20 ಸಾವಿರಕ್ಕೆ ಕೈಯೊಡ್ಡಿ ಜೈಲು ಸೇರಿದ ಚಿಕ್ಕಜಾಲ ಸಂಚಾರಿ ಲೇಡಿ ಇನ್‌ಸ್ಪೆಕ್ಟರ್
ಬೆಂಗಳೂರು, ಏ.20: ರಸ್ತೆ ಅಗೆಯುವ ಕೆಲಸಕ್ಕೆ ಗುತ್ತಿಗೆದಾರರಿಂದ ಲಂಚ ಪಡೆಯಲು ಹೋಗಿ ಬೆಂಗಳೂರು ಸಂಚಾರ ಪೊಲೀಸ್ ಠಾಣೆ ಮಹಿಳಾ ಇನ್‌ಸ್ಪೆಕ್ಟರ್ ಜೈಲು ಸೇರಿದ್ದಾರೆ.
ಗ್ಯಾಸ್ ಅಳವಡಿಸಲು ರಸ್ತೆ ಅಗೆಯುತ್ತಿದ್ದ ಗುತ್ತಿಗೆದಾರರಿಂದ 20 ಸಾವಿರ ರೂ. ಲಂಚ ಸ್ವೀಕರಿಸಿ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯ ಮಹಿಳಾ ಇನ್‌ಸ್ಪೆಕ್ಟರ್ ಹಂಸವೇಣಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.
ಎಸಿಬಿ ಅಧಿಕಾರಿಗಳು ಲಂಚದ ಸಮೇತ ವಶಕ್ಕೆ ಪಡೆಯುತ್ತಿದ್ದಂತೆ, ಎಸಿಬಿ ಪೊಲೀಸರ ತನಿಖೆಗೆ ಸಹಕರಿಸದೇ ಪೋನ್ ಮಾಡಿ ಪ್ರಭಾವ ಬೀರಲು ಯತ್ನಿಸಿದ್ದಾಳೆ. ಸಾ. ಐದು ನಿಮಿಷ ಟೈಮ್ ಕೊಡಿ. ನನ್ನ ಗಂಡನಿಗೆ ಒಂದು ಪೋನ್ ಮಾಡ್ತೀನಿ ಎಂದು ತನಿಖೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಯಾವುದಕ್ಕೂ ಕ್ಯಾರೆ ಎನ್ನದೇ ಎಸಿಬಿ ಅಧಿಕಾರಿಗಳ ತಂಡ ಆರೋಪಿ ಇನ್‌ಸ್ಪೆಕ್ಟರ್ ಹಂಸವೇಣಿಯನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗ್ಯಾಸ್ ಲೈನ್ ಅಳವಡಿಸಲು ಗೇಲ್ ಅಧೀನದಲ್ಲಿ ಗುತ್ತಿಗೆದಾರರು ರಸ್ತೆ ಅಗೆಯುತ್ತಿದ್ದರು. ಇದಕ್ಕೆ ಅಡ್ಡಿ ಪಡಿಸಿದ್ದ ಸಂಚಾರಿ ಇನ್‌ಸ್ಪೆಕ್ಟರ್ ಹಂಸವೇಣಿ, ರಸ್ತೆ ಅಗೆಯಲು ಅನುಮತಿ ಕೊಡಬೇಕಾದರೆ ಲಂಚ ಕೊಡುವಂತೆ ಪೀಡಿಸಿದ್ದಾಳೆ. ಇದರಿಂದ ಬೇಸತ್ತ ಅಲ್ಲಿನ ಸಿಬ್ಬಂದಿ ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದಾರೆ.

Recommended Video
ಬುಧವಾರ 20 ಸಾವಿರ ರೂ. ಲಂಚ ಸ್ವೀಕರಿಸಿ ಅದನ್ನು ಎತ್ತಿಡಲು ಹೋಗುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲಂಚದ ಸಮೇತ ಬಂಧಿಸಿದ್ದಾರೆ. ಅರೋಪಿತ ಇನ್ಸ್‌ಪೆಕ್ಟರ್ ವಿರುದ್ಧ ಎಸಿಬಿ ಬೆಂಗಳೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.












Click it and Unblock the Notifications