'ಜಯಮ್ಮರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿ'

'ಒಂದು ವೇಳೆ ತಮಿಳುನಾಡು ಸರ್ಕಾರ ಮನವಿ ಸಲ್ಲಿಸಿದರೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಪರಾಧಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ತಮಿಳುನಾಡಿನ ಜೈಲಿಗೆ ಸ್ಥಳಾಂತರ ಮಾಡಲಾಗುವುದು' ಕರ್ನಾಟಕದ ಕಾನೂನು ಸಚಿವ ಟಿ.ಬಿ ಜಯಚಂದ್ರ ಇತ್ತೀಚೆಗೆ ಹೇಳಿದ್ದಾರೆ.

ಜಯಲಲಿತಾ ಅವರನ್ನು ತಮಿಳುನಾಡಿಗೆ ಕಳಿಸುವುದು ಅಥವಾ ಪ್ರಕರಣದ ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವುದು ನಮ್ಮ ಕೈಲಿಲ್ಲ ಕೋರ್ಟ್ ನಿರ್ಧರಿಸಬೇಕು, ಕೋರ್ಟ್ ಹೇಳಿದಂತೆ ನಡೆಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದೂ ಆಗಿದೆ.

ಅದರೆ, ನಮಗೆ ಬೇಡದ ಅತಿಥಿಯನ್ನು ಇಲ್ಲೇಕೆ ಕೂರಿಸಿಕೊಂಡು ನಮ್ಮವರು ಕಷ್ಟಪಡಬೇಕು ಎಂಬ ಪ್ರಶ್ನೆ ಹಲವರ ಮನದಲ್ಲಿ ಒಮ್ಮೆಯಾದರೂ ಸುಳಿದಿರಲಿಕ್ಕೂ ಸಾಕು. ಇಂಥ ಪರಿಸ್ಥಿತಿಯಲ್ಲಿ ಜಯಾ ಅವರನ್ನು ಬೆಳಗಾವಿಗೆ ವರ್ಗಾಯಿಸಿದರೆ ಹೇಗೆ? ಇದರಿಂದ ಪರೋಕ್ಷವಾಗಿ ಬೆಳಗಾವಿಯ ಅಭಿವೃದ್ಧಿ ಆಗಲು ಸಾಧ್ಯವಿದೆಯೆಲ್ಲ ಎಂದು ಮಲ್ಲಿಕಾರ್ಜುನ ಚೌಕಾಶಿ ಎಂಬುವರು ಬರೆದ ಪೋಸ್ಟ್ ಅನ್ನು ನಟಿ ಶ್ವೇತಾ ಪಂಡಿತ್ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.. [ಎಡಿಎಂಕೆಯಿಂದ ಜಯಲಲಿತಾಗೆ ಕೊಕ್ ಏಕೆ? ]

Jayalalithaa

ಜಯಮ್ಮರನ್ನು..... ನಮ್ಮ ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಿ. ಇದರಿಂದ ನಾಲ್ಕು ವರ್ಷ ಇಲ್ಲಿನ ಪ್ರವಾಸೋದ್ಯಮ, ಹೋಟೆಲ್ ಮತ್ತು ಬಾಡಿಗ ವಾಹನಗಳ ಮಾಲೀಕರಿಗೆ ಆನುಕೂಲವಾಗುತ್ತದೆ.

ಬೆಂಗಳೂರಿಗೆ ಸುಲಭವಾಗಿ ಅವತ್ತೆ ಬಂದು ಅವತ್ತೆ ಹೋಗುತ್ತಾರೆ ಆದರೆ ಬೆಳಗಾವಿ ದೂರ ಇರೋದರಿಂದ ಎರಡು ಮೂರು ದಿನ ಬೇಕು ಈ ವೇಳೆಯಲ್ಲಿ ರಾಜ್ಯದಲ್ಲಿ ಅಮ್ಮನ ಮಕ್ಕಳು ಮಾಡುವ ಖರ್ಚಿನಲ್ಲಿ ವ್ಯಾಪಾರಿಗಳಿಗೆ ಲಾಭ ಹಾಗೂ ಸರಕಾರಕ್ಕೆ ತೆರಿಗೆ ರೂಪದಲ್ಲಿ ಸಹಾಯವಾಗುತ್ತದೆ.

