಳೆದ ವರ್ಷದ ಟಾರ್ಗೆಟ್‌ಗಿಂತ ಹೆಚ್ಚು ಕೇಸ್ ಆಗಬೇಕು ಎನ್ನುವುದು ಅಧಿಕಾರಿಗಳ ಅಪೇಕ್ಷೆಯಾಗಿದೆ.
ಅಧಿಕಾರಿಗಳು ಈ ಟಾರ್ಗೆಟ್ ಮನಸ್ಥಿತಿಯಿಂದ ಹೊರ ಬಂದು ಕೆಲಸ ಮಾಡುವ ಅನಿವಾರ್ಯತೆ ಇದೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಿದೆ. ಅಧಿಕಾರಿಗಳ ಮಧ್ಯೆ ನಡೆದೆ ಸಂಭಾಷಣೆಯ ಲಿಂಕ್ ಇಲ್ಲಿದೆ:












Click it and Unblock the Notifications