ಬೆಂಗಳೂರು; ಬೈಕ್ ವೀಲಿಂಗ್, ಮೂವರು ಸ್ಥಳದಲ್ಲೇ ಸಾವು
ಬೆಂಗಳೂರು, ಜೂನ್ 21 : ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಮುಂಜಾನೆ ಜಿಕೆವಿಕೆ ಬಳಿ ಯುವಕರು ವೀಲಿಂಗ್ ಮಾಡುವಾಗ ಈ ದುರ್ಘಟನೆ ನಡೆದಿದೆ. ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಅಪಘಾತದ ರಭಸಕ್ಕೆ ಬೈಕ್‌ಗಳು ಜಖಂಗೊಂಡಿವೆ.
ಸಕ್ರೇಬೈಲಿನಲ್ಲಿ ಬೈಕ್, ಕಾರಿಗೆ ಗುದ್ದಿದ ಲಾರಿ ಅಪಘಾತದ ವಿಡಿಯೋ ವೈರಲ್
ಮೃತಪಟ್ಟವರನ್ನು ಆದಿಲ್ ಅಯಾನ್ (16), ಸಯ್ಯದ್ ರಿಜಾಜ್ (22), ಮಾಜ್ ಅಹಮ್ಮದ್ ಖಾನ್ (17) ಎಂದು ಗುರುತಿಸಲಾಗಿದೆ. ಮೂವರು ಸ್ಥಳ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಯುವಕರು ಹೆಲ್ಮೆಟ್ ಸಹ ಧರಿಸದಿದ್ದರಿಂದ, ರಸ್ತೆಯ ತುಂಬಾ ರಕ್ತ ಚೆಲ್ಲಿತ್ತು.
19 ಸಾವಿರ ದಂಡ ಕಟ್ಟಿದ ಬೆಂಗಳೂರು ಬೈಕ್ ಸವಾರ!
ಮೃತರೆಲ್ಲರೂ ನಾಗವಾರ ಸಮೀಪದ ಗೋವಿಂದಪುರ ನಿವಾಸಿಗಳು ಎಂದು ತಿಳಿದುಬಂದಿದೆ. ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬೈಕ್ ಇಲ್ಲ ಅಂತ ಲೇವಡಿ ಮಾಡಿದ ಪ್ರೇಯಸಿ: ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಿಯಕರ!
ಸ್ಥಳೀಯರ ಸಹಕಾರದಿಂದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರವಾದ ಕಾರಣ ಯುವಕರು ಬೈಕ್ ತೆಗೆದುಕೊಂಡು ಖಾಲಿ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.