ಇನ್ನೂ ದೇಶದ ಎಲ್ಲ ಮಾಧ್ಯಮಗಳು ವರದಿಗೆ ಬೆಳಗಾವಿಗೆ ಬರೊದರಿಂದ ಇಲ್ಲಿನ ಇನ್ನಿತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಸಹಾಯ ವಾಗುವದರೊಂದಿಗೆ ಬೆಳಗಾವಿ ಕರ್ನಾಟಕದ್ದೇ ಅನ್ನುವುದು ಮಾಧ್ಯಮದವರ ಅರಿವಿಗೂ ಬರುತ್ತದೆ ಮತ್ತು ಅಮ್ಮನ ಬಗ್ಗೆಯೆ ಹೆಚ್ಚು ಹೆಚ್ಚು ವರದಿ ಪ್ರಸಾರ ಆಗುವುದರಿಂದ ಗಡಿ ಸಮಸ್ಯೆ ಗೌನವಾಗುವುದರೊಂದಿಗೆ ದೇಶದ ತುಂಬೆಲ್ಲ ವರದಿ ಕೇಳಿ ಕೇಳಿ ಬೆಳಗಾವಿ ಕರ್ನಾಟಕದ್ದೇ ಅಂತ ಮೆದುಳಿನಲ್ಲಿ ಅಚ್ಚಾಗಿ ಬಿಟ್ಟಿರುತ್ತದೆ. ಮುಂದೆ ಮರಾಠಿಗರದು ಪುಂಡಾಟಿಕೆ ಆರಂಭಿಸಿದಾಗ ಅದಕ್ಕೆ ದೇಶದ ಜನ ಸೇರಿದಂತೆ ಮಾಧ್ಯಮದವರು ಹೆಚ್ಚಿನ ಮಹತ್ವ ಕೊಡುವುದು ತಪ್ಪುತ್ತದೆ.

ದಯವಿಟ್ಟು ಎಲ್ಲರೂ ಅಮ್ಮನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿ.

ದಯವಿಟ್ಟು ಈ ವಿಷಯವನ್ನು ಸಾದ್ಯವಾದಷ್ಟು ಹೆಚ್ಚು ಹೆಚ್ಚು ಹರಡಿ ಸರಕಾರ ತಮಿಳುನಾಡಿಗೆ ಸ್ಥಳಾಂತರ ಮಾಡುವ ಮುಂಚೆ. ಒಂದು ವೇಳೆ ಅಲ್ಲಿಗೆ ಕಳಿಸಿದ್ದೇ ಆದರೆ ಹಿಂದೆ ಲಾಲೂ ಮಾಡಿದಂತೆ ಯಾವುದಾದರು ಒಂದು ಸರಕಾರಿ IB ಯನ್ನು ಜೈಲಾಗಿ ಆದೇಶ ಹೊರಡಿಸಿ ಅದರಲ್ಲಿ ರಾಜವೈಭೋಗದಿಂದ ಇರತ್ತಾರೆಆಗ ಅದು ಶಿಕ್ಷೆನೂ ಆಗಲ್ಲ ಕಾವೇರಮ್ಮನಿಗೆ ಶಾಂತಿನೂ ಸಿಗಲ್ಲ.

ಅಂದಹಾಗೆ, ಶುಕ್ರವಾರ ಸಂಜೆ ಹೊತ್ತಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನವೆಂಬರ್ 1 ರಿಂದ ಬೆಳಗಾವಿಯಲ್ಲಿ 'ಬೆಳಗಾಂ' ಎಂದು ಕರೆಯದೆ 'ಬೆಳಗಾವಿ' ಎಂದೇ ಬಳಸುವಂತೆ ಫರ್ಮಾನು ಹೊರಡಿಸಲು ತೀರ್ಮಾನಿಸಲಾಗಿದೆ.

ಹಿಂಡಲಗಾ ಜೈಲು ಎಲ್ಲಿದೆ? ಯೋಚಿಸಬೇಡಿ.. ಈಗಲೇ ಗೂಗಲ್ ನಕಾಶೆಯಲ್ಲಿ ಹುಡುಕಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+