ಕೊಲೆಯ ಬಳಿಕ ನಟ ದರ್ಶನ್ ರೇಣುಕಾಸ್ವಾಮಿ ಫೋಟೋಗಳನ್ನು ಕಳುಹಿಸಿದ್ದು ಯಾರಿಗೆ & ಯಾಕೆ?
ಬೆಂಗಳೂರು, ಜುಲೈ, 05: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್, ಎ1 ಆರೋಪಿ ಪವಿತ್ರಾ ಗೌಡ ಸೇರಿದತೆ ಒಟ್ಟು 17 ಮಂದಿ ಆರೋಪಿಗಲು ಜೈಲು ಪಾಲಾಗಿದ್ದಾರೆ. ಇನ್ನು ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಾಗೆಯೇ ಈ ಸಂಬಂಧ ಮತ್ತೊಂದು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ ಬಳಸಿರುವ ಸಿಮ್‌ಗಳ ಮೂಲಕ ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಹೀಗೆ ನಟ ದರ್ಶನ್ ಮಾಡಿರುವ ಒಂದೊಂದೇ ಕರಾಳ ಕೃತ್ಯಗಳನ್ನು ಬಯಲಿಗೆಳೆಯುತ್ತಲೇ ಇದೆ.

ಇನ್ನು ಕೊಲೆಯ ಬಳಿಕ ನಟ ದರ್ಶನ್, ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಮಾಜಿ ಕಾರ್ಪೊರೇಟರ್ ಮೋಹನ್ ಕುಮಾರ್‌ಗೆ ರೇಣುಕಾಸ್ವಾಮಿಯ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ನ್ಯೂಸ್ ಫಸ್ಟ್ ವರದಿ ಮಾಡಿದೆ. ಇದೀಗ ಈ ವಿಚಾರ ಮತ್ತಷ್ಟು ತಿರುವು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.
ದರ್ಶನ್ ಮನುಷ್ಯತ್ವ ಕಳೆದುಕೊಂಡಿದ್ದಾನೆ: "ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ನಾನು ನೋಡಿದ ಹಾಗೆ ದರ್ಶನ್ ಅವರ ತಂದೆ ಶೂಟಿಂಗ್ ಸೆಟ್‌ನಲ್ಲಿ ಕೆಲವೊಮ್ಮೆ ತುಂಬಾ ಕೋಪಗೊಳ್ಳುತ್ತಿದ್ದರು. ಅದು ಕೆಲವೊತ್ತಷ್ಟೇ. ಆಮೇಲೆ ಎಲ್ಲರ ಜೊತೆಗೂ ಬೆರೆಯುವ ಸ್ವಭಾವ ಅವರದ್ದಾಗಿತ್ತು. ಸಿನಿಮಾದಲ್ಲಿ ಖಲನಾಯಕನಾಗಿದ್ದರೆ, ನಿಜಜೀವನದಲ್ಲಿ ಹಿರೋ ಆಗಿದ್ದರು," ಎಂದರು.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಅವರದ್ದು ಕೂಡ ತಪ್ಪಿದೆ. ಅದಕ್ಕಂತಲೇ ಕಾನೂನು ಇದೆ. ಸಿನಿರಂಗ ಇದೆ. ಅಲ್ಲೇ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ಕೂಡ ಸರಿಯಲ್ಲ. ನಟ ದರ್ಶನ್ ಮನುಷ್ಯತ್ವ ಕಳೆದುಕೊಂಡಿದ್ದಾನೆ ಅಂತಾ ಅನಿಸುತ್ತದೆ ಎಂದು ಹೇಳಿದ್ದಾರೆ.
"ನಾನು ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಜೊತೆ ನಾನು ಇದ್ದವನು, ದರ್ಶನ್‌ರಷ್ಟು ಹೆಸರನ್ನು ತಂದೆ ತೂಗುದೀಪ ಮಾಡಿರಲಿಲ್ಲ. ಆಗಿನ ಕಾಲಘಟ್ಟವೇ ಬೇರೆ, ಇಂದಿನ ಕಾಲಘಟ್ಟವೇ ಬೇರೆ. ಕೆಲ ವರ್ಷಗಳ ಹಿಂದೆ ದರ್ಶನ್ ದಿನಗೂಲಿ ನೌಕರನಾಗಿ ಕೆಲಸ ಮಾಡಿದ್ದನ್ನು ನಾನು ನೋಡಿದ್ದೇನೆ. ದರ್ಶನ್ ಹೊರತು ಪಡಿಸಿ ಹೇಳುವುದಾದರೆ, ಈ ರೀತಿಯ ಘಟನೆಗಳು ನಡೆಯಬಾರದೆನ್ನುವುದೇ ನನ್ನ ಅಭಿಪ್ರಾಯ," ಎಂದರು.
"ಇಲ್ಲಿ ಆಗಿರೋದು ಉದ್ದೇಶಪೂರ್ವಕವಾಗಿ ನಡೆದ ಕೊಲೆಯಲ್ಲ, ಇವರು ಯಾರೂ ಸಹ ಮೂಲತಃ ಕೊಲೆಗಾರರಲ್ಲ, ಸೇಡು ತೀರಿಸಿಕೊಳ್ಳೋಕೆ ಹಿಂಸೆ ಕೊಟ್ಟಿದ್ದಾರೆ. ಹಿಂಸೆ ಅತಿರೇಕ ಆಗಿದ್ದರಿಂದ ಈ ಘಟನೆ ನಡೆದಿದೆ. ಇನ್ನೂ ಹತ್ಯೆಯಾದ ರೇಣುಕಾಸ್ವಾಮಿ ಮಾಡಿದ್ದನ್ನು ನಾನು ಒಪ್ಪುವುದಿಲ್ಲ. ಯಾರೇ ಹೆಣ್ಣು ಮಗಳಿಗಾಗಲೀ ಈ ರೀತಿಯ ಅಶ್ಲೀಲ ಮೇಸೆಜ್ ಮಾಡುವುದು ತಪ್ಪು. ಹಾಗೆಯೇ ಪವಿತ್ರಾ ಗೌಡ ಮದುವೆಯಾದ ಮನುಷ್ಯನಾ ಜೊತೆ ಸಂಬಂಧ ಕೂಡ ಒಂದು ಅಪರಾಧವೇ. ಇದೆಲ್ಲವನ್ನು ಗಮನದಲ್ಲಿಟ್ಟಿಕೊಂಡು ಕಾನೂನು ಕೆಲಸ ಮಾಡಬೇಕಾಗುತ್ತದೆ," ಎಂದರು.












Click it and Unblock the Notifications