ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು 'ದರ್ಶನ್ ಗ್ಯಾಂಗ್' ಕ್ರೌರ್ಯ

ಬೆಂಗಳೂರು, ಜೂನ್ 15: ನಟನಾಗಿ ಹೆಸರು ಮಾಡಿದ್ದ ದರ್ಶನ್ ಇಂದು ಜೈಲು ಪಾಲಾಗಿದ್ದಾರೆ. ಇದಕ್ಕೆ ರೇಣುಕಾಸ್ವಾಮಿ ಕೊಲೆ ಮಾಡಿರುವ ವಿಚಾರ ಇಡೀ ರಾಜ್ಯಕ್ಕೆ ಗೊತ್ತಾಗಿದ್ದು, ಸದ್ಯ ಈ ಪ್ರಕರಣದಲ್ಲಿ ಕೊಲೆಗೆ ಸಂಬಂಧಿಸಿದಂತೆ ಹೊತದೊಂದು ಮಾಹಿತಿ ಬೆಳಕಿಗೆ ಬಂದಿದೆ.

ದರ್ಶನ್ ಪ್ರೇಯಸಿಗೆ ಅಶ್ಲೀಲವಾಗಿ ಸಂದೇಶ ಕಳಹಿಸಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ದರ್ಶನ್ ಗ್ಯಾಂಗ್ ಕೊಲೆ ಮಾಡಿದ್ದಾರೆ. ಈ ಮಾಹಿತಿ ಪೊಲೀಸರು ತನಿಖೆಯಿಂದ ಬಹಿರಂಗವಾಗಿದೆ.

Actor Darshan Gang Given Electric Shock to Renuka Swamy Before Murder

ರೇಣುಕಾಸ್ವಾಮಿಯನ್ನು ಹೇಗೆ ಮರ್ಡರ್ ಮಾಡಲಾಗಿದೆ ಎಂಬುದರ ಕುರಿತು ನೆನ್ನೆಯಷ್ಟೇ ಇಬ್ಬರು ತನಿಖಾ ಪೊಲೀಸರ ಮಧ್ಯದ ಆಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಮತ್ತೊಂದು ಮಾಹಿತಿ ಪಡೆದಿರುವ ಪೊಲೀಸರೇ ದಂಗಾಗಿದ್ದಾರೆ.

ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ

ಮೃತ ರೇಣುಕಾಸ್ವಾಮಿಗೆ ಶೆಡ್‌ನಲ್ಲಿಟ್ಟ ವೇಳೆ ಮನ ಬಂದಂತೆ ಹೊಡೆದು ಹಲ್ಲೆ ಮಾಡುವ ಜೊತೆಗೆ ಬರೆ ಹಾಕಿದ್ದಾರೆ. ಎತ್ತಿ ಲಾರಿಗೆ ಬಿಸಾಡಿದ್ದಾರೆ. ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಆತನಿಗೆ ಬರೆ ಸಹ ಹಾಕಿದ್ದಾರೆ. ಬೆಲ್ಟ್, ಕಬ್ಬಿಣದ ಸರಳಿನಿಂದ ಹೊಡೆದಿದ್ದಾರೆ. ಇದೇ ವೇಳೆ ಆತನಿಗೆ ಡಿವೈಸ್ ವೊಂದರಿಂದ ಎಲೆಕ್ಟ್ರಿಕ್ ಶಾಕ್ ಸಹ ನೀಡಿದ್ದಾರೆ ಎಂದು ಪೊಲೀಸರ ಮುಂದೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರು ಆತನಿಗೆ ಶಾಕ್ ಕೊಟ್ಟ ಡಿವೈಸ್‌ ಅನ್ನು ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ. ಸಾಕ್ಷ್ಯಗಳು, ಹೊಸ ಹೊ ಮಾಹಿತಿಗಳು ಪ್ರಕರಣದಲ್ಲಿ ಬಿಚ್ಚಿಕೊಳ್ಳುತ್ತಿದ್ದಂತೆ ಮತ್ತೊಮ್ಮೆ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Actor Darshan Gang Given Electric Shock to Renuka Swamy Before Murder

ಸದ್ಯ ನಟ ದರ್ಶನ್, ಆತನ ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಐದನೇ ಆರೋಪಿ ಹಾಗೂ 11 ಆರೋಪಿ ಈ ಇಬ್ಬರು ಕೊಲೆಯಾದ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್ 20ರವರೆಗೆ ಡಿ ಗ್ಯಾಂಗ್ ಪೋಲಿಸ್ ವಶಕ್ಕೆ

ಸದ್ಯ ಆರು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದು, ಶನಿವಾರ ದರ್ಶನ್ ಸೇರಿ ಗ್ಯಾಂಗ್ ಅನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನಷ್ಟು ವಿಚಾರಣೆಗೆ ಅಗತ್ಯತೆ ಇರುವ ಕಾರಣ ಪೊಲೀಸರು ಕಸ್ಟಡಿಗೆ ಕೇಳಿದ್ದಾರೆ. ವಾದ ವಿವಾದ ಆಲಿಸಿದ ಪೊಲೀಸರು ಡಿ-ಗ್ಯಾಂಗ್‌ನಲ್ಲಿ ಹತ್ತು ಮಂದಿಯನ್ನು ಮತ್ತೆ 5 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ. ಮುಂದಿನ ಜೂನ್ 20ರವರೆಗೆ ಇವರು ಪೋಲಿಸ್ ವಶಕ್ಕೆ ನೀಡಲಾಗಿದೆ.

ಇತ್ತ ಪವಿತ್ರಾಗೌಡ ಸಹ ರೇಣುಕಾಸ್ವಾಮಿ ಇದ್ದ ಶೆಡ್ ಬಂದ ಬಳಿಕ ಚಪ್ಪಲಿಯಿಂದ ಹೊಡೆದಿದ್ದಾಳೆ. ಆಕೆ ಸಹ ಹಲ್ಲೆ ಮಾಡಿದ್ದು, ಇದೀಗ ಪೊಲೀಸರು ಪವಿತ್ರಾಗೌಡ ಮನೆಯಲ್ಲಿ ಮಹಜರು ಮಾಡುತ್ತಿದ್ದಾರೆ. ಆಕೆಯ ಚಪ್ಪಲಿಯನ್ನು ಸಹ ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಿದ್ದಾರೆ.

ಒಟ್ಟಾರೆ ದರ್ಶನ್ ಆಂಡ್ ಗ್ಯಾಂಗ್ ನಡೆದುಕೊಂಡ ರೀತಿ ಭಯಂಕರ ಎಂಬುದು ದಿನಗಳೆದಂತೆ ಗೊತ್ತಾಗುತ್ತಿದೆ. ಅಲ್ಲದೇ ಗ್ಯಾಂಗ್ ನ ಕೆಲವರು ಶವ ಬಿಸಾಡುವಾಗಿ ರೇಣುಕಾಸ್ವಾಮಿ ಮೈ ಮೇಲಿನ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಅದರ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+