ಹುಷಾರ್! ಟ್ವೀಟ್ ಮಾಡಿದ್ರೆ ಕೇಸು ಹಾಕ್ತಾರೆ ಜಗ್ಗೇಶ್

ಬೆಂಗಳೂರು ಜುಲೈ 22: ಸಾಮಾಜಿಕ ಜಾಲ ತಾಣಗಳನ್ನು ಹೇಗೆಲ್ಲ ಅನರ್ಥಕ್ಕೆ ಅಪಾರ್ಥಕ್ಕೆ ಅನಾಹುತಕ್ಕೆ ಬಳಸಿಕೊಳ್ಳಬಹುದು ಎಂಬುದಕ್ಕೆ ಲೇಟೆಸ್ಟ್ ಉದಾಹರಣೆಯಾಗಿರುವ ಜಗ್ಗೇಶ್ ಹಾಗೂ ಉಪ್ಪಿ ಫ್ಯಾನ್ಸ್ ನಡುವಿನ ಜಟಾಪಟಿ ಈಗ ಮತ್ತೊಂದು ಹಂತ ಮುಟ್ಟಿದೆ. ತಮಗೆ ಕಿರಿಕಿರಿ ನೀಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲು ಎಂಎಲ್ ಸಿ ಜಗ್ಗೇಶ್ ನಿರ್ಧರಿಸಿದ್ದಾರಂತೆ.

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ನವರಸ ನಾಯಕ ಜಗ್ಗೇಶ್ 'ಉಪ್ಪಿ-2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ' ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೆಲ ಟ್ವೀಟ್ ಗಳನ್ನ ಮಾಡಿದ್ದರು.ಇದಕ್ಕೆ ಪ್ರತಿಯಾಗಿ ಉಪೇಂದ್ರ vs ಜಿತೇಂದ್ರ ವಾರ್ ಶುರುವಾಗಿತ್ತು. ಕೊನೆಗೆ ಇದು ಬ್ರಾಹ್ಮಣ vs ಒಕ್ಕಲಿಗ ಎಂಬಲ್ಲಿಗೆ ನಿಂತಿತ್ತು.[ಜಗ್ಗೇಶ್ ಬಯಲು ಮಾಡಿದ ಸತ್ಯ]

ಈಗಾಗಲೇ ಜಗ್ಗೇಶ್ ಅವರು ಹಲವಾರು ಫ್ಯಾನ್ಸ್ ಗಳನ್ನು ತಮ್ಮ ಖಾತೆಯಿಂದ ಹೊರಹಾಕಿದ್ದಾರೆ. ಎಚ್ಚರಿಕೆಯನ್ನೂ ನೀಡಿದ್ದಾರೆ. ಸೈಬರ್ ಕ್ರೈಂ ಪೊಲೆಸರ ನೆರವು ಪಡೆಯಲು ಶಾಸಕ ಜಗ್ಗೇಶ್ ನಿರ್ಧರಿಸಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲೂ ಸುಳಿವು ನೀಡಿದ್ದಾರೆ.[ ಕನ್ನಡಿಗ ಒಂದಾಗಿ ಬಾಳಿದ ಇತಿಹಾಸವೇ ಇಲ್ಲ: ಜಗ್ಗೇಶ್]

ಈ ವೇಳೆಗಾಗಲೇ ಕ್ರಿಮಿನಲ್ ಕೇಸ್ ದಾಖಲಾಗಿರುತ್ತೆ. ಆದರೆ, ಯಾರ ಮೇಲೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸರಿ ಸುಮಾರು 69ಕ್ಕೂ ಅಧಿಕ ಮಂದಿಯನ್ನು ಜಗ್ಗೇಶ್ ಅವರು ತಮ್ಮ ಖಾತೆಯಿಂದ ಹೊರಹಾಕಿದ್ದರು ಅಥವಾ ನಿರ್ಬಂಧ ಹೇರಿದ್ದರು.

ಯಾರಿಂದ ಯಾರು ಬೆಳೆದರು ನೀವೇ ನಿರ್ಧರಿಸಿ

ಯಾರಿಂದ ಯಾರು ಬೆಳೆದರು ನೀವೇ ನಿರ್ಧರಿಸಿ

ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕ ಜಗ್ಗೇಶ್ ಬೇಡಿಕೆ ಕಂಡುಕೊಂಡಿದ್ದು ಹೇಗೆ. ಉಪೇಂದ್ರ ಮತ್ತು ಜಗ್ಗೇಶ್ ಅವರ ಕಾಂಬಿನೇಷನ್ ನ 'ತರ್ಲೆ ನನ್ ಮಗ' ಚಿತ್ರ ಶುರುವಾಗಿದ್ದು ಹೇಗೆ ಎಂಬುದನ್ನು ಫೇಸ್ ಬುಕ್ ನಲ್ಲಿ ಜಗ್ಗೇಶ್ ಹೇಳಿಕೊಂಡಿದ್ದರು.

rn

ಇನ್ಮೇಲೆ ನಾನು ಮಾತನಾಡುವುದಿಲ್ಲ ಎಂದ ಜಗ್ಗೇಶ್

ಇನ್ಮೇಲೆ ನಾನು ಮಾತನಾಡುವುದಿಲ್ಲ, ನನ್ನ ಪರವಾಗಿ ನನ್ನ ಅಭಿಮಾನಿಗಳು ಮಾತನಾಡುತ್ತಾರೆ. ಅವರಿಗೆ ಎಲ್ಲವೂ ಹೊತ್ತು. ಹುಲಿ ಬೇಟೆ ಹೇಗೆ ಎಂಬುದನ್ನು ವಿವರಿಸಬೇಕಿಲ್ಲ ಎಂದ ಜಗ್ಗೇಶ್

ಯಾರು ಹಿತವರು ನನಗೆ ಈ ಲೋಕದಲ್ಲಿ

ಯಾರು ಹಿತವರು ನನಗೆ ಈ ಲೋಕದಲ್ಲಿ ಎಂಬುದು ಈಗ ಅರ್ಥವಾಗಿದೆ. ನಾನ್ ಹೇಳಲ್ಲಾ ಬೇರೆಯವರು ಹೇಳುತ್ತಾರೆ

ಕಿರಿಕ್ ಮಾಡಿದವರನ್ನು ಪುಂಡಾನೆಗಳಿಗೆ ಹೋಲಿಸಿದ್ರು

ಕಿರಿಕ್ ಮಾಡಿದವರನ್ನು ಪುಂಡಾನೆಗಳಿಗೆ ಹೋಲಿಸಿದ ಜಗ್ಗೇಶ್, ಹೇಳಿದ್ದು ಏನು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+