BREAKING: ದರ್ಶನ್ ತುಗೂದೀಪ್‌ಗೆ ಕೋರ್ಟ್ ಮತ್ತೆ ಶಾಕ್

ಬೆಂಗಳೂರು, ಸೆಪ್ಟಂಬರ್ 27: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ತುಗೂದೀಪ್ ಜಾಮೀನು ಅರ್ಜಿ ಇಂದು ಬೆಂಗಳೂರು ಸೆಷನ್ ಕೋರ್ಟ್‌ ವಿಚಾರಣೆ ನಡೆಸಿತು. ಇಂದು ಸಹ ನಟ ದರ್ಶನ್‌ಗೆ ಜಾಮೀನು ಸಿಗದೇ, ನಿರಾಸೆಯಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಸೆಪ್ಟಂಬರ್ 30ಕ್ಕೆ ಮುಂದೂಡಲಾಯಿತು. ಇದರಿಂದಾಗಿ ದರ್ಶನ್‌ಗೆ ಮತ್ತೆ ಜೈಲೇ ಗತಿಯಾಗಿದೆ.

ಇಂದು ಜಾಮೀನು ಸಿಗಲಿದೆ ಎಂದು ಭಾವಿಸಿದ್ದ ನಟ ದರ್ಶನ್‌ಗೆ ಮತ್ತೊಮ್ಮೆ ನಿರಾಸೆಯಾಗಿದೆ. ಜಾಮೀನು ಅರ್ಜಿ ಮುಂದೂಡುವ ಮೂಲಕ ಕೋರ್ಟ್ ಮತ್ತೆ ಶಾಕ್ ನೀಡಿದೆ. ಇತ್ತ ಪ್ರಕರಣದ ಆರೋಪಿ ಪವಿತ್ರಾ ಗೌಡರ ಜಾಮೀನು ಅರ್ಜಿ ವಿಚಾರಣೆ ಮುಂದುವರಿದಿದೆ.

Actor Darshan Thoogudeepa Bail Court Hearing Adjournment on September 30th

ನಟ ದರ್ಶನ್ ಜಾಮೀನು ಅರ್ಜಿ ವಿರುದ್ಧ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್ ವಕೀಲ ಸುನೀಲ್ ಅವರು ಹಿರಿಯ ವಕೀಲಯ ಇಂದು ಇಲ್ಲದಿರುವುದರಿಂದ ವಾದಮಂಡನೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಕೀಲರ ವಾದ ಆಲಿಸಿದ ಬೆಂಗಳೂರು ಸೆಷನ್ ಕೋರ್ಟ್ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರ (ಸೆಪ್ಟಂಬರ್ 30) ಮುಂದೂಡಿಕೆ ಮಾಡಿತು.

ಈ ಅರ್ಜಿ ವಿಚಾರಣೆ ವೇಳೆ, ವಾದ ಮಾಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು, ನಟ ದರ್ಶನ್ ಪರ ವಕೀಲರು ನಮಗೆ ಆಕ್ಷೇಪಣೆ ಸಲ್ಲಿಸಿಲ್ವೆಂದು ಹೇಳುತ್ತಿದ್ದರು. ಇದೀಗ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ನಾವು ವಾದ ಮಂಡನೆಗೆ ಸಿದ್ಧ ಎಂದು ಕೋರ್ಟ್‌ ಗಮನಕ್ಕೆ ತಂದರು. ಕೊನೆಗೆ ದರ್ಶನ್ ಪರ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿದರು.

ನಟಿ ಪವಿತ್ರಾ ಗೌಡ ಪರ ವಾದ ಮಂಡಿಸಿರುವ ವಕೀಲರು, ಪ್ರಕರಣದಲ್ಲಿ ನಟಿಯ ಪಾತ್ರವಿಲ್ಲ. ಅವರಿಗೆ ರೇಣುಕಾಸ್ವಾಮಿ ಅವರನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ಸಂದೇಶ ವಿಷಯಗಳನ್ನು ನಟ ದರ್ಶನ್ ಬಳಿ ಹೇಳಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಅವರು ಮನಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ 17 ಜನರ ಪೈಕಿ ಮೂರವರಿಗೆ ನ್ಯಾಯಾಲಯ ಜಾಮೀನು ಮಂಜೂರು ಆಗಿದೆ. ಇದೀಗ ನಟ ದರ್ಶನ್ ಹಾಗೂ ಪವಿತ್ರಾಗೌಡ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಸೆಪ್ಟಂಬರ್ 30ರಂದು ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+