Actor Darshan: ನಟ ದರ್ಶನ್‌ಗೆ ಎದುರಾಯ್ತು ಮತ್ತೊಂದು ಸಂಕಷ್ಟ.!

Actor Darshan Pistols Seized: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಇದರ ನಡುವೇ ಇದೀಗ ಪ್ರಕಣದ ಎ1 ಆರೋಪಿ ದರ್ಶನ್‌ ಹಾಗೂ ಪ್ರದೋಷ್‍ನ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.

ನಟ ದರ್ಶನ್ ಬಳಿ ಲೈಸೆನ್ಸ್ ಪಡೆದಿರುವ 2 ಯುಎಸ್ ಮೇಡ್ ಪಿಸ್ತೂಲ್‍ಗಳಿದ್ದರೆ, ಪ್ರದೋಷ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್ ಇರುವುದು ಬಹಿರಂಗವಾಗಿದೆ. ಇನ್ನು ನಟ ದರ್ಶನ್ ಮತ್ತು ಪ್ರದೋಷ್‍ಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿಯನ್ನು ಪೊಲೀಸರೇ ನೀಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯೊಂದು ಬಟಾಬಯಲಾಗಿದೆ.

Actor Darshan 2 US made license pistols Seized of Renukaswamy murder Accused

ಕಳೆದ ಬಾರಿಯ ಲೋಕಸಭಾ ಚುನಾವಣಾ ಸಂದರ್ಭದಲ್ಲು ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕು. ಆದರೆ ಗಣ್ಯ ವ್ಯಕ್ತಿಗಳು ಅನಿವಾರ್ಯದ ಕುರಿತು ದಾಖಲೆ ನೀಡಿ ಶಸ್ತ್ರಾಸ್ತ್ರ ವಾಪಸ್ ನೀಡುವಿಕೆಯಿಂದ ವಿನಾಯಿತಿ ಪಡೆಯಬಹುದಾಗಿದೆ. ನಿವೃತ್ತ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್‌ಗಳು, ಬ್ಯುಸಿನೆಸ್ ಮನ್‍ಗಳು, ಶಾಸಕರು, ಪರಿಷತ್ ಸದಸ್ಯರು ಸೇರಿ ಹಿರಿಯ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಬಹುದು. ಇವರನ್ನು ಹೊರತುಪಡಿಸಿ ಉಳಿದವರ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ವಶಕ್ಕೆ ಪಡೆಯಬೇಕೆಂಬ ನಿಯಮವಿದೆ.

ನಗರದ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿದ್ದು, ಅತಿ ಗಣ್ಯರಿಗೆ ನೀಡುವ ವಿನಾಯಿತಿಯಲ್ಲಿ ನಟ ದರ್ಶನ್ ಮತ್ತು ಪ್ರದೋಷ್‍ಗೆ ಸಹ ವಿನಾಯಿತಿ ನೀಡಿ ಕಳೆದ ಮಾರ್ಚ್ 27ರಂದು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಆದೇಶ ನೀಡಿದ್ದರು. ಬಿ.ದಯಾನಂದ್ ಅವರು ಶಸ್ತ್ರಾಸ್ತ್ರ ಠೇವಣಿ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದು, ಬೆಂಗಳೂರು ನಗರದ್ಯಾಂತ 7,830 ಗನ್ ಲೈಸೆನ್ಸ್ ಪರವಾನಗಿದಾರರಿದ್ದಾರೆ.

ಇದೀಗ ನಟ ದರ್ಶನ್ ಮತ್ತು ಪ್ರದೋಷ್ ಬಳಿಯಿದ್ದ ಲೈಸನ್ಟ್‌ ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳು ಆರ್‌ಆರ್ ನಗರ ಮತ್ತು ಗಿರಿನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಹಲವರು ಹೇಳುವ ಪ್ರಕಾರ ಸಂಜೆ ಆಯಿತೆಂದರೆ ಸಾಕು ನಟ ದರ್ಶನ್‌ ಗುಂಡು, ತುಂಡಿನಲ್ಲೇ ಮುಳುಗಿರುತ್ತಿದ್ದ. ಅಷ್ಟೇ ಅಲ್ಲದೆ, ಯಾರ ಜೊತೆಗಾದರೂ ಕಿರಿಕ್‌ ಮಾಡಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ. ದೇಹಕ್ಕೆ ಎಣ್ಣೆ ಸೇರ್ತು ಅಂದ್ರೆ ಸಾಕು ದರ್ಶನ್‌ ಮನುಷ್ಯನಾಗಿರುತ್ತಿರಲಿಲ್ಲ. ಬದಲಿಗೆ ತುಕಡಿ ಗ್ಯಾಂಗ್‌ ಕಟ್ಟಿಕೊಂಡು ಗಲಾಟೆ ಮಾಡುವುದೇ ಇವನ ಕೆಲಸವಾಗಿತ್ತು ಎನ್ನುವ ಗಂಭೀರ ಆರೋಪಗಳು ಈಗಾಗಲೇ ಕೇಳಿಬರುತ್ತಲೇ ಇವೆ.

ಇಂತಹ ಆರೋಪಗಳನ್ನು ಮಾಡುತ್ತಿರುವವರು ಒಬ್ಬರನ್ನ ಇಬ್ಬರಲ್ಲ, ಅವರನ್ನು ಹತ್ತಿರದಿಂದ ನೋಡಿರುವ ಪ್ರತಿಯೊಬ್ಬರ ಬಾಯಲ್ಲೂ ಬರುವುದೇ ದರ್ಶನ್‌ ಗುಂಡು, ತುಂಡಿನ ದಾಸನಾಗಿದ್ದ. ಅವನಿಗೆ ಕತ್ತಲಾಯಿತಂದರೆ ಸಾಕು ಕುಡಿದು ತೂರಾಡುವುದೇ ವೃತ್ತಿ ಮಾಡಿಕೊಂಡಿದ್ದ. ಅಪ್ಪನಿಗೆ ತಕ್ಕ ಮಗನಂತೆ ಬದುಕಲಿಲ್ಲ. ಅಪ್ಪ ನಟನೆಯಲ್ಲಿ ಖಳನಾಯಕನಾಗಿದ್ದು, ನಿಜ ಜೀವನದಲ್ಲಿ ನಾಯಕರಾಗಿದ್ದರು. ಇನ್ನು ಮಗ ದರ್ಶನ್‌ ಸಿನಿಮಾನಗಳಲ್ಲಿ ನಾಯಕನಾಗಿದ್ದರೆ, ನಿಜಜೀವನದಲ್ಲಿ ಮಾತ್ರ ಖಳನಾಯಕನಾಗಿದ್ದಾನೆ ಎಂದು ದೂರುವವರೇ ಹೆಚ್ಚಾಗಿದ್ದಾರೆ.

ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 12 ದಿನಗಳ ಕಾಲ ನಟ ದರ್ಶನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಸದಾ ಗುಂಡು, ತುಂಡಿನಲ್ಲೇ ಮುಳುಗಿರುತ್ತಿದ್ದ ದರ್ಶನ್‌ ಈಗ ಜೈಲಿನಲ್ಲಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆಗಳು ಎದ್ದಿದೆ. ಯಾಕೆ ಈ ಪ್ರಶ್ನೆ ಎಂದರೆ ಸಾಮಾವ್ಯವಾಗಿ ಕುಡಿತದ ಚಟದಿಂದ ಹೊರಬರುವುದು ತುಂಬಾನೇ ಕಷ್ಟ. ಅದರಲ್ಲೂ ದಿನಗುಡುಕರು ಒಂದು ದಿನ ಎಣ್ಣೆ ಬಿಟ್ಟರೆ ಅವರ ಕೈ, ಕಾಲು ನಡುಗುತ್ತವೆ ಎನ್ನುವ ಮಾತುಗಳಿವೆ. ಹಾಗೆಯೇ ದರ್ಶನ್‌ ಪಾಡು ಇದೀಗ ಏನು ಎನ್ನುವ ಪ್ರಶ್ನೆಗಳು ಎದ್ದಿವೆ.

ಜೈಲಿನಲ್ಲಿ ಎಲ್ಲಾ ಕೈದಿಗಳಿಗೂ ಏನು ಊಟ ಕೊಡುತ್ತಾರೋ (ಮುದ್ದೆ, ಚಪಾತಿ, ಸಾಂಬಾರ್‌) ಅದನ್ನೇ ನಟ ದರ್ಶನ್‌ಗೂ ಕೊಡಲಾಗುತ್ತದೆ. ಇದಕ್ಕೆ ದರ್ಶನ್‌ ಹೇಗೆ ಹೊಂದಿಕೊಳ್ಳುತ್ತಾರೋ ಅಂತಲೂ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪ್ರಶ್ನೆಗಳ ಸರಮಾಲೆಯೇ ಎದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+