ಏರೋ ಇಂಡಿಯಾ: ಭಾರತ-ಅಮೆರಿಕ ನಡುವೆ ರಕ್ಷಣಾ ಬಾಂಧವ್ಯ ವೃದ್ಧಿಗೆ ವೇದಿಕೆ
ಬೆಂಗಳೂರು ಫೆಬ್ರವರಿ 18: ಏರೋ ಇಂಡಿಯಾ 2019 ರಲ್ಲಿ ಅಮೆರಿಕವು ಮಹತ್ವದ ಪಾತ್ರವಹಿಸಿದೆ ಇದು ಅಮೆರಿಕಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅಮೆರಿಕದ ದೂತಾವಾಸ ಕೇಂದ್ರವು ಹೇಳಿದೆ.
ಉಭಯ ದೇಶಗಳ ನಡುವೆ ವ್ಯೂಹಾತ್ಮಕ ಸಹಭಾಗಿತ್ವ ಮತ್ತು ರಕ್ಷಣಾ ವಲಯದಲ್ಲಿನ ಸಹಕಾರ ಮತ್ತಷ್ಟು ಗಟ್ಟಿಗೊಳ್ಳುವ ಆಶಯವನ್ನು ಅಮೇರಿಕಾ ಹೊಂದಿದ್ದು ಅಮೇರಿಕಾದ ಉನ್ನತ ಮಟ್ಟದ ನಿಯೋಗ, ಪರಿಣಾಮಕಾರಿಯಾದ ಸೇನಾ ವೇದಿಕೆಗಳು ಮತ್ತು ಸಿಬ್ಬಂದಿ ಮತ್ತು ಅಮೇರಿಕಾದ ಉದ್ದಿಮೆಗಳು ಇಲ್ಲಿ ಭಾಗವಹಿಸಿರುವುದು ಭಾರತ ಮತ್ತು ಅಮೇರಿಕಾದ ನಡುವಣ ರಕ್ಷಣಾ ಬಾಂಧವ್ಯ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಎಂದು ಅಮೆರಿಕದ ರಾಯಭಾರಿ ಹೇಳಿದ್ದಾರೆ.
ಏರೋ ಇಂಡಿಯಾ 2019: ಎಚ್‌ಎಎಲ್ ಈಗಲೂ ಮುಂಚೂಣಿಯಲ್ಲಿ
"ಏರೋ ಇಂಡಿಯಾದ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಅತಿದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಅಮೇರಿಕಾವನ್ನು ಬೆಂಬಲಿಸಲು ನಾನು ಇಲ್ಲಿಗೆ ಬಂದಿರುವುದು ಖುಷಿ ತಂದಿದೆ. ಭಾರತವು ರಕ್ಷಣಾ ವಲಯದ ಮಹತ್ವದ ಪಾಲುದಾರ ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಉಭಯದೇಶಗಳೂ ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಿಕೊಳ್ಳಲು ಬದ್ಧವಾಗಿವೆ. ಎರಡೂ ದೇಶಗಳ ಸಂಬಂಧ ಗಟ್ಟಿಗೊಳ್ಳುವಲ್ಲಿ ರಕ್ಷಣಾವಲಯದ ಕೊಳ್ಳುವಿಕೆಯು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಇದು ಎರಡೂ ದೇಶಗಳ ನಡವಣ ಸಮತೂಕದ ವಾಣಿಜ್ಯ ಸಂಬಂಧಕ್ಕೆ ಕೊಡುಗೆ ನೀಡುತ್ತದೆ ಎಂದು ಅಮೆರಿಕದ ಅಭಿಪ್ರಾಯ ಪಟ್ಟಿದೆ.

ಅಮೇರಿಕಾದ ನಿಯೋಗದಲ್ಲಿ ಕೆನ್ನೆತ್ ಐ. ಜಸ್ಟರ್, ಭಾರತದಲ್ಲಿನ ಅಮೆರಿಕದ ರಾಯಭಾರಿ, ಅಲನ್ ಶೇಫರ್, ಡೆಪ್ಯುಟಿ ಅಂಡ್ ಸೆಕೆರಟರಿ ಆಫ್ ಡಿಫೆನ್ಸ್ ಫಾ ಆಕ್ವಿಸಿಶನ್ ಅಂಡ್ ಸಸ್ಟೈನ್ಮೆಂಟ್, ಲೆಫ್ಟಿನೆಂಟ್ ಜನರಲ್ ಚಾರ್ಲ್ಸ ಹೂಪರ್, ಡೈರೆಕ್ಟ್ ಆಫ್ ದಿ ಡಿಫೆನ್ಸ್ ಸೆಕ್ಯುರಿಟಿ ಕೋ ಆಪರೇಷನ್ ಏಜೆನ್ಸಿ, ಡಾ. ಜೋಸೆಫ್ ಫೆಲ್ಟರ್, ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿ ಆಫ್ ಡಿಫೆನ್ಸ್, ಮೇಜ್ ಜನರಲ್ ರಾಬಿನ್ ಫೋನ್ಟ್ಸ್, ಬ್ರಿಗೇಡಿಯ್ ಜನರಲ್ ಸೀ ಎಂ. ಫರ್ರೆಲ್, ಡೈರೆಕ್ಟರ್, ಏಫೋರ್ಸ್ ಸೆಕ್ಯುರಿಟಿ ಅಸಿಸ್ಟೆನ್ಸ್ ಅಂಡ್ ಕೋಆಪರೇಷನ್ ಡೈರೆಕ್ಟೊರೇಟ್, ಏರ್ಫೋಸ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್ ಸೆಂಟರ್, ಡಾ. ವಾಲ್ಟರ್ ಎಫ್. ಜೋನ್ಸ್ ನೇವಿ ಇಂಟರ್ನ್ಯಾಷನಲ್ ಪ್ರೋಗ್ರಾಮ್ಸ್ ಆಫೀಸ್ ಎಕ್ಸಿಕ್ಯುಟಿವ್ ಡೈರೆಕ್ಟರ್, ರಾಬರ್ಟ್ ಬರ್ಜಸ್, ಯು.ಎಸ್, ಕಾನ್ಸಲ್ ಜನರಲ್ ಇನ್ ಚೆನ್ನೈ ಇದ್ದಾರೆ.
ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್‌ಬಸ್, ವಿಶೇಷತೆ ಏನು?
ಅಮೆರಿಕ ೨೮ ಕಂಪನಿಗಳು ಏರೋ ಇಂಡಿಯಾದಲ್ಲಿ ಭಾಗಿಯಾಗಲಿವೆ. ಅವುಗಳಲ್ಲಿ ೧೯ ಯುಎಸ್‌ಎ ಪಾರ್ಟನ್‌ಶಿಪ್ ಪಿವಿಲಿಯನ್‌ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಸತತ ೫ನೇ ಬಾರಿ ಕಾಲ್‌ಮನ್ ವರ್ಲ್ಡ್‌ವೈಡ್ ಯುಎಸ್‌ಎ ಪಿವಿಲಿಯನ್ ಅನ್ನು ಆಯೋಜಿಸಿದೆ. ಏರೋ ಇಂಡಿಯಾದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಪಿವಿಲಿಯನ್ ಎಕ್ಸಿಬಿಟರ್‌ಗಳಿದ್ದಾರೆ.
ಅಮೇರಿಕಾದ ವಾಣಿಜ್ಯ ವ್ಯವಹಾರಗಳ ಇಲಾಖೆ ಮತ್ತು ಸ್ಟೇಟ್ ಡಿಪಾರ್ಟಮೆಂಟ್ ಅಧಿಕಾರಿಗಳ ಜತೆ ಸುಮಾರು 100ಕ್ಕೂ ಹೆಚ್ಚುಮಂದಿ ರಕ್ಷಣಾ ಇಲಾಖೆಯ ಸಿಬ್ಬಂದಿ ಏರೋ ಇಂಡಿಯಾ 2019 ಭಾಗವಹಿಸುವ ನಿಯೋಗಕ್ಕೆ ನೆರವು ನೀಡಿದ್ದಾರೆ. ಹವಾಯಿಯ ಪರ್ಲ್‌ಹಾರ್ಬರ್- ಹಿಕಮ್ ನಲ್ಲಿನ ಜಂಟಿ ನೌಕಾನೆಲೆ 535 ಏರ್‌ಲಿಫ್ಟ್ ಸ್ಕ್ವಾಡ್ರನ್‌ಗೆ ಸಿ-17 ಗ್ಲೋಬ್ ಮಾಸ್ಟರ್ ಈಈಈ ಸೇರ್ಪಡೆಯಾಗಿದೆ. ಜಪಾನಿನ ಮಿಸವಾ 35ನೇ ಫೈಟರ್ ವಿಂಗ್ ಗೆ ಎಫ್-16 ಫೈಟಿಂಗ್ ಫಾಲ್ಕನ್‌ಗಳನ್ನು ಸೇರ್ಪಡೆ ಮಾಡಲಾಗಿದೆ.
ಏರೋ ಇಂಡಿಯಾ ಪ್ರದರ್ಶನಕ್ಕಾಗಿ ಬಂದಿಳಿದ ರಫೇಲ್ ವಿಮಾನಗಳು
ಏರೋ ಇಂಡಿಯಾದ ಉದ್ಘಾಟನಾ ಸಮಾರಂಭದಲ್ಲಿ (ಫೆ. 20) ಗುವಾಮ್‌ನ ಆಂಡರ್ಸನ್ ವಾಯುನೆಲೆಯ 23ನೇ ಎಕ್ಸಪೆಡಿಷನರಿ ಬಾಂಬ್‌ಸ್ಕ್ವಾಡ್ರನ್ ನ ಬಿ 52 ಸ್ಟ್ರಾಟೊಫೋರ್ಟೆಸ್ ಬಾಂಬರ್‌ಗಳು ಹಾರಾಟ ನಡೆಸಲಿವೆ.
-
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications