Actor Aniruddha: ಹದಗೆಟ್ಟ ಮುಖ್ಯರಸ್ತೆ ಮೇಲೆ ನಿಂತ ನಟ ಅನಿರುದ್ಧ, ವಿಡಿಯೋದಲ್ಲಿ ಹೇಳಿದ್ದೇನು?
ಬೆಂಗಳೂರು, ಮೇ 29: ಬೆಂಗಳೂರು ಹದಗೆಟ್ಟ ರಸ್ತೆ ಬಗ್ಗೆ ಹೆಚ್ಚು ಪ್ರಚಾರ ಪಡೆಯುತ್ತಿರುವುದು ಇದೇನು ಹೊಸದಲ್ಲ. ಅದರಲ್ಲೂ 'ಬ್ರ್ಯಾಂಡ್ ಬೆಂಗಳೂರು' ಉಪಕ್ರಮ ಘೋಷಣೆ ಆಗುತ್ತಿದ್ದಂತೆ ಪ್ರತಿ ಸಮಸ್ಯೆಗಳು ಅದರ ಹೆಸರಿನಲ್ಲಿ ಬೆಳಕಿಗೆ ಬರುತ್ತಿದೆ. ಇದೀಗ ನಟ ಅನಿರುದ್ಧ ಜಟ್ಕರ್ (Aniruddha Jatkar) ಅವರು ರಾತ್ರೋ ರಾತ್ರಿ ಕನಕಪುರ ಮುಖ್ಯ ರಸ್ತೆ ಮೇಲೆ ನಿಂತು ಸಾರ್ವಜನಿಕರ ಪರವಾಗಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಜನಪರ ಧ್ವನಿಯಾಗಿದ್ದಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ. ಹಾಗಾದರೆ ವಿಡಿಯೋದಲ್ಲಿ ಏನಿದೆ?
ಕನಕಪುರ ಹೋಗುವ ಮಾರ್ಗದಲ್ಲಿ ದೊಡ್ಡಕಲ್ಲಸಂದ್ರದ ಮುಖ್ಯರಸ್ತೆ ಮೇಲೆ ನಿಂತು ವಿಡಿಯೋ ಮಾಡಿದ್ದಾರೆ. ಹತ್ತೀರವೇ ಟಿವಿಎಸ್ ಶೋರೂಮ್, ಪೆಟ್ರೋಲ್ ಬಂಕ್ ಬಳಿ ಹದಗೆಟ್ಟ ರಸ್ತೆ ಬಗ್ಗೆ ಮಾತನಾಡಿದ್ದಾರೆ. ಬ್ರಾಂಡ್ ಬೆಂಗಳೂರು ಉಪಕ್ರಮ ಘೋಷಿಸಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಡಿಕೆ ಶಿವಕುಮಾರ್ ಅವರ ಕನಕಪುರ ವಿಧಾನಸಭಾ ಕ್ಷೇತ್ರ ಸಂಪರ್ಕಿಸುವ ರಸ್ತೆಯ ದುಸ್ಥಿತಿ ವಿಡಿಯೋದಲ್ಲಿ ಅನಾರವಣಗೊಂಡಿದೆ.

ನಟ ಅನಿರುದ್ಧ ಅವರು, ಈ ಮುಖ್ಯ ರಸ್ತೆ ನೋಡಿ ರಸ್ತೆಗಳೂ ಹಳ್ಳಗಳು ಬಿದ್ದಿವೆ. ಮೂರರಿಂದ ನಾಲ್ಕು ಕಿಲೋ ಮೀಟರ್ ವರೆಗೆ ರಸ್ತೆಯಲ್ಲಿ ಇದೇ ಪರಿಸ್ಥಿತಿ. ರಸ್ತೆ ಹದಗೆಟ್ಟಿದ್ದು, ದಿನ್ನೆಗಳು ಇವೆ. ರಸ್ತೆ ಹಂಪ್, ತಿರುವಿಗೆ ಬಣ್ಣ ಇಲ್ಲ. ರಸ್ತೆ ಅಕ್ಕಪಕ್ಕ ವಿದ್ಯುತ್ ದೀಪಗಳು ಕೆಲಸ ಮಾಡುತ್ತಿಲ್ಲ. ಇದು ಮುಖ್ಯರಸ್ತೆಯಾಗಿದ್ದು, ಇಲ್ಲಿಯೇ ಟಿವಿಎಸ್ ಶೋರೂಮ್ ಇದೆ. ಪೆಟ್ರೋ ಬಂಕ್ ಇದೆ.
ಅಧಿಕಾರಿಗಳಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ರಸ್ತೆ ಆದಷ್ಟು ಬೇಗ ಸರಿಪಡಿಸುವಂತೆ ಅವರು ಸಂಬಂಧಿಸಿದ ಬಿಬಿಎಂಪಿ ಸೇರಿದಂತೆ ರಾಜ್ಯ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.
ತಗ್ಗು, ಹಳ್ಳ ದಿನ್ನೆಗಳಿರುವ ಕನಕಪುರ ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಸಾಗುತ್ತಿವೆ. ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದು, ಡಾಂಬರು ಕಿತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಅನ್ನು ಸನಾತನ ಹೆಸರಿನ ಎಕ್ಸ್ ಹ್ಯಾಂಡಲ್ (@sanatan_kannada) ಶೇರ್ ಮಾಡಿಕೊಂಡಿದೆ.

