Darshan First Reaction: ನಟ ದರ್ಶನ್ ಮೊದಲ ರಿಯಾಕ್ಷನ್-ವಿಡಿಯೋ ಭಾರೀ ವೈರಲ್
Darshan First Reaction: ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಪಟಲಾಂ ಈಗಾಗಲೇ ಜೈಲು ಪಾಲಾಗಿದ್ದಾರೆ. ಇನ್ನು ನಿನ್ನೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪರಪ್ಪನ ಅಗ್ರಹಾರದತ್ತ ಕೊರೆದೊಯ್ಯುವಾದ ನಟ ದರ್ಶನ್ ಪೊಲೀಸ್ ವ್ಯಾನ್‌ನಲ್ಲಿಯೇ ಅಭಿಮಾನಿಗಳ ಕಡೆ ತಿರುಗಿ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದು, ಈ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಹಾಗಾದರೆ ದರ್ಶನ್ ಏನು ಹೇಳಿದ್ದಾನೆ ಎಂದು ಇಲ್ಲಿ ತಿಳಿಯಿರಿ.
ಪೊಲೀಸ್ ಕಸ್ಟಡಿ ಅಂತ್ಯವಾಗುವವರೆಗೂ ಸುಮ್ಮನಿದ್ದ "ದಾಸ" ನಿನ್ನೆ (ಜೂನ್ 23) ಪೊಲೀಸ್ ಕಸ್ಟಡಿ ಮುಗಿದ ಬಳಿಕ ಮೊದಲ ಬಾರಿಗೆ ಅಭಿಮಾನಿಗಳ ನೋಡಿ ಪ್ರತಿಕ್ರಿಯೆ ನೀಡಿರುವ ವಿಡಿಯೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸತತ 12 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ನ್‌ನನ್ನು ಪೊಲೀಸರು ನಿನ್ನೆ (ಜೂನ್ 22) ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ದರ್ಶನ್ & ಗ್ಯಾಂಗ್ ಅನ್ನು 12 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು.
ಇನ್ನು ನಟ ದರ್ಶನ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪೊಲೀಸರು ವ್ಯಾನ್‌ನಲ್ಲಿ ಪರಪ್ಪನ ಅಗ್ರಹಾರಕ್ಕೆ ಈ ದರ್ಶನ್ & ಗ್ಯಾಗ್ ಅನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ನಟ ದರ್ಶನ್ ಪೊಲೀಸ್ ವ್ಯಾನ್‌ನಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳತ್ತ ಕೈಬೀಸಿ ಮಾತನಾಡಿದ್ದಾರೆ. ನನಗೇನು ಆಗುವುದಿನಲ್ಲ, ಆರಾಮಗಿದ್ದೇನೆ ಎಂದು ಹೇಳುವ ಮೂಲಕ ಪ್ಲೈಯಿಂಗ್ ಕಿಸ್ ಕೊಟ್ಟಿರು ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಅಲ್ಲದೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ದರ್ಶನ್, ವಿನಯ್, ಪ್ರದೂಷ್ ಮತ್ತು ಧನರಾಜ್‌ಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಇನ್ನು ಕೋರ್ಟ್‌ಗೆ ಕರೆತರುವ ಮುನ್ನ ಅಂಧಾಭಿಮಾನಿಗಳ ಹುಚ್ಚಾಟ ಮುಂದುವರೆದಿತ್ತು. ಇನ್ನು ಈ ವೇಳೆ ಪೊಲೀಸರು ಅಂಧಾಭಿಮಾನಿಗಳಿಗೆ ಲಾಠಿ ರುಚಿ ತೋರಿಸುವ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ.












Click it and Unblock the Notifications