ನಟ ಅನಿರುದ್ಧ ವಿಡಿಯೋ ವೈರಲ್
ಅನಿರುದ್ಧ ಅವರ ಈ ವಿಡಿಯೋ ಶೇರ್ ಮಾಡಿಕೊಂಡ ಕೇವಲ 24 ಗಂಟೆಗಳಲ್ಲೇ ಬರೋಬ್ಬರಿ 47,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸುಮಾರು 1400 ಲೈಕ್ಸ್‌ಗಳೂ ಬಂದಿವೆ. ನೂರಾರು ಕಾಮೆಂಟ್‌ಗಳು ಬಂದಿವೆ. ಅದರಲ್ಲಿ ಒಬ್ಬರು 'ಮೆಟ್ರೊ ಪಿಲ್ಲರ್/ ರಸ್ತೆ ಹಾದು ಹೋದ ರಸ್ತೆಗಳಲ್ಲಿ ಅತ್ಯಂತ ಅದಿಕ ಕೆಟ್ಟುಹೋದ ಹಳ್ಳಬಿದ್ದಿರುವ ರಸ್ತೆ ಆಗಿರುವುದು ಕಂಡು ಬರುತ್ತದೆ. ಮಳೆ ಬಂದಾಗ ವಾಹನಗಳು ಕೆಟ್ಟು ನಿಲ್ಲುವಂತೆ ಹಳ್ಳಗಳು ಇವೆ. ಇದಕ್ಕೆ ನಮ್ಮ ಮೇಟ್ರೋ ಪೂರ್ಣ ತಪಾಸಣೆ ಮಾಡಿ ರಸ್ತೆಯಲ್ಲಿ ಯಾರೂ ಕಾಮಗಾರಿ ಮಾಡಿದ್ದಾರೆ ಅವರೆ ಜವಾಬ್ದಾರಿ ಮಾಡಬೇಕು'' ಎಂದು ಆಗ್ರಹಿಸಿದ್ದಾರೆ. ಬಿಎಂಆರ್‌ಸಿಎಲ್‌ಗೆ ತಮ್ಮ ಕಾಮೆಂಟ್ ಟ್ಯಾಗ್ ಮಾಡಿದ್ದಾರೆ. ಹೀಗೆ ಸಾಕಷ್ಟು ನೆಟ್ಟಿಗರು ಗುಂಡಿಮುಕ್ತ ರಸ್ತೆ, ಸರ್ಕಾರದ ಆಡಳಿತ, ಬ್ರ್ಯಾಂಡ್ ಬೆಂಗಳೂರು ಕುರಿತು ಟೀಕಿಸಿದ್ದಾರೆ.
ಬ್ರಾಂಡ್ ಬೆಂಗಳೂರು ಬರ್ಬಾದ್ ಬೆಂಗಳೂರು ಆಗಬಾರದು. ಕನಕಪುರ ಮುಖ್ಯರಸ್ತೆ ಹಾಗೂ NH 209 ರಸ್ತೆಯ ದುಸ್ಥಿತಿಯನ್ನು ನಟರಾದ ಅನಿರುದ್ಧ್ ರವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. @nitin_gadkari @DKShivakumar @BBMPofficial ಯಾರ ವ್ಯಾಪ್ತಿಗೆ ಬರುತ್ತದೆ ಎನ್ನುವ ಗುದ್ದಾಟ ಬೇಡ ರಸ್ತೆ ಸರಿಪಡಿಸಿ. ಈ ರಸ್ತೆಯಲ್ಲಿ ಗರ್ಭಿಣಿಯರು ಹೋದರೆ… pic.twitter.com/vvZkxhsLf2
— ಸನಾತನ (@sanatan_kannada) May 28, 2025
'ಬ್ರಾಂಡ್ ಬೆಂಗಳೂರು ಬರ್ಬಾದ್ ಬೆಂಗಳೂರು' ಆಗದಿರಲಿ!
ಈ ವಿಡಿಯೋ ಪೋಸ್ಟ್ ಮೇಲೆ 'ಬ್ರಾಂಡ್ ಬೆಂಗಳೂರು ಬರ್ಬಾದ್ ಬೆಂಗಳೂರು ಆಗಬಾರದು'' ಎಂದು ಬರೆದುಕೊಳ್ಳಲಾಗಿದೆ.. ಕನಕಪುರ ಮುಖ್ಯರಸ್ತೆ ಹಾಗೂ NH 209 ರಸ್ತೆಯ ದುಸ್ಥಿತಿಯನ್ನು ನಟರಾದ ಅನಿರುದ್ಧ್ ರವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ರಸ್ತೆಯು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಬಿಬಿಎಂಪಿ ಇಲ್ಲವೇ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಯಾರ ವ್ಯಾಪ್ತಿಗೆ ಬರುತ್ತದೆ ಎನ್ನುವ ಗುದ್ದಾಟ ಬೇಡ ಸಾರ್ವಜನಿಕರಿಗಾಗಿ ರಸ್ತೆ ಸರಿಪಡಿಸಿ. ಈ ರಸ್ತೆಯಲ್ಲಿ ಗರ್ಭಿಣಿಯರು ಹೋದರೆ ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಅಷ್ಟು ಹದಗೆಟ್ಟಿದೆ ಎಂದು ಬರೆಯಲಾಗಿದೆ. ಈ ಮೂಲಕ ಸರ್ಕಾರ, ಬಿಬಿಎಂಪಿ ವತಿಯಿಂದ ಬೆಂಗಳೂರು ರಸ್ತೆ ನಿರ್ವಹಣೆ ಕುರಿತು ಸಾರ್ವಜನಿಕು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications